Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 2:13 - ಕನ್ನಡ ಸತ್ಯವೇದವು C.L. Bible (BSI)

13-14 “ಆಗ ನಾವು ಜೆರೆದ್ ಹಳ್ಳವನ್ನು ದಾಟಿದೆವು. ನಾವು ಕಾದೇಶ್ ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಿದವರೆಗೆ ಮೂವತ್ತೆಂಟು ವರ್ಷಕಾಲ ಆಯಿತು. ಸರ್ವೇಶ್ವರ ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಯ ಸೈನಿಕರೆಲ್ಲರು ಸತ್ತುಹೋಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ನಾನು, “ಎದ್ದು ಜೆರೆದ್ ಹಳ್ಳವನ್ನು ದಾಟಿರಿ” ಎಂದು ಹೇಳಲು ನಾವು ಜೆರೆದ್ ಹಳ್ಳವನ್ನು ದಾಟಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13-14 ಆಗ ನಾವು ಜೆರೆದ್ ಹಳ್ಳವನ್ನು ದಾಟಿದೆವು. ನಾವು ಕಾದೇಶ್‍ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಿದವರೆಗೆ ಮೂವತ್ತೆಂಟು ವರುಷ ಕಾಲ. ಯೆಹೋವನು ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಯ ಸೈನಿಕರೆಲ್ಲರೂ ಸತ್ತು ಹೋಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಯೆಹೋವನು ನನಗೆ, ‘ಜೆರೆದ್ ಕಣಿವೆಯ ಆಚೆಕಡೆಗೆ ಹೋಗು’ ಎಂದು ಹೇಳಿದನು. ಆದ್ದರಿಂದ ನಾವು ಜೆರೆದ್ ಕಣಿವೆಯನ್ನು ದಾಟಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ,” ಎಂದು ಯೆಹೋವ ದೇವರು ಹೇಳಿದ ಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 2:13
5 ತಿಳಿವುಗಳ ಹೋಲಿಕೆ  

ಅಲ್ಲಿಂದ ಹೊರಟು ಜೆರೆಬ್‍ ಕಣಿವೆಯಲ್ಲಿ ಇಳಿದುಕೊಂಡರು.


ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಿ ಹಣ್ಣಿನ ಗೊಂಚಲಿದ್ದ ಒಂದು ಕೊಂಬೆಯನ್ನು ಕೊಯ್ದರು. ಅದನ್ನು ಅಡ್ಡದಂಡಿಗೆಯಲ್ಲಿ ಇಬ್ಬರು ಹೊತ್ತು ತಂದರು. ಕೆಲವು ದಾಳಿಂಬೆ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನು ತಂದರು.


ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಯೇಲರು ತಮಗೆ ಸರ್ವೇಶ್ವರ ಕೊಟ್ಟ ನಾಡನ್ನು ಹೇಗೆ ಸ್ವಾಧೀನಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ನಾಡಿನಲ್ಲಿ ವಾಸಮಾಡಿದರು.)


ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ಹೊಳೆ ಅಮೋರಿಯರ ಪ್ರದೇಶದಿಂದಾಚೆ ಇರುವ ಮರುಭೂಮಿಯಲ್ಲಿ ಮೋವಾಬ್ಯರಿಗೂ ಅಮೋರಿಯರಿಗೂ ನಡುವೆ ಇದ್ದು ಮೋಬಾಬ್ಯರ ಎಲ್ಲೆಯಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು