ನೆಹೆಮೀಯ 3:25 - ಕನ್ನಡ ಸತ್ಯವೇದವು C.L. Bible (BSI)25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗ ಪೆದಾಯನೂ ಸರಿಪಡಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಸೆರೆಮನೆಯ ಅಂಗಳದ ಹತ್ತಿರವಿದ್ದ ಅರಸನ ಅರಮನೆಯ ಮೇಲಿನ ಗೋಡೆಯನ್ನು ಮೀರಿನಿಂತಿರುವ ಮೂಲೆ ಗೋಪುರದ ಎದುರಿನ ಭಾಗವನ್ನು ಊಜೈಯನ ಮಗನಾದ ಪಾಲಾಲನೂ. ಇವನ ನಂತರ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆ ಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ, ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು. ಅಧ್ಯಾಯವನ್ನು ನೋಡಿ |
ಇವರ ಮುಂದಾಳತ್ವದಲ್ಲಿ ಈ ಕೆಳಕಂಡವರು ಹಿಂದಿರುಗಿ ಬಂದು ಜೆರುಸಲೇಮಿನಲ್ಲೂ ಜುದೇಯ ನಾಡಿನ ತಮ್ಮ ಸ್ವಂತ ಪಟ್ಟಣಗಳಲ್ಲೂ ನೆಲಸಿದರು: ಪರೋಷಿನವರು 2172 ಶೆಫಟ್ಯನವರು 372 ಅರಹನವರು 775 ಪಹತ್‍ಮೋವಾಬಿನವರಾದ ಯೋಷೂವ ಮತ್ತು ಯೋವಾಬ್ ಸಂತಾನದವರು 2812 ಎಲಾಮಿನವರು 1254 ಜತ್ತೂವಿನವರು 945 ಜಕ್ಕೈಯವರು 750 ಬಾನೀಯವರು 642 ಬೇಬೈಯವರು 632 ಅಜ್ಗಾದಿನವರು 1222 ಅದೋನೀಕಾಮಿನವರು 666 ಬಿಗ್ವೈಯವರು 2056 ಆದೀನನವರು 454 ಅಟೇರಿನವರಾದ ಹಿಜ್ಕೀಯನ ಸಂತಾನದವರು 98 ಬೇಚೈಯವರು 323 ಯೋರನವರು 112 ಹಾಷುಮಿನವರು 223 ಗಿಬ್ಬಾರಿನವರು 95 ಬೇತ್ಲೆಹೇಮಿನವರು 123 ನೆಟೋಫ ಊರಿನವರು 50 ಅನಾತೋತ್ ಊರಿನವರು 128 ಅಜ್ಮಾವತಿನವರು 42 ಕಿರ್ಯತ್ಯಾರೀಮ್ ಕೆಫೀರ ಬೇರೋತ್ ಊರುಗಳವರು 743 ರಾಮಾ, ಗೆಬ ಊರುಗಳವರು 621 ಮಿಕ್ಮಾಸಿನವರು 122 ಬೇತೇಲ್ ಅಯಿ ಎಂಬ ಊರುಗಳವರು 223 ನೆಬೋವಿನವರು 52 ಮಗ್ಬೀಷಿನವರು 156 ಬೇರೆ ಏಲಾಮಿನವರು 1254 ಹಾರಿಮನವರು 120 ಲೋದ್, ಹಾದೀದ್, ಓನೋ ಎಂಬ ಊರುಗಳವರು 725 ಜೆರಿಕೋವಿನವರು 345 ಸೆನಾಹನವರು 3630 ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973 ಇಮ್ಮೇರವರು 1052 ಪಷ್ಹೂರನವರು 1247 ಹಾರಿಮನವರು 1017 ಲೇವಿಯರಲ್ಲಿ - ಹೋದ್ಯನವರಾದ ಯೇಷೂವ, ಕದ್ಮೀಯೇಲ್ ಇವನ ಸಂತಾನದವರು 74 ಗಾಯಕರಲ್ಲಿ - ಆಸಾಫ್ಯರು 128 ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ, ಇವರ ಸಂತಾನದವರು ಒಟ್ಟು. 139