Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 32:19 - ಕನ್ನಡ ಸತ್ಯವೇದವು C.L. Bible (BSI)

19 ಇದ ಕಂಡು ಸರ್ವೇಶ್ವರ ಬೇಸರಗೊಂಡ ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು; ತನ್ನ ಕುಮಾರ ಕುಮಾರ್ತೆಯರ ವಿಷಯದಲ್ಲಿ ವ್ಯಥೆಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು; ತನ್ನ ಕುಮಾರ ಕುಮಾರ್ತೆಗಳ ವಿಷಯದಲ್ಲಿ ವ್ಯಥೆಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ಯೆಹೋವನು ಇದನ್ನು ನೋಡಿ ಕೋಪಗೊಂಡನು. ಆತನ ಮಕ್ಕಳೇ ಆತನನ್ನು ಸಿಟ್ಟಿಗೆಬ್ಬಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 32:19
18 ತಿಳಿವುಗಳ ಹೋಲಿಕೆ  

ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ I ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ II


ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ.


ದುಷ್ಟತನಕೆ ದೇವ, ನಿನಗಿಲ್ಲ ಒಲವು I ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು II


ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು.


ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ.


ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.


ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ ತೋಟದ ಗುಡಿಸಲನ್ನೋ ಎಂಬಂತೆ. ಮಹೋತ್ಸವಗಳನ್ನೂ ಸಬ್ಬತ್‍ದಿನಗಳನ್ನೂ ಅಳಿಸಿಬಿಟ್ಟ ನೆನಪಿಗೂ ಬಾರದಂತೆ. ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ ಅತಿ ರೋಷಾವೇಷಗೊಂಡವನಂತೆ.


“ನನಗೆ ಆಪ್ತವಾದ ಜನತೆಯು, ನನಗೆ ಅಸಹ್ಯಕಾರ್ಯಗಳನ್ನು ಮಾಡಿದ್ದೇಕೆ? ನನ್ನ ಆಲಯದಲ್ಲಿ ಅದಕ್ಕಿರುವ ಹಕ್ಕಾದರೂ ಏನು? ವ್ರತಗಳ ಮೂಲಕ, ಪಶುಬಲಿ ಮಾಂಸದ ಮೂಲಕ ಅದು ಬರಲಿರುವ ದಂಡನೆಯನ್ನು ತಡೆಗಟ್ಟಬಲ್ಲದೆ?


ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II


ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು I ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು II


ನಾನು ನಿಮ್ಮ ಮಧ್ಯೆ ನಿವಾಸಿಸುವೆನು. ನಿಮ್ಮನ್ನು ಕೈಬಿಡೆನು.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯಪಡುವೆನು.


ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು I ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು II


ಆಗ ರಕ್ಷಾದಳದ ಆ ನಾಯಕ ಯೆರೆಮೀಯನನ್ನು ಕರೆಯಿಸಿ, “ನಿನ್ನ ದೇವರಾದ ಸರ್ವೇಶ್ವರನು ಈ ನಾಡಿಗೆ ಇಂಥ ಕೇಡು ಬಂದೊದಗಲಿ ಎಂದು ಶಾಪಹಾಕಿದ್ದ.


ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು