Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 33:20 - ಕನ್ನಡ ಸತ್ಯವೇದವು C.L. Bible (BSI)

20 ಗಾದ್ ಕುಲ ಕುರಿತು ಮೋಶೆ ನುಡಿದದ್ದು: “ಗಾದ್ಯರ ಪ್ರಾಂತ್ಯವನು ವಿಸ್ತರಿಸಿದ ಸರ್ವೇಶ್ವರನಿಗೆ ಸ್ತೋತ್ರವು! ಸಿಂಹದಂತೆ ಹೊಂಚುಹಾಕಿ ಮುರಿವನು ಗಾದನು ಶತ್ರುಗಳ ಭುಜವನು, ಶಿರವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಗಾದ್ ಕುಲದವರ ವಿಷಯದಲ್ಲಿ, “ಗಾದ್ಯರ ಪ್ರದೇಶವನ್ನು ವಿಸ್ತಾರಮಾಡಿದ ಯೆಹೋವನಿಗೆ ಸ್ತೋತ್ರ. ಅವರು ಸಿಂಹದಂತೆ ಹೊಂಚಿಕೊಂಡು (ಶತ್ರುಗಳ) ಭುಜವನ್ನೂ ಅಥವಾ ಶಿರಸ್ಸನ್ನೂ ಮುರಿಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಗಾದ್ ಕುಲದವರ ವಿಷಯದಲ್ಲಿ ಹೀಗಂದನು - ಗಾದ್ಯರ ಪ್ರದೇಶವನ್ನು ವಿಸ್ತಾರಮಾಡಿದ ಯೆಹೋವನಿಗೆ ಸ್ತೋತ್ರ. ಅವರು ಸಿಂಹದಂತೆ ಹೊಂಚಿಕೊಂಡು [ಶತ್ರುಗಳ] ಭುಜವನ್ನೂ ಶಿರಸ್ಸನ್ನೂ ಮುರಿಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಗಾದನಿಗೆ ಮೋಶೆಯು ಹೇಳಿದ್ದೇನೆಂದರೆ: “ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ. ಗಾದನು ಸಿಂಹದಂತಿರುವನು; ಹೊಂಚುಹಾಕುತ್ತಾ ಕಾಯುತ್ತಾ ಇರುವನು. ಫಕ್ಕನೆ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಮೋಶೆಯು ಗಾದನ ವಿಷಯವಾಗಿ ಹೇಳಿದ್ದೇನೆಂದರೆ: “ಗಾದನ ರಾಜ್ಯವನ್ನು ವಿಸ್ತಾರ ಮಾಡಿದ ದೇವರು ಸ್ತುತಿಹೊಂದಲಿ. ಅವನು ಸಿಂಹದಂತೆ ಜೀವಿಸಿ ತೋಳನ್ನೂ ಶಿರಸ್ಸನ್ನೂ ಮುರಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 33:20
14 ತಿಳಿವುಗಳ ಹೋಲಿಕೆ  

ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ.


ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು.


ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ I ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ II


ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ I ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ II


ಆದರೆ ಯಾಬೇಚ, “ಸರ್ವೇಶ್ವರಾ, ನನ್ನನ್ನು ಆಶೀರ್ವದಿಸಿರಿ, ನನ್ನ ಭೂಮಿಯನ್ನು ವಿಸ್ತರಿಸಿರಿ. ನನ್ನೊಡನೆ ಇದ್ದು ನನಗೆ ನೋವನ್ನುಂಟುಮಾಡುವ ಎಲ್ಲಾ ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ,” ಎಂದು ಸರ್ವೇಶ್ಚರನಿಗೆ ಪ್ರಾರ್ಥಿಸಿದನು. ಸರ್ವೇಶ್ವರ ಅವನ ಪ್ರಾರ್ಥನೆಯನ್ನು ಆಲಿಸಿ, ಕೇಳಿದ್ದನ್ನು ದಯಪಾಲಿಸಿದರು.


ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಎಲ್ಲೆಗೆ ಈಚೆಕಡೆ ಇದ್ದಂಥ ಎಲ್ಲ ನಗರಗಳು;


ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು :


ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?


ಹೌದು, ಮೆಮ್‍ಫಿಸ್ ಮತ್ತು ತಹಪನೇಸ್ ನಿವಾಸಿಗಳು ನಿನ್ನ ನಾಡನೆತ್ತಿಯನ್ನು ನುಣ್ಣಗೆ ಮೇದುಬಿಟ್ಟಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು