Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 3:1 - ಕನ್ನಡ ಸತ್ಯವೇದವು C.L. Bible (BSI)

1 ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅಯ್ಯೋ, ರಕ್ತಮಯ ಪಟ್ಟಣವೆ ನಿನ್ನ ಗತಿಯನ್ನು ಏನೆಂದು ಹೇಳಲಿ! ಅದು ಸುಳ್ಳಿನಿಂದಲೂ, ಸುಲಿಗೆಯಿಂದಲೂ ತುಂಬಿದೆ; ಕೊಳ್ಳೆಹೊಡೆಯುವುದನ್ನು ಬಿಡುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅಯ್ಯೋ, ರಕ್ತಮಯಪುರಿಯ ಗತಿಯನ್ನು ಏನೆಂದು ಹೇಳಲಿ! ಅದು ಸುಳ್ಳಿನಿಂದಲೂ ಸುಲಿಗೆಯಿಂದಲೂ ತುಂಬಿದೆ; ಕೊಳ್ಳೆಹೊಡೆಯುವದನ್ನು ಬಿಡುವದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಕೊಲೆಗಡುಕರ ಆ ಪಟ್ಟಣಕ್ಕೆ ಬಹಳ ಕೆಡುಕು ಉಂಟಾಗುವದು. ನಿನೆವೆಯು ಸುಳ್ಳಿನಿಂದ ತುಂಬಿದ ನಗರ. ಬೇರೆ ರಾಜ್ಯಗಳಿಂದ ದೋಚಿದ ವಸ್ತುಗಳಿಂದ ತುಂಬಿದ ನಗರ. ಆ ಪಟ್ಟಣವು ಕೊಲ್ಲುವುದನ್ನೂ ಲೂಟಿ ಮಾಡುವುದನ್ನೂ ನಿಲ್ಲಿಸುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ರಕ್ತಮಯ ಪಟ್ಟಣಕ್ಕೆ ಕಷ್ಟ, ಅದೆಲ್ಲಾ ಸುಳ್ಳಿನಿಂದಲೂ, ಕಳ್ಳತನದಿಂದಲೂ ತುಂಬಿದೆ, ಕೊಳ್ಳೆಯನ್ನೂ ಬಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 3:1
11 ತಿಳಿವುಗಳ ಹೋಲಿಕೆ  

ನರಹತ್ಯೆಯಿಂದ ನಗರಗಳನ್ನು ನಿರ್ಮಿಸುವವನಿಗೆ ಧಿಕ್ಕಾರ! ಅನ್ಯಾಯವಾದ ಅಸ್ತಿವಾರದ ಮೇಲೆ ಊರನ್ನು ಕಟ್ಟುವವನಿಗೆ ಧಿಕ್ಕಾರ!


ಸುಳ್ಳುಸಾಕ್ಷಿ, ನರಹತ್ಯೆ, ಕಳ್ಳತನ, ವ್ಯಭಿಚಾರ ಇವೆಲ್ಲ ತುಂಬಿಕೊಂಡಿವೆ; ದೊಂಬಿದಾಂಧಲೆಗಳು ನಡೆಯುತ್ತಿವೆ, ನಾಡೆಲ್ಲ ರಕ್ತಮಯವಾಗಿದೆ.


ಅಲ್ಲಿ ಸಿಂಹಬೇಟೆಯನ್ನು ಸೀಳಿಹಾಕುತ್ತಿತ್ತು ತನ್ನ ಮರಿಗಳಿಗಾಗಿ; ಕೊರಳುಹಿಡಿದು ಪ್ರಾಣಿಗಳನ್ನು ಹೊಸಕುತ್ತಿತ್ತು ಸಿಂಹಿಣಿಗಳಿಗಾಗಿ; ಗವಿಗಳನ್ನು ಬೇಟೆಯಿಂದ, ಹಕ್ಕೆಗಳನ್ನು ಮಾಂಸದಿಂದ ತುಂಬಿಸುತ್ತಿತ್ತು ಅವುಗಳಿಗಾಗಿ.


ಕೊಟ್ಟವರಾರು ಯಕೋಬನ್ನು ಸುಲಿಗೆಗೆ, ಇಸ್ರಯೇಲನ್ನು ಕೊಳ್ಳೆಗೆ? ಯಾವ ಸರ್ವೇಶ್ವರನಿಗೆ ದ್ರೋಹಮಾಡಿದ್ದೇವೋ ಆತನೇ ಅಲ್ಲವೇ? ಜನರು ಆತನ ಮಾರ್ಗದಲ್ಲಿ ನಡೆಯದೇ, ಆತನ ಉಪದೇಶವನ್ನು ಕೇಳದೆಹೋದರಲ್ಲವೆ?


ಬೈಗಿನಲ್ಲಿ ಇಗೋ, ಎಲ್ಲೆಲ್ಲೂ ಭಯ, ಬೆಳಗಾದಾಗ ಅವೆಲ್ಲ ಮಾಯ; ಇದೇ ನಮ್ಮನ್ನು ಸೂರೆಮಾಡುವವರ ಗತಿ, ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು !.


ಇನ್ನಿಲ್ಲ ಮದ್ಯಪಾನ ಗೀತಾಗಾನ, ಕಹಿಪಾನವಾಯಿತು ಕುಡುಕನಿಗೆ ಸುರಾಪಾನ.


ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II


ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ: “ನಿನಗೆ ವಿರುದ್ಧವಾಗಿದ್ದೇನೆ ನಾನು; ಸುಟ್ಟು ಭಸ್ಮಮಾಡುವೆ ನಿನ್ನ ರಥಗಳನು; ಸಂಹರಿಸಿಬಿಡುವೆನು ನಿನ್ನ ಯುವಸಿಂಹಗಳನು; ನಿನಗೆ ಜಗದಲ್ಲೆಲ್ಲ ಬೇಟೆ ಸಿಗದಂತೆ ಮಾಡುವೆನು; ಯಾರೂ ಕೇಳರು ನಿನ್ನ ರಾಯಭಾರಿಗಳ ಮಾತನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು