Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 1:45 - ಕನ್ನಡ ಸತ್ಯವೇದವು C.L. Bible (BSI)

45 ನೀವು ಹಿಂದಿರುಗಿ ಬಂದು ಸರ್ವೇಶ್ವರನ ಮುಂದೆ ಗೋಳಾಡಿದಿರಿ. ಆಗ ಅವರು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ನಿಮ್ಮನ್ನು ರಕ್ಷಿಸಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ನೀವು ಹಿಂದಿರುಗಿ ಬಂದು ಯೆಹೋವನ ಮುಂದೆ ಗೋಳಾಡಿದಾಗ ಆತನು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ ಮತ್ತು ರಕ್ಷಿಸಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ನೀವು ಹಿಂದಿರುಗಿ ಬಂದು ಯೆಹೋವನ ಮುಂದೆ ಗೋಳಾಡಿದಾಗ ಆತನು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ರಕ್ಷಿಸಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಆಗ ನೀವು ಹಿಂತಿರುಗಿ ಬಂದು ಯೆಹೋವನ ಸಹಾಯಕ್ಕಾಗಿ ಮೊರೆಯಿಟ್ಟಿರಿ. ಆದರೆ ಯೆಹೋವನು ನಿಮಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ನೀವು ತಿರುಗಿಕೊಂಡು ಯೆಹೋವ ದೇವರ ಮುಂದೆ ಅತ್ತಿರಿ. ಆದರೆ ಯೆಹೋವ ದೇವರು ನಿಮ್ಮ ಧ್ವನಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 1:45
9 ತಿಳಿವುಗಳ ಹೋಲಿಕೆ  

ಅನಂತರ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯಲು ಕಣ್ಣೀರಿಟ್ಟು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ; ತಂದೆಯ ತೀರ್ಮಾನವನ್ನು ಮಾರ್ಪಡಿಸುವ ಸಾಧ್ಯತೆಯೂ ಇರಲಿಲ್ಲ. ಇದು ನಿಮಗೆ ತಿಳಿದ ವಿಷಯ.


ಆತನನು ನೆನಸಿಕೊಂಡರವರು ವಧೆಯಾಗುವಾಗ I ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ II


ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.


ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ಚೆನ್ನಾಗಿ ತಿಳಿದಿದೆ.


ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!


ಅವನಿಗೆ ಕಷ್ಟದುಃಖ ಬಂದೊದಗಲು ದೇವರು ಆಲೈಸುವನೆ ಅವನ ಮೊರೆಯನು?


ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II


ನನ್ನ ಬುದ್ಧಿವಾದವನ್ನು ಅಲಕ್ಷ್ಯಮಾಡಿದಿರಿ, ನನ್ನ ತಿದ್ದುಪಾಟನ್ನು ತಳ್ಳಿಬಿಟ್ಟಿರಿ.


ಆಗ ನನಗೆ ಮೊರೆಯಿಟ್ಟರೂ ಉತ್ತರಿಸೆನು; ಆತುರದಿಂದ ಹುಡುಕಿದರೂ ನಾನು ಕಾಣಸಿಗೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು