Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 3:8 - ಕನ್ನಡ ಸತ್ಯವೇದವು C.L. Bible (BSI)

8 “ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ ಜೋರ್ಡನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ, ಯೊರ್ದನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆ ಕಾಲದಲ್ಲಿ ನಾವು ಅರ್ನೋನ್ ಹೊಳೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ ಯೊರ್ದನ್ ಹೊಳೆಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ಈ ರೀತಿಯಾಗಿ ನಾವು, ಇಬ್ಬರು ಅಮೋರಿಯ ಅರಸರ ದೇಶಗಳನ್ನು ಸ್ವಾಧೀನ ಮಾಡಿಕೊಂಡೆವು. ಅವರ ದೇಶಗಳು ಜೋರ್ಡನ್ ನದಿಯ ಪೂರ್ವದಲ್ಲಿದ್ದು ಅರ್ನೋನ್ ಕಣಿವೆಯಿಂದ ಹಿಡಿದು, ಹೆರ್ಮೋನ್ ಪರ್ವತದ ತನಕ ವಿಸ್ತಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆ ಕಾಲದಲ್ಲಿ ನಾವು ಯೊರ್ದನ್ ನದಿಯ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರಸರ ಕೈಯಿಂದ ಸ್ವಾಧೀನಮಾಡಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 3:8
12 ತಿಳಿವುಗಳ ಹೋಲಿಕೆ  

ಇಸ್ರಯೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನು ಮತ್ತು ಕಣಿವೆ ಪ್ರದೇಶದ ಪೂರ್ವಭಾಗವನ್ನು ಸ್ವಾಧೀನಮಾಡಿಕೊಂಡರು. ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.


ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು :


ಉರಿಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು.


ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ I ಜೋರ್ದನ್, ಹೆರ್ಮನ್ ನಾಡಿಂದ, ಮೀಸಾರ್ ಗುಡ್ಡೆಯಿಂದ II


ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು I ಸ್ತುತಿಸುತ್ತವೆ ತಾಬೋರ್ ಹೆರ್‍ಮೊನ್ ನಿನ್ನ ನಾಮವನು II


ಅವನ ರಾಜ್ಯವನ್ನೂ ಬಾಷಾನ್ ದೇಶದ ಅರಸ ಓಗನ ರಾಜ್ಯವನ್ನೂ ಜೋರ್ಡನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ರಾಜ್ಯಗಳನ್ನೂ ಗೆದ್ದುಕೊಂಡಿದ್ದರು.


ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲ್ಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ


ಪೂರ್ವದಲ್ಲಿದ್ದ ಮನಸ್ಸೆ ಜನಾಂಗದವರು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಪರ್ವತದವರೆಗಿನ ಬಾಷಾನಿನ ಪ್ರದೇಶದಲ್ಲಿ ನೆಲೆಸಿದರು. ಅವರ ಜನಸಂಖ್ಯೆ ಹೆಚ್ಚು ವೃದ್ಧಿಗೊಂಡಿತು.


ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು