Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 1:9 - ಕನ್ನಡ ಸತ್ಯವೇದವು C.L. Bible (BSI)

9 ಸರ್ವೇಶ್ವರನ ವಿರುದ್ಧ ಮಾಡಬಲ್ಲಿರಾ ನೀವು ಕುಯುಕ್ತಿ? ಮರಳಿ ತಲೆಯೆತ್ತದಂತೆ ನಾಶಮಾಡುವನು ನಿಮ್ಮನು ಪೂರ್ತಿಯಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನೀವು ಯೆಹೋವನಿಗೆ ವಿರುದ್ಧವಾಗಿ ಯಾವರೀತಿಯ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಎರಡನೆಯ ಸಾರಿ ಅಪಾಯವು ತಲೆ ಎತ್ತದಂತೆ ಪೂರ್ಣವಾಗಿ ನಿಮ್ಮನ್ನು ನಾಶಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನೀವು ಯೆಹೋವನಿಗೆ ವಿರುದ್ಧವಾಗಿ ಯಾವ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಪೂರಾ ಹಾಳುಮಾಡುವನು; ಅಪಾಯವು ಎರಡನೆಯ ಸಲ ಉಂಟಾಗಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೋವನಿಗೆ ವಿರುದ್ಧವಾಗಿ ಏಕೆ ಯೋಜನೆ ಹಾಕುತ್ತೀರಿ? ನೀವು ಯಾವ ಕುಯುಕ್ತಿಯನ್ನೂ ಮಾಡದ ಹಾಗೆ ಆತನು ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೆಹೋವ ದೇವರಿಗೆ ವಿರೋಧವಾಗಿ ಅವರು ಏನೇನು ಯೋಚಿಸಿರುವರೋ, ಅದನ್ನು ಅವರು ಅಂತ್ಯಗೊಳಿಸುವರು. ತೊಂದರೆಯು ಎರಡು ಸಾರಿ ಏಳದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 1:9
17 ತಿಳಿವುಗಳ ಹೋಲಿಕೆ  

ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು I ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು II


ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II


ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.


ದೈವಜ್ಞಾನಕ್ಕೆ ವಿರುದ್ಧ ತಲೆ ಎತ್ತುವ ದುರ್ಗಗಳನ್ನು ಧ್ವಂಸಮಾಡಬಲ್ಲೆವು. ಮಾನವನ ಪ್ರತಿಯೊಂದು ಆಲೋಚನೆಗಳನ್ನೂ ಬಂಧಿಸಬಲ್ಲೆವು.


ನಿನೆವೆಯೇ, ಸರ್ವೇಶ್ವರಸ್ವಾಮಿಗೆ ವಿರುದ್ಧವಾಗಿ ಕುಯುಕ್ತಿಯನ್ನು ಕಲ್ಪಿಸುವವನು ನಿನ್ನಿಂದಲೆ ಹೊರಟಿದ್ದಾನೆ.


ಅಬೀಷೈಯು ದಾವೀದನಿಗೆ, “ದೇವರು ಈ ದಿನ ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾರೆ; ಅಪ್ಪಣೆಯಾಗಲಿ, ನಾನು ಭರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಕಚ್ಚಿಕೊಳ್ಳುವಂತೆ ತಿವಿಯುತ್ತೇನೆ. ಎರಡನೆಯ ಸಾರಿ ಹೊಡೆಯುವ ಅವಶ್ಯಕತೆ ಇರುವುದಿಲ್ಲ,” ಎಂದು ಹೇಳಿದನು.


ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನ ತಪ್ಪದೆ ನೆರವೇರಿಸುವೆನು.


ಅವನ ಕರುಳೆಲ್ಲಾ ಹೊರಗೆ ಬಂದುವು. ಎರಡನೆಯ ಸಾರಿ ಇರಿಯಬೇಕಾಗಿರಲಿಲ್ಲ; ಅಷ್ಟಕ್ಕೆ ಅವನು ಸತ್ತನು.


ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ.


ಆಮೇಲೆ, ‘ಸರ್ವೇಶ್ವರ ಸ್ವಾಮಿ ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಈ ನಗರ ಹೀಗೆಯೇ ಮುಳುಗುವುದು, ಮತ್ತೆ ಏಳದು,’ ಎಂದು ಹೇಳು.” ಇಲ್ಲಿಗೆ ಯೆರೆಮೀಯನ ಪ್ರವಾದನೆ ಮುಗಿಯಿತು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;


ಆಗ ಸರ್ವೇಶ್ವರನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ ಎಂಬುದು ಎಲ್ಲ ನರಮಾನವರಿಗೂ ತಿಳಿಯುವುದು; ಅದು ಪುನಃ ಒರೆಗೆ ಸೇರದು.


ನಾನೇ ಅವರಿಗೆ ಯುದ್ಧಾಭ್ಯಾಸ ಮಾಡಿಸಿ, ಅವರ ಭುಜಬಲವನ್ನು ಬೆಳೆಸಿದರೂ ನನ್ನ ವಿರುದ್ಧ ಕೇಡನ್ನು ಕಲ್ಪಿಸುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು