Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 1:4 - ಕನ್ನಡ ಸತ್ಯವೇದವು C.L. Bible (BSI)

4 ನಾನು ಈ ಸಮಾಚಾರವನ್ನು ಕೇಳಿದಾಗ ನೆಲಕಚ್ಚಿ ಕುಳಿತು ಅತ್ತೆ; ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನು ಈ ವರ್ತಮಾನವನ್ನು ಕೇಳಿದಾಗ ನೆಲದ ಮೇಲೆ ಕೂತುಕೊಂಡು ಅತ್ತೆನು; ಕೆಲವು ದಿವಸಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಾನು ಈ ಸಮಾಚಾರವನ್ನು ಕೇಳಿದಾಗ, ನೆಲದ ಮೇಲೆ ಕೂತುಕೊಂಡು ಅತ್ತೆನು. ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 1:4
22 ತಿಳಿವುಗಳ ಹೋಲಿಕೆ  

ಉಪವಾಸವಿದ್ದು, ಗೋಣಿತಟ್ಟು ಸುತ್ತಿಕೊಂಡು, ಬೂದಿ ಬಳಿದುಕೊಂಡು, ಸರ್ವೇಶ್ವರನಾದ ದೇವರ ಕಡೆಗೆ ಮುಖವೆತ್ತಿ, ಪ್ರಾರ್ಥನೆ-ವಿಜ್ಞಾಪನೆಗಳಲ್ಲಿ ನಿತರನಾದೆ.


ಬಾಬಿಲೋನಿನ ನದಿಗಳ ತೀರದಲಿ ಕುಳಿತು I ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು II


ಎಜ್ರನು ದೇವಾಲಯದ ಮುಂದೆ ಹೀಗೆ ಅಡ್ಡಬಿದ್ದು ಅಳುತ್ತಾ, ವಿಜ್ಞಾಪನೆಯನ್ನೂ ಪಾಪ ನಿವೇದನೆಯನ್ನೂ ಮಾಡುತ್ತಿರುವಾಗ ಇಸ್ರಯೇಲರ ಗಂಡಸರು, ಹೆಂಗಸರು ಹಾಗು ಮಕ್ಕಳು ಮಹಾಸಮೂಹವಾಗಿ ಅವನ ಬಳಿಗೆ ಬಂದು ಕೂಡಿದರು. ಜನರೆಲ್ಲರು ಅಲ್ಲಿ ಬಹಳವಾಗಿ ದುಃಖಿಸತೊಡಗಿದರು.


ಆಗ ರಾಜ, “ನಿನ್ನ ಆಶೆಯೇನು?,” ಎಂದು ಕೇಳಿದನು. ನಾನು ಪರಲೋಕ ದೇವರನ್ನು ಪ್ರಾರ್ಥಿಸಿ, ಅವನಿಗೆ, “ರಾಜರ ಚಿತ್ತವಿರುವುದಾದರೆ,


ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ.


ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.


“ನಾವು ಬಾಬಿಲೋನಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರುವಂತೆ ಬೇಡಿಕೊಳ್ಳೋಣ,” ಎಂದು ಹೇಳಿದನು.


ಈ ಸಮಾಚಾರವನ್ನು ಕೇಳಿದೊಡನೆ ನಾನು ಸಿಟ್ಟಿನಿಂದ ಬಟ್ಟೆಗಳನ್ನೂ ಮೇಲಂಗಿಯನ್ನೂ ಹರಿದುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆ.


ಅದಕ್ಕೆ ಯೋನನು: “ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತನು ನಾನು,” ಎಂದು ಉತ್ತರಿಸಿದನು.


ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ.


ಪರಲೋಕದಲ್ಲಿರುವ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.


ಆ ದಿನಗಳಲ್ಲಿ ದಾನಿಯೇಲನಾದ ನಾನು ಮೂರು ವಾರ ಒಂದು ವ್ರತವನ್ನು ಕೈಗೊಂಡಿದ್ದೆ.


‘ನಾನು ಈ ನಾಡನ್ನೂ ನಿವಾಸಿಗಳನ್ನೂ ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುದನ್ನು ನೀನು ಕೇಳಿದಾಗ, ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.


ಅವನು 2:2 ಮೀಟರ್ ಉದ್ದ, 2:2 ಮೀಟರ್ ಅಗಲ, 1:3 ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ ಪ್ರಾಕಾರದ ಮಧ್ಯದಲ್ಲಿರಿಸಿದನು.ಇಸ್ರಯೇಲ್ ಸರ್ವಸಮೂಹದ ಎದುರಿನಲ್ಲಿ ಅದನ್ನು ಹತ್ತಿ ಅದರ ಮೇಲೆ ಮೊಣಕಾಲೂರಿಕೊಂಡು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು:


ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ; ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ; ‘ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು’ ಎಂದು ಅವರು ಆಜ್ಞಾಪಿಸಿದ್ದಾರೆ.


ಆಮೇಲೆ ದೇಹದಂಡನೆ ಮಾಡುವುದನ್ನು ಬಿಟ್ಟು, ಹರಿದ ಬಟ್ಟೆವಸ್ತ್ರಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ, ನನ್ನ ದೇವರಾದ ಸರ್ವೇಶ್ವರನ ಕಡೆಗೆ ಕೈಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದೆ:


ನಾನು ಅವರಿಗೆ, “ಪರಲೋಕದೇವರು ನಮಗೆ ಸಫಲತೆಯನ್ನು ಅನುಗ್ರಹಿಸುವರು. ಆದುದರಿಂದ ಅವರ ದಾಸರಾದ ನಾವು ಕೋಟೆಯ ಗೋಡೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಜೆರುಸಲೇಮಿನಲ್ಲಿ ಪಾಲಾಗಲಿ, ಹಕ್ಕಾಗಲಿ, ಸ್ಮಾರಕವಾಗಲಿ ಇರುವುದಿಲ್ಲ,” ಎಂದು ಉತ್ತರಕೊಟ್ಟೆ.


ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು I ಭಯಪಡುವರು ನಿನ್ನ ಪ್ರತಾಪಕೆ ಭೂರಾಜರುಗಳು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು