ನೆಹೆಮೀಯ 10:37 - ಕನ್ನಡ ಸತ್ಯವೇದವು C.L. Bible (BSI)37 ನಾವು ದೇವರಿಗಾಗಿ ಪ್ರತ್ಯೇಕಿಸಿಡತಕ್ಕ ಪ್ರಥಮ ಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ, ಮೊದಲಾದವುಗಳನ್ನು ಯಾಜಕರಿಗಾಗಿ ನಮ್ಮ ದೇವಾಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ನಮ್ಮ ಭೂಮಿಯ ಆದಾಯದ ದಶಮಾಂಶವು ಲೇವಿಯರದಾಗಬೇಕು; ಲೇವಿಯರು ತಾವೇ ಬಂದು ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಕೂಡಿಸಬೇಕು; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ನಾವು ದೇವರಿಗಾಗಿ ಪ್ರತ್ಯೇಕಿಸಿ ಇಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕ ಸೇವೆಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದು ಇಡುವೆವು. ನಮ್ಮ ಭೂಮಿಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಿರುತ್ತದೆ. ಲೇವಿಯರು ತಾವೇ ಬಂದು, ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಶೇಖರಿಸಿಕೊಳ್ಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ನಾವು ದೇವರಿಗಾಗಿ ಪ್ರತ್ಯೇಕಿಸಿಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕರಿಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವೆವು; ನಮ್ಮ ಭೂವಿುಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಬೇಕು; ಲೇವಿಯರು ತಾವೇ ಬಂದು ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಕೂಡಿಸಬೇಕು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 “ಪ್ರಥಮ ಫಲದ ಹಿಟ್ಟನ್ನು, ಪ್ರಥಮ ಫಲದ ಹಣ್ಣುಗಳನ್ನು, ಹೊಸ ದ್ರಾಕ್ಷಾರಸವನ್ನು, ಹೊಸ ಎಣ್ಣೆಯನ್ನು ಯಾಜಕರಿಗೋಸ್ಕರವಾಗಿ ದೇವಾಲಯದ ಉಗ್ರಾಣಗಳಲ್ಲಿ ತಂದಿಡುವೆವು. ನಮ್ಮ ಬೆಳೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ತಂದುಕೊಡುವೆವು. ನಾವು ಕೆಲಸ ಮಾಡುತ್ತಿರುವ ಊರುಗಳಿಂದ ಲೇವಿಯರು ಇವುಗಳನ್ನು ತೆಗೆದುಕೊಳ್ಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನು ನಮ್ಮ ಕಾಣಿಕೆಗಳನ್ನೂ, ಸಕಲ ಮರಗಳ ಫಲವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ಲೇವಿಯರು ಒಕ್ಕಲುತನವಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವುದಕ್ಕೂ ಪ್ರಮಾಣ ಮಾಡಿದೆವು. ಅಧ್ಯಾಯವನ್ನು ನೋಡಿ |