Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 20:8 - ಕನ್ನಡ ಸತ್ಯವೇದವು C.L. Bible (BSI)

8 ಮತ್ತು ‘ಯಾವನಾದರೂ ಧೈರ್ಯ ಕಡಿಮೆಯಾಗಿ ಅಂಜಿಕೊಂಡರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು’, ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದಲ್ಲದೆ, “ಯಾವನಾದರೂ ಅಧೈರ್ಯದಿಂದ ಯುದ್ಧ ಮಾಡಲು ಹಿಂಜರಿದರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು” ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಮತ್ತು - ಯಾವನಾದರೂ ಧೈರ್ಯಕಡಿಮೆಯಾಗಿ ಅಂಜಿಕೊಂಡರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವದರಿಂದ ಅವನ ಜೊತೆಗಾರರೂ ದಿಗಿಲು ಪಟ್ಟಾರು ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 20:8
14 ತಿಳಿವುಗಳ ಹೋಲಿಕೆ  

ಆದ್ದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ, “ಭಯಬೀತರೂ ಅಂಜುಬುರುಕರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ,’ ಎಂದು ಪ್ರಕಟಿಸು,” ಎಂದರು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.


ಆದರೆ ಹೇಡಿಗಳಿಗೆ, ಹೇಯಕೃತ್ಯಗಾರರಿಗೆ ಅವಿಶ್ವಾಸಿಗಳಿಗೆ, ಹಲವು ಅಸತ್ಯಗಾರರಿಗೆ ಕಾಮುಕರಿಗೆ, ಕೊಲೆಗಾರರಿಗೆ ವಿಗ್ರಹಾರಾಧಕರಿಗೆ, ಮಾಟಮಂತ್ರಗಾರರಿಗೆ ಗಂಧಕದಿಂದುರಿಯುವ ಅಗ್ನಿಸರೋವರವೇ ಗತಿ ಇದುವೇ ಅವರೆಲ್ಲರ ಎರಡನೆಯ ಮೃತಿ.” ಎಂದು ಹೇಳಿದನು.


ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಠರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ.


ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ.


ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.


“ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುಚಿಯೂ ಆಗದಂತೆ ಎಚ್ಚರಿಕೆಯಿಂದಿರಬೇಕು.


ಅವರು ಎಷ್ಕೋಲ್ ಕಣಿವೆಗೆ ಬಂದು ಆ ನಾಡನ್ನು ನೋಡಿ ಇಸ್ರಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದರು. ಆದ್ದರಿಂದ‍ ಇಸ್ರಯೇಲರು ತಮಗೆ ಸರ್ವೇಶ್ವರ ವಾಗ್ದಾನಮಾಡಿದ ನಾಡಿಗೆ ಹೋಗಲೇ ಇಲ್ಲ.


ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು.


ಕಳವಳಗೊಂಡರು ಎದೋಮ್ಯರ ಕುಲನಾಯಕರು ಗಡಗಡನೆ ನಡುಗುತ್ತಿಹರು ಮೋವಾಬ್ಯರ ಮುಖಂಡರು. ಕರಗಿ ನೀರಾಗಿ ಹೋದರು ಕಾನಾನ್ ನಾಡಿನವರು.


ಮೋಸಹೋಗದಿರಿ. ಏಕೆಂದರೆ, “ದುರ್ಜನರ ಸಂಗ ಸದಾಚಾರದ ಭಂಗ,”


ಸೇನಾಪತಿಗಳು ಯೋಧರಿಗೆ ಈ ರೀತಿ ಹೇಳಿದ ನಂತರ ದಂಡಿನವರ ಮೇಲೆ ನಾಯಕರನ್ನು ನೇಮಿಸಬೇಕು.


ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನಿನ್ನ ಬಲವು ಅಸಮರ್ಪಕವಾದುದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು