Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 31:17 - ಕನ್ನಡ ಸತ್ಯವೇದವು C.L. Bible (BSI)

17 ಆಗ ನಾನು ಅವರ ಮೇಲೆ ಬಹಳ ಸಿಟ್ಟುಗೊಂಡು, ಅವರನ್ನು ಬಿಟ್ಟು, ಅವರಿಗೆ ವಿಮುಖನಾಗುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಅನೇಕ ಕಷ್ಟಗಳೂ ವಿಪತ್ತುಗಳೂ ಅವರಿಗೆ ಒದಗುವುವು. ಆಗ ಅವರು, ‘ನಮ್ಮ ದೇವರು, ನಮ್ಮ ಮಧ್ಯೆ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿವೆ,’ ಎಂದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ನಾನು ಅವರ ಮೇಲೆ ಬಲುಕೋಪಗೊಂಡು ಅವರನ್ನು ಬಿಟ್ಟು ಅವರಿಗೆ ವಿಮುಖನಾಗಿರುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಮತ್ತು ಅನೇಕ ಕಷ್ಟಗಳೂ ಹಾಗು ವಿಪತ್ತುಗಳೂ ಅವರಿಗೆ ಒದಗುವವು. ಆಗ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿತ್ತಲ್ಲ’ ಅಂದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ನಾನು ಅವರ ಮೇಲೆ ಬಲುಸಿಟ್ಟಾಗಿ ಅವರನ್ನು ಬಿಟ್ಟು ಅವರಿಗೆ ವಿಮುಖನಾಗಿರುವೆನು; ಆದದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಮತ್ತು ಅನೇಕ ಕಷ್ಟಗಳೂ ವಿಪತ್ತುಗಳೂ ಅವರಿಗೆ ಒದಗುವವು. ಆಗ ಅವರು - ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದೆಹೋದದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿದವಲ್ಲಾ ಅಂದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆಗ ನಾನು ಅವರ ಮೇಲೆ ತುಂಬಾ ಕೋಪವುಳ್ಳವನಾಗಿರುವೆನು. ಅವರಿಗೆ ಸಹಾಯ ಮಾಡದೆ ಅವರನ್ನು ಬಿಟ್ಟುಬಿಡುವೆನು; ಅವರು ನಾಶವಾಗುವರು; ಅವರಿಗೆ ಭಯಂಕರ ಸಂಗತಿಗಳು ಸಂಭವಿಸುವವು; ಅನೇಕ ಕೇಡುಗಳಾಗುವುವು; ಆಗ, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದಿರುವ ಕಾರಣ ಇವೆಲ್ಲಾ ನಮಗೆ ಸಂಭವಿಸುತ್ತವೆ’ ಎಂದು ಅವರು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆ ದಿವಸದಲ್ಲಿ ನಾನು ಅವರ ಮೇಲೆ ಕೋಪಗೊಂಡು ಅವರನ್ನು ಬಿಟ್ಟುಬಿಟ್ಟು, ನನ್ನ ಮುಖವನ್ನು ಅವರಿಗೆ ಮರೆಮಾಡುವೆನು. ವಿರೋಧಿಗಳು ಅವರನ್ನು ನುಂಗಿಬಿಡುವರು. ಬಹಳ ಕೇಡುಗಳೂ, ಇಕ್ಕಟ್ಟುಗಳೂ ಅವರಿಗೆ ಸಂಭವಿಸುವುದು. ಆ ದಿವಸದಲ್ಲಿ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ನಮಗೆ ಕೇಡುಗಳು,’ ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 31:17
43 ತಿಳಿವುಗಳ ಹೋಲಿಕೆ  

ಯಕೋಬನ ಮನೆತನದವರಿಗೆ ತನ್ನ ಮುಖವನ್ನು ಮರೆಯಿಸಿಕೊಂಡು ಇರುವ ಸ್ವಾಮಿಗಾಗಿ ಕಾದಿರುವೆನು. ಸ್ವಾಮಿಯನ್ನೇ ಎದುರು ನೋಡುತ್ತಿರುವೆನು.


ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು I ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು II


ಅವನು ಆಸನನ್ನು ಭೇಟಿಯಾಗಲು ಬಂದು, ಅವನಿಗೆ, “ಆಸ ರಾಜನೇ, ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿ; ನೀವು ಸರ್ವೇಶ್ವರನನ್ನು ಹೊಂದಿಕೊಂಡಿರುವ ತನಕ ಅವರೂ ನಿಮ್ಮೊಂದಿಗಿರುವರು; ನೀವು ಅವರನ್ನು ಅರಸಿದರೆ ನಿಮಗೆ ಸಿಕ್ಕುವರು. ಅವರನ್ನು ಬಿಟ್ಟರೆ ಅವರೂ ನಿಮ್ಮನ್ನು ಬಿಟ್ಟುಬಿಡುವರು.


ಆಗ ಗಿದ್ಯೋನನು ಅವನಿಗೆ, “ಸ್ವಾಮೀ, ಸರ್ವೇಶ್ವರ ನನ್ನೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಭುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾರಲ್ಲಾ,” ಎನ್ನಲು,


ಸರ್ವೇಶ್ವರ ನಿಮ್ಮ ಸಂಗಡ ಇಲ್ಲ, ಹತ್ತಬೇಡಿ. ನೀವು ಶತ್ರುಗಳ ಮುಂದೆ ನಿಲ್ಲಲಾರಿರಿ, ಬಿದ್ದು ಸತ್ತುಹೋಗುವಿರಿ.


“ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಸರ್ವೇಶ್ವರ ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆಂದು ಹೇಳು: ‘ನೀವೇ ಸರ್ವೇಶ್ವರನ ಹೊರೆ. ನಿಮ್ಮನ್ನು ಅವರು ಎಸೆದುಬಿಡುವರು.’


ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.


ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕ್ಕೆ ಅಡಿಬಂಡೆ I ನಿನ್ನ ಮುಖ ಮರೆಯಾದುದೆ ನಾ ಕಳವಳಗೊಂಡೆ II


“ನನ್ನ ಮಗ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಪೂರ್ಣಹೃದಯದಿಂದ ಹಾಗೂ ಮನಸ್ಸಂತೋಷದಿಂದ ಅವರೊಬ್ಬರಿಗೇ ಸೇವೆ ಸಲ್ಲಿಸು. ಸರ್ವೇಶ್ವರನು ಎಲ್ಲಾ ಹೃದಯಗಳನ್ನು ಶೋಧಿಸುವವರೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವರೂ ಆಗಿದ್ದಾರೆ. ನೀನು ಅವರನ್ನು ಆರಿಸಿದರೆ ಅವರು ನಿನಗೆ ಸಿಗುವರು; ಅವರನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವರು.


ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು.


ಇನ್ನೆಂದಿಗೂ ಅವರಿಗೆ ವಿಮುಖನಾಗೆನು; ಇಸ್ರಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”


ಈ ಕಾರಣ ನಿಮ್ಮನ್ನು ಮತ್ತು ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ನಗರವನ್ನು ನನ್ನೆದುರಿನಿಂದ ಎತ್ತಿ ಎಸೆದುಬಿಡುವೆನು.


ಸ್ವಾಮೀ, ನಾವು ನಿಮ್ಮ ಮಾರ್ಗ ತಪ್ಪಿ ಅಲೆಯುವಂತೆ ಮಾಡುತ್ತೀರಿ, ಏಕೆ? ನಿಮಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿಣಪಡಿಸುವುದು ಏಕೆ? ನಿಮ್ಮ ಶರಣರ ನಿಮಿತ್ತ, ನಿಮಗೆ ಬಾಧ್ಯರಾದ ಕುಲಗಳ ನಿಮಿತ್ತ, ನಮಗೆ ಪ್ರಸನ್ನಚಿತ್ತರಾಗಿರಿ.


ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II


ಒಡೆಯಾ, ಚಿರಮರೆಯಾಗಿರುವೆ? ಇನ್ನೆಷ್ಟರವರೆಗೆ? I ನಿನ್ನ ಕೋಪಾಗ್ನಿ ಎಡೆಬಿಡದೆ ಉರಿಯುತ್ತಿರಬೇಕೆ? II


ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II


ಇಲ್ಲದಿರೆ ಭುಗಿಲೆದ್ದೀತು ಆತನ ಕೋಪಾವೇಶ I ಮಾರ್ಗಮಧ್ಯದಲೇ ಕಾದಿರಬಹುದು ನಿಮಗೆ ವಿನಾಶ I ಆತನನು ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ II


ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನೀಯುತ್ತಾನೆ ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ ಅನುಭವಿಸಮಾಡುತ್ತಾನೆ.


ನೀನೇಕೆ ನನಗೆ ವಿಮುಖನಾಗಿರುವೆ? ನನ್ನನ್ನೇಕೆ ಶತ್ರು ಎಂದೆಣಿಸುವೆ?


ಓ ನಮ್ಮ ದೇವರೇ, ನೀವು ಮಹೋನ್ನತರು, ಶಕ್ತಿಸಾಮರ್ಥ್ಯರು, ಭಯಭಕ್ತಿಗೆ ಪಾತ್ರರು, ಕೃಪಾವಾಗ್ದಾನಗಳ ನೆರವೇರಿಸುವವರು. ಅಲ್ಪವೆಂದೆಣಿಸಬೇಡಿ - ನಮ್ಮ ರಾಜರು, ರಾಜ್ಯಪಾಲರು. ಯಾಜಕರು, ಪ್ರವಾದಿಗಳು, ಹಿರಿಯರು, ಪ್ರಜೆಗಳು ಸಹಿಸಬೇಕಾಗಿಬಂದಿರುವ ಈ ಕಷ್ಟಕಾರ್ಪಣ್ಯಗಳನು.


ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನುದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತಸ್ಥಾನದಲ್ಲಿ ನಿಂತು, “ದೇವರ ಮಾತನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶ್ವರಸ್ವಾಮಿಯನ್ನು ಬಿಟ್ಟದ್ದರಿಂದ ಅವರೂ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ,” ಎಂದನು.


ಸರ್ವೇಶ್ವರ ಅಂಥವನನ್ನು ಎಂದಿಗೂ ಕ್ಷಮಿಸರು; ಬದಲಿಗೆ ಅವನ ಮೇಲೆ ಸಿಟ್ಟುಗೊಂಡು, ತಮ್ಮ ಗೌರವವನ್ನು ಕಾಪಾಡಿಕೊಳ್ಳುವವರಾಗಿ, ಈ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪೋಕ್ತಿಗಳಿಗೂ ಅವನನ್ನು ಗುರಿಪಡಿಸುವರು. ಅವನ ಹೆಸರನ್ನು ಭೂಮಿಯ ಮೇಲೆ ಇಲ್ಲದಂತೆ ಮಾಡುವರು.


ಅವರು ನನ್ನನ್ನು ಬಿಟ್ಟು, ಇತರ ದೇವರುಗಳನ್ನು ಆಶ್ರಯಿಸಿ, ಬಹಳ ದುಷ್ಕೃತ್ಯಗಳನ್ನು ನಡೆಸುವುದರಿಂದ ನಾನು ಆ ಕಾಲದಲ್ಲಿ ಖಂಡಿತವಾಗಿ ಅವರಿಗೆ ವಿಮುಖನಾಗುವೆನು.


ಇಸ್ರಯೇಲರು ಇನ್ನೊಮ್ಮೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ಸರ್ವೇಶ್ವರನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಮತ್ತು ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಸರ್ವೇಶ್ವರನನ್ನಾದರೋ ಬಿಟ್ಟೇಬಿಟ್ಟರು.


ನಮ್ಮ ದೇವರಾದ ಸರ್ವೇಶ್ವರ ನಮ್ಮ ಪೂರ್ವಜರೊಂದಿಗೆ ಇದ್ದ ಹಾಗೆ ನಮ್ಮೊಂದಿಗೂ ಇರಲಿ! ಅವರು ನಮ್ಮನ್ನು ಕೈಬಿಡದಿರಲಿ, ತಳ್ಳದಿರಲಿ;


“ನಮ್ಮ ಪೂರ್ವಜರು ನಮಗೆ ಸಿಕ್ಕಿರುವ ಈ ಗ್ರಂಥವಾಕ್ಯಗಳಿಗೆ ಕಿವಿಗೊಡದೆ ಹಾಗು ಅವುಗಳನ್ನು ಕೈಕೊಳ್ಳದೆಹೋದುದರಿಂದ ಸರ್ವೇಶ್ವರನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ,” ಎಂದು ಆಜ್ಞಾಪಿಸಿದನು.


ಹೇ ಸರ್ವೇಶ್ವರಾ ಯಕೋಬ ಮನೆತನದವರನ್ನು ನೀವು ಕೈ ಬಿಟ್ಟಿದ್ದೀರಿ. ಏಕೆಂದರೆ ಅವರು ಪೌರಸ್ತ್ಯರಂತೆ ಮಾಟಮಂತ್ರ ಮಾಡುವವರು. ಫಿಲಿಷ್ಟಿಯರಂತೆ ಕಣಿಹೇಳುವವರು, ಅನ್ಯದೇಶಿಯರಂತೆ ಆಚಾರವಿಚಾರಗಳನ್ನು ಅನುಕರಿಸುವವರು ಆಗಿಬಿಟ್ಟಿದ್ದಾರೆ.


ಅವರು ಒಂದು ವೇಳೆ ಸರ್ವೇಶ್ವರನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಏಕೆಂದರೆ, ಸರ್ವೇಶ್ವರ ಆ ಜನರ ವಿರುದ್ಧ ತೋರಿಸಬೇಕೆಂದಿರುವ ಕೋಪಾಕ್ರೋಶ ಭಯಾನಕವಾಗಿದೆ,” ಎಂದು ಆಜ್ಞಾಪಿಸಿದನು.


ಆಗ ರಕ್ಷಾದಳದ ಆ ನಾಯಕ ಯೆರೆಮೀಯನನ್ನು ಕರೆಯಿಸಿ, “ನಿನ್ನ ದೇವರಾದ ಸರ್ವೇಶ್ವರನು ಈ ನಾಡಿಗೆ ಇಂಥ ಕೇಡು ಬಂದೊದಗಲಿ ಎಂದು ಶಾಪಹಾಕಿದ್ದ.


ಅವರು ಹರಟೆಹೊಡೆಯುತ್ತಾರೆ; ಸುಳ್ಳಾಣೆ ಇಟ್ಟು ಸಂಧಾನಮಾಡಿಕೊಳ್ಳುತ್ತಾರೆ. ಉತ್ತಹೊಲದಲ್ಲಿ ಬೆಳೆಯುವ ವಿಷದ ಕಳೆಗಳಂತೆ ನ್ಯಾಯಸ್ಥಾನಕ್ಕೆ ಬರುವ ಅವರ ವಾದವಿವಾದಗಳು ಹೆಚ್ಚಿಕೊಳ್ಳುತ್ತವೆ.


ಇಷ್ಟೆಲ್ಲಾ ಮಾಡಿದಂಥ ನೀವು ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತೀರಿ. ಆದರೆ ಅವರು ನಿಮಗೆ ಉತ್ತರಕೊಡುವುದಿಲ್ಲ. ಬದಲಿಗೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಿಮಗೆ ವಿಮುಖರಾಗುವರು.”


ನೀವು ಆ ಜನರಿಗೆ ಹೆದರಿಕೊಳ್ಳಬೇಡಿ.


ಇತರ ದೇವರುಗಳನ್ನು ಪೂಜಿಸಿ ಅವಲಂಭಿಸಿದರೆ ನೀವು ಸ್ವಾಧೀನಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ.


ನಾನು ಸಾವುಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ;


ಯೆಹೂದ್ಯರಿಗೆ ವಿರುದ್ಧ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಆ ಕಾಲದಲ್ಲೇ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. ಯೆಹೋರಾಮನು ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ಬಿಟ್ಟದ್ದೇ ಇದಕ್ಕೆ ಕಾರಣ.


ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ I ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ II


ಎಂದೇ ತಮ್ಮ ಜನರ ವಿರುದ್ಧ ಸ್ವಾಮಿಯ ಕೋಪ ಭುಗಿಲೆದ್ದಿದೆ. ಹೊಡೆಯುವುದಕ್ಕೆ ಅವರ ಕೈ ಮೇಲಕ್ಕೆತ್ತಿದೆ. ಬೆಟ್ಟಗುಡ್ಡಗಳು ನಡುಗುವುವು. ಸತ್ತ ಹೆಣಗಳು ಕಸದಂತೆ ಬೀದಿಯಲ್ಲಿ ಬಿದ್ದಿರುವುವು. ಇಷ್ಟೆಲ್ಲ ನಡೆದರೂ ಸ್ವಾಮಿಯ ಕೋಪ ತಣಿಯದು, ಎತ್ತಿದ ಕೈ ಇಳಿಯದು.


ಇದೋ, ದೂರ ನಾಡಿನಿಂದ ಕೇಳಿಬರುತ್ತಿದೆ ನನ್ನ ಪ್ರಜೆಯೆಂಬಾಕೆಯ ಈ ಮೊರೆ : “ಸಿಯೋನಿನಲ್ಲಿ ಇನ್ನು ಸರ್ವೇಶ್ವರನಿಲ್ಲವೊ? ಅದರ ರಾಜನು ಅಲ್ಲಿ ವಾಸವಾಗಿಲ್ಲವೊ?” ಅದಕ್ಕೆ ಸರ್ವೇಶ್ವರ : “ಇವರು ತಮ್ಮ ವಿಗ್ರಹಾರಾಧನೆಯಿಂದ ಅನ್ಯದೇವತೆಗಳ ಶೂನ್ಯರೂಪಗಳಿಂದ ನನ್ನನ್ನು ಕೆಣಕಿದ್ದೇಕೆ?”


ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡುಕೋಪಾವೇಶನಾಗಿ ನಾನೇ ಇವರನ್ನು ಸದೆಬಡಿಯುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು