Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 9:2 - ಕನ್ನಡ ಸತ್ಯವೇದವು C.L. Bible (BSI)

2 ಆ ನಾಡಿನವರು ಅನಾಕ್ಯರೆಂಬ ಬಲಿಷ್ಠರಾದ ಎತ್ತರದ ಜನರು. ಅವರ ವಿಷಯ ನಿಮಗೆ ತಿಳಿದೇ ಇದೆ; ‘ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ’ ಎಂಬ ಮಾತನ್ನು ಕೇಳಿದ್ದೀರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆ ದೇಶದ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ, “ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ?” ಎಂಬ ಮಾತನ್ನು ಕೇಳಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆ ದೇಶದವರು ಅನಾಕ್ಯರೆಂಬ ಬಲಿಷ್ಠರಾದ ಉನ್ನತಪುರುಷರು. ಅವರ ವಿಷಯ ನಿಮಗೆ ತಿಳಿದೇ ಇದೆ; ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ ಎಂಬ ಮಾತನ್ನು ಕೇಳಿದ್ದೀರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಲ್ಲಿಯ ಜನರು ಬಲಿಷ್ಠರಾಗಿದ್ದಾರೆ. ಅನಾಕ್ಯರು ಎತ್ತರವಾಗಿ ಬೆಳೆದವರು ಎಂದು ಆ ದೇಶಕ್ಕೆ ಹೋದ ಗೂಢಚಾರರು ನಿಮಗೆ ತಿಳಿಸಿದ್ದು ನೆನಪಿಲ್ಲವೇ? ‘ಅನಾಕ್ಯರ ಮುಂದೆ ಯಾರೂ ನಿಲ್ಲಲಾರರು’ ಎಂದು ಅವರು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆ ನಾಡಿನ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ. “ಅನಾಕ್ಯರ ಮುಂದೆ ಯಾರು ನಿಲ್ಲುವರು?” ಎಂಬ ಮಾತನ್ನು ಅವರ ಬಗ್ಗೆ ಕೇಳಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 9:2
16 ತಿಳಿವುಗಳ ಹೋಲಿಕೆ  

ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೆ ಕಟ್ಟಲ್ಪಟ್ಟಿತ್ತು)


ಯಾರು ತಡೆದಾರು ಆತನ ಸಿಟ್ಟಿಗೆ? ಯಾರು ನಿಂತಾರು ಆತನ ರೋಷಾಗ್ನಿಗೆ? ಆತನ ರೌದ್ರ ಜ್ವಾಲಾಪ್ರವಾಹದಂತೆ ಬಂಡೆಗಳು ಪುಡಿಪುಡಿ ಆತನ ಮುಂದೆ.


ದಕ್ಷಿಣದರಾಜನಿಗೆ ವಿರುದ್ಧ ಬರುವವನು ಇಚ್ಛಾನುಸಾರ ವರ್ತಿಸುವನು. ಅವನನ್ನು ಎದುರಿಸಬಲ್ಲವನು ಒಬ್ಬನೂ ಇರನು. ಆ ‘ಚೆಲುವಿನ ನಾಡನ್ನೂ’ ಗೆದ್ದು ಅದನ್ನು ಪೂರ್ತಿಯಾಗಿ ತನ್ನ ಕೈಹಿಡಿತದಲ್ಲಿ ಇಟ್ಟುಕೊಳ್ಳುವನು.


ನಾನು ನೋಡುತ್ತಿದ್ದ ಹಾಗೆ ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿತ್ತು. ಯಾವ ಪ್ರಾಣಿಯೂ ಅದರ ಎದುರಿಗೆ ನಿಲ್ಲಲಾರದೆಹೋಯಿತು. ಅದರ ಕೈಯಿಂದ ಬಿಡಿಸಲು ಯಾವ ಮೃಗಕ್ಕೂ ಶಕ್ತಿಯಿರಲಿಲ್ಲ. ಅದು ಇಷ್ಟಬಂದಂತೆ ನಡೆದು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿತ್ತು.


ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?


ಈ ಜನರ ಅರಸುಗಳು ನಿಮ್ಮ ಕೈಗೆಸಿಕ್ಕುವಂತೆ ಮಾಡುವರು. ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲರು; ಎಲ್ಲರನ್ನು ನೀವು ನಾಶಮಾಡುವಿರಿ.


ಅವರು ಬಲಿಷ್ಠರು, ಬಹುಜನರು ಹಾಗು ಅನಾಕಿಮರಂತೆ ಎತ್ತರದವರೂ ಆಗಿದ್ದರು.


ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು.


ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು.


ಆ ಹುಣ್ಣುಗಳು ಮಂತ್ರವಾದಿಗಳಲ್ಲೂ ಈಜಿಪ್ಟಿನವರೆಲ್ಲರಲ್ಲೂ ಇದ್ದುದರಿಂದ ಆ ಮಂತ್ರವಾದಿಗಳು ಹುಣ್ಣುಗಳ ನಿಮಿತ್ತ ಮೋಶೆಯ ಮುಂದೆ ನಿಲ್ಲಲಾರದೆ ಹೋದರು.


ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಠರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ.


ಅದೇ ಕಾಲದಲ್ಲಿ ಯೆಹೋಶುವನು ಹೆಬ್ರೋನ್, ದೆಬೀರ್ ಹಾಗೂ ಅನಾಬ್ ಎಂಬ ಊರುಗಳಲ್ಲೂ, ಜುದೇಯ ಮತ್ತು ಇಸ್ರಯೇಲ್ ಪ್ರಾಂತ್ಯಗಳ ಬೆಟ್ಟಗುಡ್ಡಗಳಲ್ಲೂ ಇದ್ದ ‘ಅನಾಕಿಮ್’ ಜನರನ್ನು ನಾಶಮಾಡಿ ಅವರ ನಗರಗಳನ್ನು ಹಾಳುಮಾಡಿದನು.


ಇಸ್ರಯೇಲರ ಪ್ರಾಂತ್ಯದಲ್ಲಿ ಜನರಾರೂ ಉಳಿಯಲಿಲ್ಲ. ಗಾಜಾ, ಗತೂರು, ಅಷ್ಡೋದ್ ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದರು.


ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.


“ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು