ಧರ್ಮೋಪದೇಶಕಾಂಡ 15:19 - ಕನ್ನಡ ಸತ್ಯವೇದವು C.L. Bible (BSI)19 “ದನಗಳಲ್ಲೂ ಆಡುಕುರಿಗಳಲ್ಲೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಸರ್ವೇಶ್ವರನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ದನಗಳಲ್ಲಿಯೂ ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು.; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 “ನಿಮ್ಮ ಹಿಂಡಿನಲ್ಲಾಗಲಿ ಹಟ್ಟಿಯಲ್ಲಾಗಲಿ ಚೊಚ್ಚಲ ಮರಿಗಳು ನನಗೆ ವಿಶೇಷವಾದವುಗಳು. ನೀವು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. ಅಂಥಾ ಪ್ರಾಣಿಗಳನ್ನು ನಿಮ್ಮ ಕೆಲಸಕಾರ್ಯಗಳಿಗಾಗಿ ಉಪಯೋಗಿಸಕೂಡದು. ಮತ್ತು ಅಂಥಾ ಕುರಿಮರಿಗಳ ಉಣ್ಣೆಯನ್ನು ಕತ್ತರಿಸಬಾರದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠಿಸಬೇಕು. ನಿಮ್ಮ ಹೋರಿಯ ಚೊಚ್ಚಲಿನಿಂದ ನೀವು ಕೆಲಸ ಮಾಡಿಸಬಾರದು. ನಿಮ್ಮ ಕುರಿಯ ಚೊಚ್ಚಲಲ್ಲಿ ಉಣ್ಣೆ ಕತ್ತರಿಸಬಾರದು. ಅಧ್ಯಾಯವನ್ನು ನೋಡಿ |