Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 10:9 - ಕನ್ನಡ ಸತ್ಯವೇದವು C.L. Bible (BSI)

9 ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆದುದರಿಂದ ಉಳಿದ ಇಸ್ರಾಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ಥಿತಿಯು ದೊರೆಯಲಿಲ್ಲ. ನಿಮ್ಮ ದೇವರಾದ ಯೆಹೋವನು ಅವರಿಗೆ ಹೇಳಿದಂತೆ ಯೆಹೋವನೇ ಅವರಿಗೆ ಸ್ವತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆದದರಿಂದ ವಿುಕ್ಕ ಇಸ್ರಾಯೇಲ್ಯರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ಥಿತಿಯು ದೊರೆಯಲಿಲ್ಲ. ನಿಮ್ಮ ದೇವರಾದ ಯೆಹೋವನು ಅವರಿಗೆ ಹೇಳಿದಂತೆ ಯೆಹೋವನೇ ಅವರಿಗೆ ಸ್ವಾಸ್ತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಹೀಗಿದ್ದುದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ದಾನದ ದೇಶದೊಳಗೆ ಸ್ವಾಸ್ತ್ಯವು ದೊರಕಲಿಲ್ಲ. ಅವರ ಸ್ವಾಸ್ತ್ಯವು ಯೆಹೋವನೇ ಆಗಿದ್ದನು. ಇದು ದೇವರಾದ ಯೆಹೋವನ ವಾಗ್ದಾನ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆದ್ದರಿಂದ ಲೇವಿಯರಿಗೆ ಅವರ ಸಹೋದರರ ಸಂಗಡ ಸ್ವಂತವಾದ ಭೂಸ್ವಾಸ್ತ್ಯವು ದೊರೆಯಲಿಲ್ಲ. ನಿಮ್ಮ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದಂತೆ ಯೆಹೋವ ದೇವರೇ ಅವರ ಸೊತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 10:9
9 ತಿಳಿವುಗಳ ಹೋಲಿಕೆ  

“ಯಾಜಕರಿಗೆ ಇರುವ ಒಂದು ಸೊತ್ತು ಎಂದರೆ ನಾನೇ. ಇಸ್ರಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು. ನಾನೇ ಅವರಿಗೆ ಆಸ್ತಿ.


ಉಳಿದ ಎರಡುವರೆ ಕುಲಗಳ ಜನರಿಗೆ ಜೋರ್ಡನಿನ ಆಚೆಯಲ್ಲಿ ಮೋಶೆಯೇ ಸೊತ್ತನ್ನು ಕೊಟ್ಟಿದ್ದನು. ಲೇವಿಯರಿಗೆ ಮಾತ್ರ ಕೊಡಲಿಲ್ಲ.


ಬೇರೆ ಇಸ್ರಯೇಲರಿಗೆ ಸೊತ್ತು ದೊರಕಿದಂತೆ ಲೇವಿಯರಿಗೆ ದೊರಕದೆ ಹೋದುದರಿಂದ ಅವರು ಇಸ್ರಯೇಲರ ಸಮೇತ ಎಣಿಕೆ ಆಗಲಿಲ್ಲ. ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನು ಲೆಕ್ಕ ಹಾಕಿದಾಗ ಅವರ ಸಂಖ್ಯೆ : 23,000 ಇತ್ತು.


ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ. ದೇವರ ದೃಷ್ಟಿಯಲ್ಲಿ ನಿನ್ನ ಹೃದಯವು ಸರಿಯಿಲ್ಲ.


ನೀವು, ನಿಮ್ಮ ಗಂಡು ಹೆಣ್ಣು ಮಕ್ಕಳು, ದಾಸದಾಸಿಯರು ಹಾಗು ನಿಮ್ಮೊಡನೆ ಸೊತ್ತನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.


ಲೇವಿಯರಿಗೆ ನಿಮ್ಮ ಹಾಗೆ ಯಾವ ಸ್ವಂತ ಸೊತ್ತು ಇಲ್ಲವಾದುದರಿಂದ ನೀವು ಅವರನ್ನು ಕೈಬಿಡಬಾರದು.


ಆಗ ಊರಲ್ಲಿರುವ ಅನ್ಯದೇಶದವರು, ತಾಯಿತಂದೆಯಿಲ್ಲದವರು, ವಿಧವೆಯರು ಹಾಗು ನಿಮ್ಮ ಹಾಗೆ ಸ್ವಂತ ಸೊತ್ತು ಹೊಂದದೆಯಿರುವ ಲೇವಿಯರೂ ಉಂಡು ಸಂತೋಷವಾಗಿರುವರು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಸಫಲಗೊಳಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು