Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 1:34 - ಕನ್ನಡ ಸತ್ಯವೇದವು C.L. Bible (BSI)

34-35 “ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು. ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಯೆಹೋವನು ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34-35 ಯೆಹೋವನು ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡು ತಾನು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದ ಆ ಒಳ್ಳೇ ದೇಶವನ್ನು ಈ ದುಷ್ಟಜನರಲ್ಲಿ ಯಾರೂ ನೋಡುವದಿಲ್ಲವೆಂದು ಪ್ರಮಾಣಮಾಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 “ನೀವು ಹೇಳುತ್ತಿದ್ದದ್ದನ್ನು ಯೆಹೋವನು ಕೇಳಿ ಸಿಟ್ಟುಗೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ, ಬೇಸರಗೊಂಡು, ಪ್ರಮಾಣಮಾಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 1:34
9 ತಿಳಿವುಗಳ ಹೋಲಿಕೆ  

ಆಮೇಲೆ, ‘ನಾಡುಗಳಲ್ಲೆಲ್ಲಾ ಶ್ರೇಷ್ಠವಾದ ನಾಡಿಗೆ, ಹಾಲೂ ಜೇನೂ ಹರಿಯುವ ಆ ವಾಗ್ದತ್ತನಾಡಿಗೆ ನಿಮ್ಮನ್ನು ಸೇರಿಸೆನು’ ಎಂದು ಮರುಭೂಮಿಯಲ್ಲಿ ಅವರಿಗೆ ಪ್ರಮಾಣಮಾಡಿ ಹೇಳಿದೆ.


ಎಂತಲೆ ಸೇರರಿವರು ನನ್ನ ವಿಶ್ರಾಂತಿ ನೆಲೆ I ಎಂದು ಸಿಟ್ಟಿನಿಂದ ಕೆರಳಿ ನಾ ಶಪಥಮಾಡಿದೆ II


“ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ” ಎಂದು ಯಾರನ್ನು ಕುರಿತು ಶಪಥ ಮಾಡಿದರು? ತಮಗೆ ಅವಿಧೇಯರಾದ ಜನರನ್ನು ಕುರಿತಲ್ಲವೇ?


ಈಗ ಈ ದುಷ್ಟ ಪೀಳಿಗೆಗೆ ಸೇರಿದವರಾದ ನೀವು ನಿಮ್ಮ ಪೂರ್ವಜರಿಗೆ ಬದಲಾಗಿ ಬಂದು ಇಸ್ರಯೇಲರ ಮೇಲಿದ್ದ ಸರ್ವೇಶ್ವರನ ಕೋಪಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೀರಿ.


ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು