Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 16:14 - ಕನ್ನಡ ಸತ್ಯವೇದವು C.L. Bible (BSI)

14 ಅದರಲ್ಲಿ ನೀವೂ ನಿಮ್ಮ ಗಂಡುಹೆಣ್ಣು ಮಕ್ಕಳೂ ಗಂಡುಹೆಣ್ಣು ಆಳುಗಳೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಾಯಿತಂದೆಯಿಲ್ಲದವರೂ ಹಾಗು ವಿಧವೆಯರೂ ಸಂಭ್ರಮದಿಂದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ಮತ್ತು ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ಸಂಭ್ರಮಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅದರಲ್ಲಿ ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ಸಂಭ್ರಮದಿಂದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಿಮ್ಮ ಹೆಂಡತಿಮಕ್ಕಳೊಂದಿಗೆ, ಸೇವಕಸೇವಕಿಯರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿರುವ ಲೇವಿಯರೊಂದಿಗೆ, ಪರದೇಶಿಗಳೊಂದಿಗೆ, ಅನಾಥರೊಂದಿಗೆ ಮತ್ತು ವಿಧವೆಯರೊಂದಿಗೆ ಆನಂದದಿಂದ ಹಬ್ಬ ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಂದೆತಾಯಿ ಇಲ್ಲದವರೂ ಹಾಗೂ ವಿಧವೆಯರೂ ಸಂಭ್ರಮದಿಂದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 16:14
14 ತಿಳಿವುಗಳ ಹೋಲಿಕೆ  

ಮತ್ತು ಅವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ಗಂಡುಹೆಣ್ಣು ಆಳುಗಳು, ನಿಮ್ಮ ಊರಲ್ಲಿರುವ ಲೇವಿಯರು, ಪರದೇಶದವರು, ತಾಯಿತಂದೆಯಿಲ್ಲದವರು ಹಾಗು ವಿಧವೆಯರು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.


ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.


ನೀವಾದರೋ ಹಾಡುವಿರಿ ಹಬ್ಬದ ರಾತ್ರಿಯಲ್ಲೋ ಎಂಬಂತೆ ಹೃದಯಾನಂದ ಪಡುವಿರಿ, ಇಸ್ರಯೇಲರ ರಕ್ಷಣೆಯ ಕೋಟೆಗೆ, ಸರ್ವೇಶ್ವರನ ಶಿಖರಕ್ಕೆ ಕೊಳಲನೂದುತ ಹೋಗುವವರಂತೆ.


ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ತಿನ್ನು; ದ್ರಾಕ್ಷಾರಸವನ್ನು ಉಲ್ಲಾಸದಿಂದ ಕುಡಿ; ದೇವರು ನಿನ್ನ ನಡತೆಯನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ.


ಸರ್ವೇಶ್ವರ ನಿಮಗೂ ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲ ಸುಖ ಸಂತೋಷಗಳಿಗಾಗಿ ನೀವೂ ಲೇವಿಯರೂ ನಿಮ್ಮ ಮಧ್ಯೆಯಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು.


ನೀವು, ನಿಮ್ಮ ಗಂಡು ಹೆಣ್ಣು ಮಕ್ಕಳು, ದಾಸದಾಸಿಯರು ಹಾಗು ನಿಮ್ಮೊಡನೆ ಸೊತ್ತನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.


ಆಗ ಊರಲ್ಲಿರುವ ಅನ್ಯದೇಶದವರು, ತಾಯಿತಂದೆಯಿಲ್ಲದವರು, ವಿಧವೆಯರು ಹಾಗು ನಿಮ್ಮ ಹಾಗೆ ಸ್ವಂತ ಸೊತ್ತು ಹೊಂದದೆಯಿರುವ ಲೇವಿಯರೂ ಉಂಡು ಸಂತೋಷವಾಗಿರುವರು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಸಫಲಗೊಳಿಸುವರು.


ನಿಮ್ಮ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಅವರು ಸಫಲಗೊಳಿಸಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.


ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.


ದವಸಧಾನ್ಯಗಳ ವಿನಾಶವನ್ನು ಕಣ್ಣಾರೆ ಕಾಣುತ್ತಿದ್ದೇವಲ್ಲವೆ? ದೇವಾಲಯದ ಹರ್ಷ ಉತ್ಸವಗಳು ನಿಂತುಹೋಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು