Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 10:32 - ಕನ್ನಡ ಸತ್ಯವೇದವು C.L. Bible (BSI)

32 ವರ್ಷಕ್ಕೆ ಐದು ಗ್ರಾಂ ಬೆಳ್ಳಿಯನ್ನು ದೇವಾಲಯ ಸೇವೆಗಾಗಿ ಕೊಡಬೇಕೆಂಬ ಕರ್ತವ್ಯವನ್ನು ವಹಿಸಿಕೊಳ್ಳುತ್ತೇವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ವರ್ಷಕ್ಕೆ ಒಂದು ಶೆಕೆಲಿನ ಮೂರನೆಯ ಒಂದು ಭಾಗವನ್ನು ದೇವಾಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ವರುಷಕ್ಕೆ ಒಂದು ಶೆಕೆಲಿನ ಮೂರನೆಯ ಭಾಗವನ್ನು ದೇವಾಲಯ ಸೇವೆಗಾಗಿ ಕೊಡಬೇಕೆಂಬ ಕರ್ತವ್ಯವನ್ನು ವಹಿಸಿಕೊಳ್ಳುತ್ತೇವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 “ದೇವಾಲಯವನ್ನು ನಡಿಸುವ ಖರ್ಚಿನ ಜವಾಬ್ದಾರಿಕೆಯನ್ನು ನಾವು ಹೊರುತ್ತೇವೆ. ನಾವು ಒಂದು ಬೆಳ್ಳಿನಾಣ್ಯವನ್ನು ಪ್ರತಿವರ್ಷ ನಮ್ಮ ದೇವರಿಗೆ ಕಾಣಿಕೆ ಕೊಡುತ್ತೇವೆ. ಇದು ದೇವಾಲಯದ ಕೆಲಸಕಾರ್ಯಗಳಿಗೆ ಉಪಯೋಗಿಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ವರ್ಷಕ್ಕೆ 4 ಗ್ರಾಂ ಬೆಳ್ಳಿಯನ್ನು ನಮ್ಮ ದೇವರ ಆಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 10:32
12 ತಿಳಿವುಗಳ ಹೋಲಿಕೆ  

ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”


ಒಬ್ಬನು ಕೊಡುವುದಕ್ಕೆ ಮನಸ್ಸುಳ್ಳವನಾಗಿದ್ದರೆ, ಅವನು ತನ್ನಲ್ಲಿ ಇರುವುದಕ್ಕೆ ತಕ್ಕಂತೆ ಕೊಟ್ಟರೆ ಸಾಕು. ನಿಮ್ಮಲ್ಲಿ ಇಲ್ಲದ್ದನ್ನು ದೇವರು ಬಯಸುವುದಿಲ್ಲ.


ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನ ಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು.


“ಆದರೆ ಏಳನೆಯ ವರ್ಷ ಆ ಭೂಮಿಯನ್ನು ಬೀಳುಬಿಡಿ. ನಿಮ್ಮ ನಾಡಿನ ಬಡವರು ಅದರಲ್ಲಿ ತಾನಾಗಿ ಬೆಳೆಯುವುದನ್ನು ತಿನ್ನಲಿ. ಮಿಕ್ಕದ್ದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳಲ್ಲಿ ಹಾಗೂ ಎಣ್ಣೇ ಮರ ತೋಪುಗಳ ವಿಷಯದಲ್ಲೂ ಅದೇ ರೀತಿಯಾಗಿ ಮಾಡಿ.


ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.


ನಾನು, ನನ್ನ ಸಹೋದರರು, ಸೇವಕರು ಸಹ, ಅವರಿಗೆ ಹಣವನ್ನೂ ಧಾನ್ಯವನ್ನೂ ಬಡ್ಡಿಗೆ ಕೊಟ್ಟಿದ್ದೇವೆ. ಬಡ್ಡಿ ತೆಗೆದುಕೊಳ್ಳುವ ಪದ್ಧತಿಯನ್ನು ಬಿಟ್ಟುಬಿಡೋಣ.


ಕಲಿಸಿದಿರಿ ಅವರಿಗೆ ಆಜ್ಞಾವಿಧಿ ಧರ್ಮಗಳನು ಪ್ರಕಟಿಸಿದಿರಿ ನಿಮಗೆ ಮೀಸಲಾದ ವಿಶ್ರಾಂತಿ ದಿನವನು; ನಿಮ್ಮ ದಾಸ ಮೋಶೆಯ ಮುಖಾಂತರ ಸಾಧಿಸಿದಿರಿದನು.


ಆ ಕಾಲದಲ್ಲಿ, ಜನರು ಸಬ್ಬತ್‍ದಿನ ಜುದೇಯನಾಡಿನಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನು ಕಂಡೆ; ಅಂತೆಯೇ ಕಣದ ಕಾಳನ್ನು ಕೂಡಿಸಿ ಆ ಕಾಳು, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು, ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಜೆರುಸಲೇಮಿಗೆ ತರುವುದನ್ನು ಗಮನಿಸಿದೆ. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ಅವರನ್ನು ಗದರಿಸಿದೆ.


ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದಲೆ ನಮ್ಮ ದೇವರು ಎಲ್ಲಾ ಕೇಡನ್ನು ನಮ್ಮ ಮೇಲೂ ನಮ್ಮ ಪಟ್ಟಣದ ಮೇಲೂ ಬರಮಾಡಿದ್ದಾರೆ. ಹೀಗಿರಲಾಗಿ, ನೀವೂ ಸಬ್ಬತ್‍ದಿನವನ್ನು ಅಶುದ್ಧಮಾಡಿ ಇಸ್ರಯೇಲರ ಮೇಲಿದ್ದ ದೇವಕೋಪವನ್ನು ಹೆಚ್ಚಿಸಬೇಡಿ,” ಎಂದು ಹೇಳಿ ಅವರನ್ನು ಗದರಿಸಿದೆ.


ಕಡೆಗೆ ನಾನು ಅವರನ್ನು, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಮತ್ತೆ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು,” ಎಂದು ಗದರಿಸಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು