ನಹೂಮ 2:3 - ಕನ್ನಡ ಸತ್ಯವೇದವು C.L. Bible (BSI)3 ಶತ್ರುವಿನ ಶೂರರ ಗುರಾಣಿ ರಕ್ತಗೆಂಪು, ಪರಾಕ್ರಮಿಗಳ ಉಡುಪು ಕಡುಗೆಂಪು. ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು. ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಶತ್ರುವಿನ ಶೂರರ ಗುರಾಣಿಯು ರಕ್ತವರ್ಣವಾಗಿದೆ, ಪರಾಕ್ರಮಿಗಳ ಉಡುಪುಗಳು ಕಿರಿಮಂಜಿನಂತೆ; ಅವನ ಸಿದ್ಧತೆಯ ದಿನಗಳಲ್ಲಿ ಸೈಪ್ರಸ್ ಮರದದಿಂದ ಮಾಡಿದ ಈಟಿಗಳು ಝಳಪಿಸುತ್ತವೆ ಮತ್ತು ಪಟ್ಟಣದಲ್ಲಿ ಅವರು ನಡೆದು ಹೋಗುವಾಗ ಅವರ ರಥಗಳ ಉಕ್ಕು ಥಳಥಳಿಸುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಶತ್ರುವಿನ ಶೂರರ ಗುರಾಣಿಯು ರಕ್ತವರ್ಣವಾಗಿದೆ, ಪರಾಕ್ರವಿುಗಳ ಉಡುಪು ಕಿರಿಮಂಜಿಯದು; ಅವನ ಸನ್ನಾಹದಿನದಲ್ಲಿ ರಥಗಳ ಉಕ್ಕು ಥಳಥಳಿಸುತ್ತದೆ, ಈಟಿಗಳು ಝಳಪಿಸುತ್ತವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಆ ಸೈನಿಕರ ಗುರಾಣಿಗಳು ಕೆಂಪಗಿವೆ. ಅವರ ಸಮವಸ್ತ್ರಗಳು ಕೆಂಪುಬಣ್ಣದಿಂದ ಹೊಳೆಯುತ್ತಿವೆ. ಅವರ ರಥಗಳು ಯುದ್ಧಕ್ಕಾಗಿ ಸಾಲುಗಟ್ಟಿ ನಿಂತಿವೆ ಮತ್ತು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿವೆ. ಅವರ ಭರ್ಜಿಗಳು ಎತ್ತಲ್ಪಟ್ಟಿವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಸೈನಿಕರ ಗುರಾಣಿಗಳು ಕೆಂಪಾಗಿವೆ; ಯುದ್ಧವೀರರು ರಕ್ತವರ್ಣದ ಬಟ್ಟೆ ಧರಿಸಿದ್ದಾರೆ; ಆತನು ಸಿದ್ಧಮಾಡುವ ದಿವಸದಲ್ಲಿ, ರಥಗಳ ಉಕ್ಕು ಥಳಥಳಿಸುವುದು, ತುರಾಯಿ ಮರದಿಂದ ಮಾಡಿದ ಈಟಿಗಳು ಝಳಪಿಸುವುವು; ಅಧ್ಯಾಯವನ್ನು ನೋಡಿ |