ಜೆರುಸಲೇಮಿನಲ್ಲಿ ನೆಲೆಸಿದ ಯಾಜಕರು: ಯೆದಾಯ, ಯೆಹೋಯಾರೀಬ್, ಯಾಕೀನ್, ಹಿಲ್ಕೀಯನ ಮಗ ಅಜರ್ಯ - ಇವನು ದೇವಾಲಯದ ಪ್ರಮುಖ ಅಧಿಕಾರಿ. ಇವನ ಪೂರ್ವಜರಲ್ಲಿ ಮೆಷುಲ್ಲಾಮ, ಚಾದೋಕ್, ಮೆರಾಯೋತ್ ಮತ್ತು ಅಹೀಚೂಬ ಎಂಬವರು ಇದ್ದರು. ಯೆಹೋರಾಮನ ಮಗ ಅದಾಯ: ಇವನ ಪೂರ್ವಜರಲ್ಲಿ ಪಶ್ಹೂರ, ಮಲ್ಕೀಯ ಎಂಬವರಿದ್ದರು. ಅದೀಯೋಲನ ಮಗ ಮಾಸೈ: ಇವನ ಪೂರ್ವಜರಲ್ಲಿ ಯಹ್ಜೇರ, ಮೆಷುಲ್ಲಾಮ, ಮೆಷಿಲ್ಲೇಮೋತ, ಇಮ್ಮೇರ ಎಂಬವರಿದ್ದರು.