Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 32:35 - ಕನ್ನಡ ಸತ್ಯವೇದವು C.L. Bible (BSI)

35 ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಪ್ರತಿಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ಅವರು ಜಾರಿ ಬೀಳುವ ಸಮಯ ಬರುವುದು. ಅವರಿಗೆ ಆಪತ್ಕಾಲವು ಸಮೀಪಿಸಿತು; ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ; ಅವರು ಜಾರಿಬೀಳುವ ಸಮಯ ಬರುವದು. ಅವರಿಗೆ ಆಪತ್ಕಾಲವು ಸಮೀಪಿಸಿತು; ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಅವರ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರು ಜಾರಿ ಕೆಟ್ಟಕಾರ್ಯಗಳನ್ನು ಮಾಡಿದಾಗ ನಾನು ಅವರನ್ನು ಶಿಕ್ಷಿಸುವೆನು. ಅವರ ಮಹಾಸಂಕಟ ಕಾಲವು ಹತ್ತಿರವೇ ಇದೆ. ಅವರಿಗೋಸ್ಕರ ಸಿದ್ಧವಾಗಿರುವ ಶಿಕ್ಷೆಯು ಬೇಗನೆ ಬರುತ್ತದೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 32:35
34 ತಿಳಿವುಗಳ ಹೋಲಿಕೆ  

ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸಬೇಡಿ. ಅದನ್ನು ದೇವರಿಗೇ ಬಿಟ್ಟುಬಿಡಿ. ಏಕೆಂದರೆ, “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ಎಲ್ಲರಿಗೂ ತಕ್ಕ ಪ್ರತಿಫಲವನ್ನು ಕೊಡುವವನು ನಾನೇ,” ಎಂಬ ಪ್ರಭುವಿನ ವಾಕ್ಯ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


“ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.


ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.


ಅವರು ದ್ರವ್ಯಾಶೆಪೀಡಿತರಾಗಿ ಕಟ್ಟುಕತೆಗಳನ್ನು ಹೇಳುತ್ತಾ ನಿಮ್ಮಿಂದ ಲಾಭಗಳಿಸುವರು. ದೀರ್ಘಕಾಲದಿಂದ ಅವರಿಗಾಗಿ ಸಿದ್ಧವಾಗಿರುವ ದಂಡನೆಯ ತೀರ್ಪು ಸಮೀಪಿಸುತ್ತಿದೆ. ಅವರನ್ನು ನಾಶಗೊಳಿಸುವವರೇನೂ ನಿದ್ರಿಸುತ್ತಿಲ್ಲ.


ಯಾರು ತಡೆದಾರು ಆತನ ಸಿಟ್ಟಿಗೆ? ಯಾರು ನಿಂತಾರು ಆತನ ರೋಷಾಗ್ನಿಗೆ? ಆತನ ರೌದ್ರ ಜ್ವಾಲಾಪ್ರವಾಹದಂತೆ ಬಂಡೆಗಳು ಪುಡಿಪುಡಿ ಆತನ ಮುಂದೆ.


ಕತ್ತಲೊಳು ಜಾರಿಬೀಳುವ ಇಳುಮೇಡು ಅವರ ಮಾರ್ಗ ತಳ್ಳಲ್ಪಡುವರು, ಅಂಧಕಾರದೊಳು ಬಿದ್ದುಹೋಗುವರು ಕೇಡನ್ನು ಅವರ ಮೇಲೆ ಬರಮಾಡುವೆನು ವಿಚಾರಣೆ ವರುಷದ ಕೇಡನ್ನು ಬರಮಾಡುವೆನು ಸರ್ವೇಶ್ವರನ ನುಡಿ ಇದು.”


ಹೇ ಪ್ರಭು, ಮುಯ್ಯಿತೀರಿಸುವ ದೇವಾ I ಮುಯ್ಯಿತೀರಿಸಲು ಎದ್ದುಬಾರಯ್ಯಾ II


“ಜನಾಂಗಗಳೇ ಕೊಂಡಾಡಿರಿ ದೇವಜನರೊಡನೆ! ತನ್ನ ಭಕ್ತಾದಿಗಳ ರಕ್ತ ಚೆಲ್ಲಿದಾ ಶತ್ರುಗಳಿಗೆ ದಂಡಿಸಿ ಮುಯ್ಯಿತೀರಿಸುವವನು ಸರ್ವೇಶ್ವರನೇ. ತನ್ನ ಜನರಾ ನಾಡಿಗೆ ದೋಷಪರಿಹಾರಮಾಡುವವನು ಆತನೇ.”


“ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.


ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು.


ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.


ಆದಕಾರಣ ಈ ಜನರಿಗೆ ಅಡ್ಡಿಆತಂಕಗಳನ್ನು ಒಡ್ಡುವೆನು. ಹೆತ್ತವರೂ ಮಕ್ಕಳೂ ಎಡವಿಬೀಳುವರು, ನೆಂಟರಿಷ್ಟರೂ ನಾಶವಾಗಿ ಹೋಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”


ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರದಂಡನೆಯನ್ನು ವಿಧಿಸುತ್ತಾನೆ.


ದೊಡ್ಡ ಕುಲವಾಗಿಸುವೆನು ಚಿಕ್ಕವನಿಂದ ಬಲಿಷ್ಠ ರಾಷ್ಟ್ರವಾಗಿಸುವೆನು ದುರ್ಬಲನಿಂದ. ಸಾಧಿಸುವೆನು ಇದನು ಕ್ಲುಪ್ತಕಾಲದೊಳು ಸರ್ವೇಶ್ವರನಾದ ನಾನು, ಶೀಘ್ರದೊಳು.


ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬೋನಿಗೆ ಸಿಕ್ಕಿಕೊಳ್ಳುವರು, ಬಲೆಗೆ ಬೀಳುವರು.”


“ಸ್ವಾಮಿ ತ್ವರೆಮಾಡಲಿ, ತನ್ನ ಕಾರ್ಯವನ್ನು ತುರ್ತಾಗಿ ನಡೆಸಲಿ, ನೋಡೋಣ; ಇಸ್ರಯೇಲಿನ ಪರಮ ಪಾವನ ಸ್ವಾಮಿಯ ಯೋಜನೆ ಶೀಘ್ರವಾಗಿ ಕೈಗೂಡಲಿ, ಆಗ ಪರಿಗ್ರಹಿಸೋಣ” ಎಂದು ಹೇಳುವ ಜನರಿಗೆ ಧಿಕ್ಕಾರ !


ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.


ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: ಆದಾ, ಚಿಲ್ಲಾ, ಕೇಳಿ ನಾನು ಹೇಳುವುದನ್ನು ಲೆಮೆಕನ ಸತಿಯರೇ, ಆಲಿಸಿ ನನ್ನ ಮಾತನ್ನು ನಾ ಹತಮಾಡಿದೆ ನನಗೆ ಗಾಯ ಮಾಡಿದವನನ್ನು ನಾ ಕೊಂದೆ ನನ್ನನ್ನು ಹೊಡೆದಾ ಪ್ರಾಯದವನನ್ನು.


ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.


ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.


ಇದಲ್ಲದೆ ದಾವೀದನು, “ಸರ್ವೇಶ್ವರನಾಣೆ, ಅವನು ಸರ್ವೇಶ್ವರನಿಂದಲೇ ಸಾಯುವನು; ಇಲ್ಲವೆ ಕಾಲತುಂಬಿ ಮರಣಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು.


ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಸರ್ವೇಶ್ವರನ ಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿ ತೀರಿಸಿದಂತಾಗುವುದು.


ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಲಜ್ಜೆಯ ಗಂಧವೂ ಅವರಿಗಿಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ.


ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ.


ವಿನಾಶಕಾರನು ಬಂದೆರಗಿದ್ದಾನೆ ಬಾಬಿಲೋನಿನ ಮೇಲೆ ಅದರ ಶೂರರೋ ಸೆರೆಯಾಗಿಬಿಟ್ಟಿದ್ದಾರೆ ಅವರ ಬಿಲ್ಲುಗಳೋ ಮುರಿದುಹೋಗಿವೆ. ಸರ್ವೇಶ್ವರನು ಮುಯ್ಯಿತೀರಿಸುವ ದೇವರು ಆತ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇರನು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;


“ಎಫ್ರಯಿಮಿನ ಅಕ್ರಮಗಳೆಲ್ಲ ದಾಖಲಾಗಿವೆ. ಅದರ ಪಾಪಕೃತ್ಯಗಳನ್ನೆಲ್ಲ ಒಂದೂ ಬಿಡದೆ ಲೆಕ್ಕಹಾಕಿಡಲಾಗಿದೆ.


ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ.


ಅದರ ಅರಮನೆಗಳಲ್ಲಿ ನರಿಗಳು, ಮೋಜಿನ ಮಹಲುಗಳಲ್ಲಿ ತೋಳಗಳು ಕೂಗಾಡುವುವು. ಬಾಬಿಲೋನಿಗೆ ಕಾಲ ಬಂದಿದೆ. ಅದರ ದಿನಗಳು ಮುಗಿಯುತ್ತಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು