Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 28:34 - ಕನ್ನಡ ಸತ್ಯವೇದವು C.L. Bible (BSI)

34 ನಿಮ್ಮ ಮುಂದೆ ನಡೆಯುವ ದೃಶ್ಯಗಳನ್ನು ನೋಡಿ ಹುಚ್ಚರಾಗಿಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ನಿಮ್ಮ ಮುಂದೆ ನಡೆಯುವ ಸಂಗತಿಗಳ ದೆಸೆಯಿಂದ ಹುಚ್ಚರಾಗಿ ಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ನೀವಾದರೋ ಯಾವಾಗಲೂ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗಿ ನಿಮ್ಮ ಮುಂದೆ ನಡೆಯುವ ಸಂಗತಿಗಳ ದೆಸೆಯಿಂದ ಹುಚ್ಚರಾಗಿ ಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ನಿಮ್ಮ ಕಣ್ಣಮುಂದೆ ನಡೆಯುವ ಘಟನೆಗಳನ್ನು ನೋಡಿ ಹುಚ್ಚರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 28:34
9 ತಿಳಿವುಗಳ ಹೋಲಿಕೆ  

ಸಿಯೋನಿನಲ್ಲಿರುವ ಪಾಪಾತ್ಮರು ಭಯಪಡುತ್ತಾರೆ. ಭಕ್ತಿಹೀನರು ಗಡಗಡನೆ ನಡುಗುತ್ತಾರೆ. ‘ನಮ್ಮಲ್ಲಿ ಯಾರು ತಾನೇ ಕಬಳಿಸುವ ಕಿಚ್ಚಿನ ಬಳಿ ವಾಸಿಸಬಲ್ಲರು?’ ಎಂದು ಹೇಳಿಕೊಳ್ಳುತ್ತಾರೆ.


ನೀವು ಈಜಿಪ್ಟ್ ದೇಶವನ್ನು ಮರಳಿ ಎಂದಿಗೂ ನೋಡುವುದಿಲ್ಲವೆಂದು ಸರ್ವೇಶ್ವರ ಹೇಳಿದ್ದರೂ ಅವರು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗಮಾಡುವರು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನೇ ಗಂಡು ಹೆಣ್ಣು ಎನ್ನದೆ ಗುಲಾಮರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.”


ಹುಚ್ಚುತನ, ಕುರುಡುತನ, ಬೆಪ್ಪುತನ ಇವುಗಳಿಂದ ಸರ್ವೇಶ್ವರ ನಿಮ್ಮನ್ನು ಪೀಡಿಸುವರು.


ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.


“ನಿಮ್ಮ ಮೊಣಕಾಲುಗಳಲ್ಲೂ ತೊಡೆಗಳಲ್ಲೂ ಮತ್ತು ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಸರ್ವೇಶ್ವರ ಹುಟ್ಟಿಸಿ ಬಾಧಿಸುವರು;


ಆ ಬಾಬಿಲೋನಿಯದ ಅರಸನು ಅಲ್ಲೆ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿದನು. ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಜುದೇಯದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು.


ಅದನು ಹಿಡಿಯಬಹುದೆಂಬ ನಂಬಿಕೆ ವ್ಯರ್ಥ ಹಿಡಿಯಬಂದವನು ನೋಡಿದ್ದೇ ಬಿದ್ದುಹೋದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು