Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 21:5 - ಕನ್ನಡ ಸತ್ಯವೇದವು C.L. Bible (BSI)

5 ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರ ಇರಬೇಕು. ನಿಮ್ಮ ದೇವರಾದ ಸರ್ವೇಶ್ವರ ಅವರನ್ನೇ ತಮ್ಮ ಸಾನ್ನಿಧ್ಯಸೇವೆಯನ್ನು ಮಾಡುವುದಕ್ಕೆ ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೆ ಆರಿಸಿಕೊಂಡಿದ್ದಾರಲ್ಲವೆ? ಸಂದೇಹಕರವಾದ ಎಲ್ಲ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಲೇವಿ ಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರ ಬರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವುದಕ್ಕೂ ಮತ್ತು ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವುದಕ್ಕೂ ಆರಿಸಿಕೊಂಡಿದ್ದಾನಲ್ಲಾ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸುವವರು, ಅವರ ಮಾತುಗಳನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರವಿರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಆದುಕೊಂಡಿದ್ದಾನಲ್ಲ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಊರಿನಲ್ಲಿದ್ದ ಲೇವಿಯರೂ ಅಲ್ಲಿಗೆ ಹೋಗಬೇಕು. ಯೆಹೋವನು ಅವರ ಜನರನ್ನು ಆತನ ಹೆಸರಿನಲ್ಲಿ ಆಶೀರ್ವದಿಸುವುದಕ್ಕಾಗಿಯೂ ತನ್ನ ಸೇವೆ ಮಾಡುವುದಕ್ಕಾಗಿಯೂ ಆರಿಸಿದ್ದಾನೆ. ಎಲ್ಲಾ ವಾಗ್ವಾದಗಳನ್ನು ಯಾಜಕನೇ ಇತ್ಯರ್ಥಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 21:5
12 ತಿಳಿವುಗಳ ಹೋಲಿಕೆ  

ಅಮ್ರಾಮನ ಮಕ್ಕಳು ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾಪರಿಶುದ್ಧ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟಿದ್ದರು. ಇವರು ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಧೂಪಾರತಿ ಎತ್ತುವವರೂ ಸೇವೆ ಮಾಡುವವರೂ ಸರ್ವೇಶ್ವರನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರಬೇಕಿತ್ತು.


ಯಾಜಕನ ತುಟಿಗಳು ದೈವಜ್ಞಾನದ ದ್ವಾರಗಳು. ಅವನ ಬಾಯಿಂದ ಜನರು ಧರ್ಮೋಪದೇಶವನ್ನು ಕೇಳಬೇಕು. ಅವನು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ದೂತನು.”


“ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.


ವ್ಯಾಜ್ಯವಾಡುವ ಆ ಇಬ್ಬರೂ ಸರ್ವೇಶ್ವರನ ಸನ್ನಿಧಿಯಲ್ಲಿ, ಯಾಜಕರ ಮುಂದೆ ಹಾಗು ಆಗ ಇರುವ ನ್ಯಾಯಾಧಿಪತಿಗಳ ಮುಂದೆ ನಿಲ್ಲಬೇಕು.


ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಕುಲಗಳಲ್ಲಿ ಲೇವಿಯನನ್ನು, ಇವನ ತರುವಾಯ ಇವನ ಸಂತತಿಯವರನ್ನು, ತಮ್ಮ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆಮಾಡುವುದಕ್ಕೆ ತಾವೇ ನೇಮಿಸಿಕೊಂಡು ಇದ್ದಾರಲ್ಲವೆ?


ಆರೋನನು ಆ ದೋಷಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆಮೇಲೆ ಬಲಿಪೀಠದಿಂದ ಇಳಿದು ಬಂದನು.


ಎಂದಿಗೂ ವ್ಯವಸಾಯವಿಲ್ಲದಂಥ ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ಹೋಗಿ ಅಲ್ಲಿ ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು.


ಆಗ ನನಗೆ, ‘ದೀಕ್ಷಿತರ ಪ್ರಾಕಾರದ ಉತ್ತರ ದಕ್ಷಿಣ ಕಡೆಗಳಲ್ಲಿನ ಕೋಣೆಗಳು ಪರಿಶುದ್ಧವಾದವು; ಅಲ್ಲಿ ಸರ್ವೇಶ್ವರನ ಸನ್ನಿಧಿಸೇವಕರಾದ ಯಾಜಕರು ಮಹಾಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ, ಮತ್ತು ಧಾನ್ಯನೈವೇದ್ಯ ದೋಷಪರಿಹಾರಕಬಲಿದ್ರವ್ಯ, ಪ್ರಾಯಶ್ಚಿತ್ತಬಲಿದ್ರವ್ಯ ಎಂಬೀ ಮಹಾಪರಿಶುದ್ಧ ಪದಾರ್ಥಗಳನ್ನು ಅಲ್ಲಿಡುತ್ತಾರೆ. ಆ ಸ್ಥಳ ಪರಿಶುದ್ಧ.


ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್‍ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ.


ಜುದೇಯದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರಲ್ಲಿ ಜೀವಹತ್ಯ ಸಂಬಂಧದಲ್ಲಿಯಾಗಲಿ ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಸರ್ವೇಶ್ವರನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ಹಾಗೂ ನೀವು ಅವರೊಂದಿಗೆ ದೇವಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು