20 ನಿಮ್ಮ ದೇವರಾದ ಯೆಹೋವನು ನಿಮಗೆ ವಾಗ್ದಾನ ಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿದಾಗ ನೀವು, “ನಾವು ಮಾಂಸಾಹಾರವನ್ನು ಊಟಮಾಡಬೇಕು” ಎಂದು ನೀವು ಇಷ್ಟಪಟ್ಟರೆ ಮಾಂಸಾಹಾರವನ್ನು ಮಾಡಬಹುದು.
20-21 “ನಿಮ್ಮ ದೇವರಾದ ಯೆಹೋವನು ನಿಮ್ಮ ದೇಶವನ್ನು ವಿಸ್ತಾರ ಮಾಡುವನು. ಆ ಸಮಯದಲ್ಲಿ ನೀವು ಇರುವ ಸ್ಥಳಗಳು ಆತನು ತನ್ನ ಹೆಸರಿಗಾಗಿ ಆರಿಸಿದ ಸ್ಥಳದಿಂದ ತುಂಬಾ ದೂರವಿರಬಹುದು. ಆಗ ನಿಮಗೆ ಮಾಂಸ ಊಟಮಾಡಲು ಆಸೆಯಾದರೆ ನಿಮ್ಮ ಹಿಂಡಿನಿಂದಾಗಲಿ ಹಟ್ಟಿಯಿಂದಾಗಲಿ ಪ್ರಾಣಿಯನ್ನು ಕೊಂದು ತಿನ್ನಬಹುದು. ನಾನು ತಿಳಿಸುವ ರೀತಿಯಲ್ಲಿ ತಿನ್ನಿರಿ. ನಿಮಗೆ ಬೇಕಾದಾಗಲೆಲ್ಲಾ ಹೀಗೆ ಮಾಡಿರಿ.
20 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆ ನಿಮ್ಮ ಮೇರೆಯನ್ನು ವಿಸ್ತಾರಮಾಡುವರು. ಆಗ ನೀವು, “ಮಾಂಸಾಹಾರವನ್ನು ತಿನ್ನಲು ಇಷ್ಟಪಡುತ್ತೇನೆ,” ಎಂದು ಹೇಳಿದರೆ, ತಿನ್ನಬಹುದು.
“ನಾನು ಈಗ ನಿಮಗೆ ಬೋಧಿಸುವ ಈ ಇಡೀ ಧರ್ಮೋಪದೇಶವನ್ನು ನೀವು ಅನುಸರಿಸಬೇಕು. ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರು ಹೇಳುವ ಮಾರ್ಗದಲ್ಲೇ ಯಾವಾಗಲು ನಡೆಯಬೇಕು. ಆಗ ಅವರು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ, ನಿಮ್ಮ ಪಿತೃಗಳಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವರು. ಆಗ ಈ ಮೂರು ನಗರಗಳಲ್ಲದೆ ಇನ್ನೂ ಮೂರು ನಗರಗಳನ್ನು ಗೊತ್ತುಮಾಡಬೇಕು.
ನೀವು ಹೆಜ್ಜೆಯಿಡುವ ಎಲ್ಲ ಸ್ಥಳಗಳೂ ನಿಮ್ಮದಾಗುವುವು; ಮರುಭೂಮಿ ಮೊದಲುಗೊಂಡು ಲೆಬನೋನ್ ಪರ್ವತದವರೆಗೂ ಮತ್ತು ಯೂಫ್ರೆಟಿಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ನಾಡು ವ್ಯಾಪಿಸುವುದು.
ನಾನು ನಿಮ್ಮ ಎದುರಿನಿಂದ ಅನ್ಯಜನರನ್ನು ಹೊರಡಿಸಿ ನಿಮ್ಮ ಎಲ್ಲೆಯನ್ನು ವಿಸ್ತರಿಸುವೆನು. ಅದೂ ಅಲ್ಲದೆ ನೀವು ವರ್ಷಕ್ಕೆ ಮೂರು ಸಾರಿ ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಗೆ ಬರುವಾಗ ಯಾರೂ ನಿಮ್ಮ ನಾಡನ್ನು ಅಪಹರಿಸಲು ಅಪೇಕ್ಷಿಸುವುದಿಲ್ಲ.
ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು.
ಆದರೆ ಯಾಬೇಚ, “ಸರ್ವೇಶ್ವರಾ, ನನ್ನನ್ನು ಆಶೀರ್ವದಿಸಿರಿ, ನನ್ನ ಭೂಮಿಯನ್ನು ವಿಸ್ತರಿಸಿರಿ. ನನ್ನೊಡನೆ ಇದ್ದು ನನಗೆ ನೋವನ್ನುಂಟುಮಾಡುವ ಎಲ್ಲಾ ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ,” ಎಂದು ಸರ್ವೇಶ್ಚರನಿಗೆ ಪ್ರಾರ್ಥಿಸಿದನು. ಸರ್ವೇಶ್ವರ ಅವನ ಪ್ರಾರ್ಥನೆಯನ್ನು ಆಲಿಸಿ, ಕೇಳಿದ್ದನ್ನು ದಯಪಾಲಿಸಿದರು.
ಆದರೆ ನೀವು ಎಲ್ಲ ಊರುಗಳಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಅಭಿವೃದ್ಧಿಪಡಿಸುವ ಮೇರೆಗೆ ಪಶುಪ್ರಾಣಿಗಳನ್ನು ಇಷ್ಟಾನುಸಾರ ಕೊಯ್ದು ಊಟಮಾಡಬಹುದು. ಶುದ್ಧರೂ ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
ಕೆಂಪು ಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಿರುವ ಸಮುದ್ರದವರೆಗೂ ಮತ್ತು ಈ ಮರುಭೂಮಿಯಿಂದ ಯೂಫ್ರೆಟೀಸ್ ಮಹಾ ನದಿಯವರೆಗೂ ಇರುವ ನಾಡನ್ನೆಲ್ಲಾ ನಿಮಗೆ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು.
ನಿಮ್ಮ ದೇವರಾದ ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸಲು ಆರಿಸಿಕೊಳ್ಳುವ ಸ್ಥಳ ನಿಮಗೆ ದೂರವಾದರೆ, ಅವರು ನಿಮಗೆ ಅನುಗ್ರಹಿಸಿದ ದನಕುರಿಗಳಲ್ಲಿ ಬೇಕಾದಷ್ಟನ್ನು, ನಾನು ಅಪ್ಪಣೆಕೊಟ್ಟ ಮೇರೆಗೆ, ನೀವು ಕೊಯ್ದು ನಿಮ್ಮ ಊರಲ್ಲೇ ಊಟಮಾಡಬಹುದು.