Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 24:7 - ಕನ್ನಡ ಸತ್ಯವೇದವು C.L. Bible (BSI)

7 “ಒಬ್ಬನು ಸ್ವದೇಶದವನಾದ ಇಸ್ರಯೇಲನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಿಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯಾವನಾದರೂ ಸ್ವದೇಶದವನಾದ ಇಸ್ರಾಯೇಲನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಅಥವಾ ಮಾರಿಬಿಟ್ಟದ್ದು ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯಾವನಾದರೂ ಸ್ವದೇಶದವನಾದ ಇಸ್ರಾಯೇಲ್ಯನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಮಾರಿಬಿಟ್ಟದ್ದಾಗಲಿ ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ಒಬ್ಬನು ಇನ್ನೊಬ್ಬ ಇಸ್ರೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನನ್ನಾಗಿ ಮಾರಬಾರದು. ಹಾಗೆ ಮಾಡಿದವನನ್ನು ಸಾಯಿಸಬೇಕು. ನಿಮ್ಮ ಕುಲದಿಂದ ಅಂಥಾ ಪಾಪವನ್ನು ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಒಬ್ಬನು ತನ್ನ ಸಹೋದರರಾದ ಇಸ್ರಾಯೇಲರಲ್ಲಿ ಒಬ್ಬನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ನಡುವೆಯಿಂದ ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 24:7
11 ತಿಳಿವುಗಳ ಹೋಲಿಕೆ  

“ಒಬ್ಬನು ಮತ್ತೊಬ್ಬನನ್ನು ಕದ್ದೊಯ್ದು ಅವನನ್ನು ಮಾರಿದ್ದರೂ ಅಥವಾ ತನ್ನಲ್ಲೇ ಖೈದಿಯಾಗಿಟ್ಟುಕೊಂಡಿದ್ದರೂ ಅಂಥವನಿಗೆ ಮರಣ ದಂಡನೆಯಾಗಬೇಕು.”


ಇದಲ್ಲದೆ ಚಕ್ಕೆ, ಲವಂಗ, ರಕ್ತಬೋಳ, ಧೂಪ, ಸುಗಂಧತೈಲ ಮತ್ತು ಸಾಂಬ್ರಾಣಿಗಳನ್ನೂ ಮದ್ಯ, ಎಣ್ಣೆ, ಹದವಾದ ಹಿಟ್ಟು, ಗೋದಿ ಇವುಗಳನ್ನೂ ದನ, ಕುರಿ, ಕುದುರೆ, ರಥ, ಗುಲಾಮ ಮತ್ತು ಜೀತದಾಳು ಇವೆಲ್ಲವನ್ನೂ ಆ ವರ್ತಕರು ಅವಳಿಗೆ ಮಾರುತ್ತಿದ್ದರು.


ಅಂತೆಯೇ, ಕಾಮುಕರಿಗೆ, ಸಲಿಂಗ ಪ್ರೇಮಿಗಳಿಗೆ, ನರಚೋರರಿಗೆ, ಸುಳ್ಳುಸಾಕ್ಷಿಗಳಿಗೆ ಸುಳ್ಳಾಣೆ ಇಡುವವರಿಗೆ ಮತ್ತು ಸದ್ಧರ್ಮ ವಿರೋಧಿಗಳಿಗೆ ಮುಂತಾದವರಿಗೆ ಈ ನಿರ್ಬಂಧನೆಗಳು ನೇಮಕವಾಗಿವೆ.


ಯಾವಾನಿನವರು, ತೂಬಲಿನವರು ಮತ್ತು ಮೆಷೆಕಿನವರು ನಿನ್ನ ಪರವಾಗಿ ವ್ಯಾಪಾರಮಾಡಿ ನರಪ್ರಾಣಿಗಳನ್ನು ಹಾಗು ತಾಮ್ರದ ಪಾತ್ರೆಗಳನ್ನು ನಿನಗೆ ಸರಬರಾಜು ಮಾಡುತ್ತಿದ್ದರು;


ಅವನು ಆ ಮತ್ತೊಬ್ಬನಿಗೆ ಮಾಡಿಸಬೇಕೆಂದಿದ್ದ ಶಿಕ್ಷೆಯನ್ನು ಅವನಿಗೇ ವಿಧಿಸಬೇಕು. ಹೀಗೆ, ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.


“ಬೀಸುವ ಕಲ್ಲನ್ನು ಪೂರ್ತಿಯಾಗಲಿ, ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವುದು.


“ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ, ನಿಮಗೆ ಅಥವಾ ನಿಮ್ಮ ಪಿತೃಗಳಿಗೆ ಗೊತ್ತಿಲ್ಲದ ಇತರ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಒಳ ಒಳಗೇ ನಿಮಗೆ ಬೋಧಿಸಬಹುದು.


ಅಪರಾಧಿಯನ್ನು ಕೊಲ್ಲುವುದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಎಸೆಯಬೇಕು. ತರುವಾಯ ಜನರೆಲ್ಲರೂ ಹಾಕಲಿ. ಹೀಗೆಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.


ಅನಾಥರ ಕತ್ತೆಗಳನು ಹೊಡೆದುಕೊಂಡು ಹೋಗುತ್ತಾರೆ ವಿಧವೆಯರ ಎತ್ತುಗಳನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.


ತಂದೆಯಿಲ್ಲದ ಮಗುವನು ಕಿತ್ತುಕೊಳ್ಳುತ್ತಾರೆ ತಾಯಮೊಲೆಯಿಂದ ಮಕ್ಕಳನು ಅಡವಾಗಿ ಪಡೆಯುತ್ತಾರೆ ಬಡವರಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು