ನೆಹೆಮೀಯ 13:22 - ಕನ್ನಡ ಸತ್ಯವೇದವು C.L. Bible (BSI)22 ಅವರು ಅಂದಿನಿಂದ ಸಬ್ಬತ್‍ದಿನದಂದು ಪುನಃ ಬರಲಿಲ್ಲ. ಆಮೇಲೆ ನಾನು ಲೇವಿಯರಿಗೆ, “ಸಬ್ಬತ್‍ದಿನವನ್ನು ಪರಿಶುದ್ಧದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು,” ಎಂದು ಆಜ್ಞಾಪಿಸಿದೆ. “ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು ನಿಮ್ಮ ಮಹಾಕೃಪೆಗನುಸಾರ ನನ್ನನ್ನು ಕನಿಕರಿಸಿರಿ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆ ಮೇಲೆ ನಾನು ಲೇವಿಯರಿಗೆ, “ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು” ಎಂದು ಆಜ್ಞಾಪಿಸಿದೆನು. ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು, ನಿನ್ನ ಮಹಾಕೃಪೆಗೆ ಅನುಸಾರವಾಗಿ ನನ್ನನ್ನು ಕನಿಕರಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆಮೇಲೆ ನಾನು ಲೇವಿಯರಿಗೆ - ಸಬ್ಬತ್‍ದಿನವನ್ನು ಪರಿಶುದ್ಧದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಬಂದು ಬಾಗಲುಗಳನ್ನು ಕಾಯಬೇಕು ಎಂದು ಆಜ್ಞಾಪಿಸಿದೆನು. ನನ್ನ ದೇವರೇ ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು ನಿನ್ನ ಮಹಾಕೃಪೆಗನುಸಾರವಾಗಿ ನನ್ನನ್ನು ಕನಿಕರಿಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಇದಾದ ಬಳಿಕ ತಮ್ಮನ್ನು ಶುದ್ಧಪಡಿಸಿಕೊಳ್ಳಲು ಲೇವಿಯರಿಗೆ ಆಜ್ಞಾಪಿಸಿದೆನು. ಅವರು ಶುದ್ಧಪಡಿಸಿಕೊಂಡ ಬಳಿಕ ಬಾಗಿಲುಗಳನ್ನು ಕಾಯಲು ಅವರನ್ನು ಕಳುಹಿಸಿದೆನು. ಯಾಕೆಂದರೆ ಸಬ್ಬತ್‌ದಿನವು ಪವಿತ್ರ ದಿನವೆಂದು ಎಲ್ಲರೂ ಆಚರಿಸುವಂತೆ ಹೀಗೆ ಮಾಡಿದೆನು. ದೇವರೇ, ನನ್ನ ಈ ಕಾರ್ಯವನ್ನು ನಿನ್ನ ನೆನಪಿನಲ್ಲಿಟ್ಟುಕೋ. ನನ್ನ ಮೇಲೆ ದಯವಿಟ್ಟು ನಿನ್ನ ಪ್ರೀತಿಯನ್ನು ತೋರಿಸು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ. ಅಧ್ಯಾಯವನ್ನು ನೋಡಿ |