Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 7:1 - ಕನ್ನಡ ಸತ್ಯವೇದವು C.L. Bible (BSI)

1 “ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿಗೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸೇರಿಸಿ, ಸಂಖ್ಯೆಯಲ್ಲೂ ಶಕ್ತಿಯಲ್ಲೂ ನಿಮ್ಮನ್ನು ಮೀರುವ ಜನಾಂಗಗಳನ್ನು ಅಲ್ಲಿಂದ ನಿಮ್ಮ ಮುಂದೆಯೆ ಹೊರಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಅಧಿಕ ಸಂಖ್ಯೆಯಲ್ಲಿಯೂ ಮತ್ತು ಅಧಿಕ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಸಂಖ್ಯೆಯಲ್ಲಿಯೂ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬ ಏಳು ಜನಾಂಗಗಳನ್ನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 “ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ಯೆಹೋವನು ನಿಮ್ಮನ್ನು ನಡೆಸುವನು. ನಿಮಗಿಂತ ಬಲಿಷ್ಠವಾಗಿದ್ದು ಅಲ್ಲಿ ವಾಸಿಸುತ್ತಿರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ಆ ದೇಶದಿಂದ ನಿಮಗಾಗಿ ಹೊರಗಟ್ಟುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಬರಮಾಡಿದಾಗ, ಅವರು ನಿಮಗಿಂತ ದೊಡ್ಡವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಎಂದರೆ, ಗಿರ್ಗಾಷಿಯರನ್ನೂ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 7:1
35 ತಿಳಿವುಗಳ ಹೋಲಿಕೆ  

ನಿಮ್ಮ ದೇವರಾದ ಸರ್ವೇಶ್ವರ ತಾವೇ ನಿಮ್ಮ ಸೇನಾ ನಾಯಕರಾಗಿ ನದಿಯನ್ನು ದಾಟಿಹೋಗುವರು; ಅವರು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವರು. ಆಗ ನೀವು ಅವರ ನಾಡನ್ನು ಸ್ವಾಧೀನಮಾಡಿಕೊಳ್ಳುವಿರಿ. ಸರ್ವೇಶ್ವರ ಆಜ್ಞಾಪಿಸಿದಂತೆ ಯೆಹೋಶುವನು ಕೂಡ ನಿಮ್ಮ ನಾಯಕನಾಗಿ ನದಿಯನ್ನು ದಾಟಿಹೋಗುವನು.


ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು.


ಈಗ ನಮಗೆ ತಿಳಿದಿರುವಂತೆ ನಿಮಗಿಂತ ದೊಡ್ಡವೂ ಬಲಿಷ್ಠವೂ ಆದ ಜನಾಂಗಗಳನ್ನು ಹೊರಡಿಸಿ ಅವರ ನಾಡಲ್ಲೆ ನಿಮ್ಮನ್ನು ಸೇರಿಸಿ, ಆ ನಾಡನ್ನು ನಿಮಗೇ ಸ್ವಂತ ನಾಡನ್ನಾಗಿ ಕೊಡಲು ಸಂಕಲ್ಪಿಸಿದ್ದಾರೆ. ತಾವೇ ನಿಮ್ಮೊಂದಿಗಿದ್ದು, ತಮ್ಮ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆದುತಂದಿದ್ದಾರೆ.


“ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟಾಗ ಅವರ ಕಡೆ ಕುದುರೆಗಳು, ರಥಗಳು ಹಾಗು ನಿಮಗಿಂತ ಹೆಚ್ಚಾದ ಕಾಲ್ಬಲವು ಇರುವುದನ್ನು ಕಂಡರೆ, ಹೆದರಬೇಡಿ. ಏಕೆಂದರೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದಾರೆ.


“ಇಸ್ರಯೇಲರೇ ಕೇಳಿ : ನಿಮಗಿಂತ ಮಹಾಬಲಿಷ್ಠ ಜನಾಂಗಗಳನ್ನು ಹಾಗು ಗಗನ ಮುಟ್ಟುವ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲು, ನೀವು ಈ ಜೋರ್ಡನ್ ನದಿಯನ್ನು ಇಂದು ದಾಟಲಿದ್ದೀರಿ.


“ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಬಳಿಯಿಂದ ಹೊರಡಿಸಿದನಂತರ ನೀವು ಮನಸ್ಸಿನಲ್ಲೇ, ‘ಸರ್ವೇಶ್ವರ ನಮ್ಮನ್ನು ಈ ನಾಡಿಗೆ ಕರೆತಂದು ಅದನ್ನು ನಮಗೆ ಸ್ವಾಧೀನಪಡಿಸಿದ್ದು ನಮ್ಮ ಪುಣ್ಯಫಲವೇ’ ಎಂದುಕೊಳ್ಳಬಾರದು. ಆ ಜನಾಂಗಗಳ ದುರ್ನಡತೆಯ ಕಾರಣದಿಂದಲೇ ಸರ್ವೇಶ್ವರ ನಿಮ್ಮ ಬಳಿಯಿಂದ ಅವರನ್ನು ಹೊರದಬ್ಬುತ್ತಾರೆ.


ನಾನು ಒಬ್ಬ ದೂತನನ್ನು ನಿನಗೆ ಮುಂದಾಗಿ ಕಳಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು, ಹಾಗು ಯೆಬೂಸಿಯರನ್ನು ಅಲ್ಲಿಂದ ಹೊರದೂಡುವೆನು.


ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II


ನಾನು ಪ್ರಮಾಣಮಾಡಿ ಕೊಟ್ಟ ನಾಡಿಗೆ ಇವರು ಸೇರುವುದಕ್ಕಿಂತ ಮುಂಚಿತವಾಗಿಯೇ ಇವರು ಈಗಲೂ ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆ. ನಾನು ಇವರ ಪಿತೃಗಳಿಗೆ ಪ್ರಮಾಣಮಾಡಿದಂತೆ ಹಾಲೂ ಜೇನೂ ಹರಿಯುವ ನಾಡಿಗೆ ಇವರನ್ನು ಸೇರಿಸಿದ ಮೇಲೆ ಇವರು ಚೆನ್ನಾಗಿ ಉಂಡು ಕೊಬ್ಬಿದವರಾದಾಗ, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿ, ನನ್ನನ್ನು ತಾತ್ಸಾರಮಾಡಿ, ನನ್ನ ನಿಬಂಧನೆಯನ್ನು ಮೀರುವರು. ಅನಂತರ ಅನೇಕ ಕಷ್ಟಗಳೂ ವಿಪತ್ತುಗಳೂ ಸಂಭವಿಸಿದಾಗ ಈ ಗೀತೆ ಇವರ ಸಂತತಿಯವರ ಬಾಯಲ್ಲಿದ್ದು ಅವರ ಮುಂದೆ ಸಾಕ್ಷಿಕೊಡುವುದು,” ಎಂದು ಹೇಳಿದರು.


“ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿಗೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸೇರಿಸಿದ ನಂತರ ನೀವು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು.


ನಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ನಾಡಿಗೆ ನಮ್ಮನ್ನು ಸೇರಿಸುವುದಕ್ಕೆ ಈಜಿಪ್ಟಿನಿಂದ ನಮ್ಮನ್ನು ಬರಮಾಡಿದರು.


ಅಲ್ಲದೆ, ಅವರೇ ಮಾತುಕೊಟ್ಟಿರುವಂತೆ ನಿಮ್ಮ ಶತ್ರುಗಳನ್ನು ನಿಮ್ಮ ಮುಂದೆಯೇ ತೊಲಗಿಸುವರು.


“ನಿನ್ನ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ನಿನ್ನ ದೇವರಾದ ಸರ್ವೇಶ್ವರ ಪ್ರಮಾಣಮಾಡಿದ ನಾಡಿಗೆ ನಿನ್ನನ್ನು ಸೇರಿಸಿದಾಗ,


“ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿ ನಿಮಗೆ ಬೋಧಿಸಲು ನನಗೆ ಆಜ್ಞಾಪಿಸಿದ ಈ ಧರ್ಮೋಪದೇಶವನ್ನೂ ವಿಧಿನಿರ್ಣಯಗಳನ್ನೂ ನೀವು ನದಿದಾಟಿ ಸ್ವಾಧೀನಪಡಿಸಿಕೊಳ್ಳಲಿರುವ ಆ ನಾಡಿನಲ್ಲಿ ಅನುಸರಿಸಬೆಕು.


ಆದರೆ ನಿಮ್ಮ ಮಕ್ಕಳನ್ನು, ಪರರ ಪಾಲಾಗುವರು ಎಂದು ಹೇಳಿದ ನಿಮ್ಮ ಚಿಕ್ಕಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದ ನಾಡನ್ನು ಅವರು ಅನುಭವಿಸುವರು.


ನಿನ್ನೆದುರಾಳಿಗಳನು ಕೆಡವಿಬಿಡುತಿ ಮಹಾ ತೇಜಸ್ವಿಯಾಗಿ ಒಣಹುಲ್ಲಂತೆ ಭಸ್ಮಮಾಡುತಿ ಅವರನು ಕೋಪಾಗ್ನಿಯಾಗಿ.


ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣ ಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು.


ನಿಮಗೆ ಮುಂಚಿತವಾಗಿ ಕಣಜದ ಹುಳುಗಳನ್ನು ಕಳಿಸುವೆನು. ಅವು, ಆ ಹಿವ್ವಿಯರು, ಕಾನಾನ್ಯರು ಹಾಗೂ ಹಿತ್ತಿಯರು ನಿಮ್ಮ ಮುಂದೆ ನಿಲ್ಲದಂತೆ ಓಡಿಸಿ ಬಿಡುವವು.


ಅವರು ನಿಮ್ಮ ನಾಡಿನಲ್ಲಿ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರೋಧವಾಗಿ ನಿಮ್ಮಲ್ಲಿ ದ್ರೋಹಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯೆ ನಿಮಗೆ ಉರುಲಾಗುವುದು.


“ನಿಮಗೆ ಸ್ವದೇಶವಾಗಿ ನಾನು ಕೊಡುವ ಕಾನಾನ್ ನಾಡಿಗೆ ನೀವು ಬಂದ ನಂತರ ಆ ನಾಡಿನ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಸೂಚಿಸುತ್ತೇನೋ


ಆದರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವಂತಕ್ಕಾಗಿ ಕೊಡುವ ಈ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ಹಾಗೆ ಮಾಡದೆ ಉಸಿರಾಡುವ ಒಬ್ಬರನ್ನಾದರೂ ಉಳಿಸಬಾರದು.


ಚೈತನ್ಯಸ್ವರೂಪನಾದ ದೇವರು ನಿಮ್ಮ ಮಧ್ಯೆ ಇದ್ದಾರೆಂದು ನಿಮಗೆ ಈಗ ತಿಳಿಯುವುದು. ಅದೇ ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು ಹಾಗೂ ಯೆಬೂಸಿಯರನ್ನು ನಿಮ್ಮ ಮುಂದಿನಿಂದ ಓಡಿಸಿಬಿಡುವರೆಂದು ನಿಮಗೆ ಗೊತ್ತಾಗುವುದು.


ಪೂರ್ವ ಪಶ್ಚಿಮಗಳಲ್ಲಿರುವ ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಮಲೆನಾಡಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ನೋನಿನ ಬುಡದಲ್ಲಿ ಮಿಚ್ಪಾನಾಡಿನಲ್ಲಿದ್ದ ಹಿವ್ವಿಯರು ಇವರಿಗೂ ಹೇಳಿಕಳಿಸಿದನು.


ನೀವು ಜೋರ್ಡನನ್ನು ದಾಟಿ ಜೆರಿಕೋವಿಗೆ ಬಂದಿರಿ. ಆಗ ಜೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷ್ಟಿಯರು, ಹಿವ್ವಿಯರು ಹಾಗೂ ಯೆಬೂಸಿಯರು ಇವರೆಲ್ಲರೂ ನಿಮಗೆ ವಿರುದ್ಧ ಯುದ್ಧಕ್ಕೆ ಬಂದರು. ನಾನು ಅವರೆಲ್ಲರನ್ನು ನಿಮ್ಮ ಕೈವಶಮಾಡಿದೆ.


ಇವನು ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗದಲ್ಲಿ ನಡೆದದ್ದು ಸಾಲದೆಂದು, ಸಿದೋನ್ಯರ ಅರಸ ಎತ್ಬಾಳನ ಮಗಳು ಈಜೆಬೆಲ್ ಎಂಬಾಕೆಯನ್ನು ಮದುವೆ ಮಾಡಿಕೊಂಡು ಬಾಳ್ ದೇವರನ್ನು ಪೂಜಿಸತೊಡಗಿದನು.


ಅದೇ ಕಾಲದಲ್ಲಿ ಅಷ್ಡೋದ್, ಅಮ್ಮೋನಿಯ ಹಾಗು ಮೋವಾಬ್ ಮಹಿಳೆಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ನಾನು ವಿಚಾರಮಾಡಿದೆ.


ನೀವು ಅವರೊಡನೆಯಾಗಲಿ, ಅವರ ದೇವತೆಗಳೊಡನೆಯಾಗಲಿ ಯಾವ ವಿಧವಾದ ಒಪ್ಪಂದವನ್ನೂ ಮಾಡಿಕೊಳ್ಳಬಾರದು.


ದಕ್ಷಿಣ ಪ್ರಾಂತದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು.


ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರ ತಾವೇ, ವಿರೋಧಿಗಳನ್ನು ದಹಿಸುವ ಬೆಂಕಿಯೋಪಾದಿಯಲ್ಲಿ ನಿಮ್ಮ ಮುಂದೆ ಹೋಗುತ್ತಾರೆಂದು ಈಗ ತಿಳಿದುಕೊಳ್ಳಿ. ಅವರೇ ಆ ವಿರೋಧಿಗಳನ್ನು ನಾಶಮಾಡುವರು; ನಿಮ್ಮ ಮುಂದೆ ಆ ವಿರೋಧಿಗಳು ಸೋತುಹೋಗುವಂತೆ ಮಾಡುವರು. ಸರ್ವೇಶ್ವರ ನಿಮಗೆ ಹೇಳಿದಂತೆ ನೀವು ಅವರನ್ನು ಹೊರಡಿಸಿ ಬೇಗನೆ ನಾಶಮಾಡುವಿರಿ.


ಯೆಬೂಸಿಯ, ಅಮೋರಿಯ, ಗಿರ್ಗಾಷಿಯ,


ಇಸ್ರಯೇಲರಿಂದ ಸಂಹೃತರಾಗದೆ ಕಾನಾನ್ ನಾಡಿನಲ್ಲಿ ಅಳಿದುಳಿದ ಹಿತ್ತಿಯ, ಅಮೋರಿಯ, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನೂ ಬಿಟ್ಟಿಹಿಡಿದನು.


ಇದಾದನಂತರ ಮುಖ್ಯಸ್ಥರು ನನ್ನ ಬಳಿಗೆ ಬಂದು, “ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಈಜಿಪ್ಟರು, ಅಮೋರಿಯರು ಎಂಬ ಅನ್ಯದೇಶಗಳವರ ಪದ್ಧತಿಯನ್ನು ತೊರೆಯದೆ, ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು