Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 9:7 - ಕನ್ನಡ ಸತ್ಯವೇದವು C.L. Bible (BSI)

7 ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕರ್ತನೇ, ನೀನು ಧರ್ಮಸ್ವರೂಪನು, ನಾವೋ ನಾಚಿಕೆಗೆ ಈಡಾದವರು; ಹೌದು, ಈಗಲೇ ಯೆಹೂದ್ಯರೂ ಯೆರೂಸಲೇಮಿನ ನಿವಾಸಿಗಳೂ ನಿನ್ನ ವಿರುದ್ಧವಾಗಿ ಮಾಡಿದ ದ್ರೋಹದ ನಿಮಿತ್ತ ನಿನ್ನಿಂದ ದೇಶದೇಶಗಳಿಗೆ ತಳ್ಳಲ್ಪಟ್ಟು ದೂರದಲ್ಲಿಯೂ, ಸಮೀಪದಲ್ಲಿಯೂ ಚದರಿರುವ ಎಲ್ಲಾ ಇಸ್ರಾಯೇಲರೂ ನಾಚಿಕೆಗೆ ಈಡಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕರ್ತನೇ, ನೀನು ಧರ್ಮಸ್ವರೂಪ, ನಾವೋ ನಾಚಿಕೆಗೀಡಾದವರು; ಹೌದು, ಈಗಲೇ ಯೆಹೂದ್ಯರೂ ಯೆರೂಸಲೇವಿುನ ನಿವಾಸಿಗಳೂ ನಿನಗೆ ವಿರುದ್ಧವಾಗಿ ಮಾಡಿದ ದ್ರೋಹದ ನಿವಿುತ್ತ ನಿನ್ನಿಂದ ದೇಶದೇಶಗಳಿಗೆ ತಳ್ಳಲ್ಪಟ್ಟು ದೂರದಲ್ಲಿಯೂ ಸಮೀಪದಲ್ಲಿಯೂ ಚದರಿರುವ ಎಲ್ಲಾ ಇಸ್ರಾಯೇಲ್ಯರೂ ನಾಚಿಕೆಗೆ ಈಡಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ಯೆಹೋವನೇ, ನೀನು ಒಳ್ಳೆಯವನು, ಒಳ್ಳೆಯತನ ನಿನ್ನ ಪಾಲಾಗಿದೆ. ಆದರೆ ಈಗ ನಮ್ಮದು ನಾಚಿಕೆಪಡುವ ಸ್ಥಿತಿಯಾಗಿದೆ. ಯೆಹೂದ ಮತ್ತು ಜೆರುಸಲೇಮಿನ ಜನರು ನಾಚಿಕೆಪಡುವಂತಾಗಿದೆ. ಹತ್ತಿರದಲ್ಲಿದ್ದವರು ಹಾಗೂ ದೂರದಲ್ಲಿದ್ದವರು, ಒಟ್ಟಿನಲ್ಲಿ ಇಸ್ರೇಲಿನ ಎಲ್ಲ ಜನರು ನಾಚಿಕೆಪಡುವಂತಾಗಿದೆ. ಯೆಹೋವನೇ, ನೀನು ಆ ಜನರನ್ನು ಎಲ್ಲಾ ದೇಶಗಳಲ್ಲಿ ಚದರಿಸಿಬಿಟ್ಟಿರುವೆ. ಆ ಎಲ್ಲಾ ದೇಶಗಳಲ್ಲಿರುವ ಇಸ್ರೇಲರು ನಾಚಿಕೆಪಡಬೇಕಾಗಿದೆ. ಯೆಹೋವನೇ, ನಿನ್ನ ವಿರುದ್ಧ ಮಾಡಿದ ಎಲ್ಲಾ ಹೀನಕೃತ್ಯಗಳಿಗಾಗಿ ಅವರು ನಾಚಿಕೆಪಡಬೇಕಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 9:7
34 ತಿಳಿವುಗಳ ಹೋಲಿಕೆ  

ಆದಕಾರಣ ಸರ್ವೇಶ್ವರ ಈ ಕೇಡನ್ನು ಸಕಾಲಕ್ಕೆ ನಮ್ಮ ಮೇಲೆ ಬರಮಾಡಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ತಾವು ಮಾಡುವ ಸಕಲ ಕಾರ್ಯಗಳಲ್ಲೂ ನ್ಯಾಯಸ್ವರೂಪರು. ನಾವೋ ಅವರ ಮಾತನ್ನು ಕೇಳಲಿಲ್ಲ.


ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.


ನಾವೇ ತಂದುಕೊಂಡ ಅವಮಾನವೆಂಬ ಹಾಸಿಗೆಯಲ್ಲಿ ಬಿದ್ದಿರೋಣ. ನಾಚಿಕೆಯೆಂಬ ಹೊದಿಕೆ ನಮ್ಮನ್ನು ಮುಚ್ಚಿಬಿಡಲಿ. ಚಿಕ್ಕತನದಿಂದ ಈವರೆಗು ನಾವೂ ನಮ್ಮ ಪೂರ್ವಜರೂ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಇದಿರಾಗಿ ಪಾಪಮಾಡುತ್ತಾ ಬಂದಿರುವುದು ನಿಶ್ಚಯ. ಆ ಸ್ವಾಮಿಯ ಮಾತನ್ನು ಕೇಳದೆಹೋದೆವಲ್ಲಾ!” ಎಂದು ಮೊರೆಯಿಡುತ್ತಿದ್ದಾರೆ.


ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ I ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ II


ಸರ್ವೇಶ್ವರ ನಿಮ್ಮನ್ನು ಅನ್ಯಜನಗಳ ನಡುವೆ ಚದರಿಸಿಬಿಡುವರು. ಹೀಗೆ ಓಡಿಸಿಬಿಡಲು, ಆ ಅನ್ಯನಾಡಿನ ಜನರ ನಡುವೆ ನೀವು ಸ್ವಲ್ಪ ಮಂದಿ ಮಾತ್ರ ಅಳಿದುಳಿಯುವಿರಿ.


ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಂದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯಫಲ.


“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ಇಸ್ರಯೇಲರನ್ನು ಸಕಲ ಜನಾಂಗಗಳೊಡನೆ ಸೇರಿಸಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಹೀಗೆ ಕಾಳನ್ನೂ ಜೊಳ್ಳನ್ನೂ ಬೇರ್ಪಡಿಸುವೆನು.


ಆಗ ನೀವು ನಿಮ್ಮ ದುರ್ಮಾರ್ಗ, ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು, ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ, ನಿಮಗೆ ನೀವೇ ಹೇಸಿಕೊಳ್ಳುವಿರಿ.”


ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.


ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.


ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?


ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ.


ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.


ಹೇ ಪ್ರಭೂ, ನೀನು ಸತ್ಯವಂತ I ನಿನ್ನ ವಿಧಿಯು ನ್ಯಾಯಸಮ್ಮತ II


ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ I ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ II


ಹೌದು ದೇವಾ, ನಿನಗೆ ದ್ರೋಹವೆಸಗಿದೆ I ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ II ನಿನ್ನ ನಿರ್ಣಯವು ನ್ಯಾಯಯುತ I ನೀ ನೀಡುವ ತೀರ್ಪು ನಿರ್ಲಿಪ್ತ II


ನಮ್ಮ ಮೇಲೆ ನೀವೆಷ್ಟೇ ಕೇಡನು ಬರಮಾಡಿದರೂ ನೀವು ನ್ಯಾಯವಂತರು, ಸತ್ಯಸ್ವರೂಪಿ, ನಾವೋ ದುಷ್ಟರು!


ನಮ್ಮ ದುಷ್ಕರ್ಮ ಹಾಗು ಮಹಾಪರಾಧಗಳ ನಿಮಿತ್ತ ಇಷ್ಟೆಲ್ಲಾ ಕೇಡು ಬಂದಿದ್ದರೂ, ನಮ್ಮ ದೇವರಾದ ನೀವು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟುಮಂದಿಯನ್ನು ಉಳಿಸಿದ್ದೀರಿ;


“ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”


ಸರ್ವೇಶ್ವರಾ, ಇಸ್ರಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀವು ಧರ್ಮಸ್ವರೂಪರೆಂದು ಸ್ಪಷ್ಟವಾಯಿತು. ನಾವಾದರೋ ನಿಮ್ಮ ದೃಷ್ಟಿಯಲ್ಲಿ ಅಪರಾಧಿಗಳು, ಈ ನಮ್ಮ ದುಷ್ಕೃತ್ಯದ ಸಲುವಾಗಿ ನಿಮ್ಮೆದುರಿನಲ್ಲಿ ನಿಲ್ಲಲಾರೆವು.”


ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. ‘ಯೆಹೋವ ಚಿದ್ಕೇನು’ (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು.


ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ‘ಯೆಹೂವಚಿದ್ಕೇನು’ (ಅಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.


ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು, ಹತ್ತಿರದಲ್ಲಿರುವವನು ಖಡ್ಗದಿಂದ ಸಾಯುವನು; ಅಂತು ನಾನು ಅವರ ಮೇಲೆ ಇಟ್ಟಿರುವ ರೋಷವನ್ನು ತೀರಿಸಿಬಿಡುವೆನು.


ನನ್ನ ದೇವರೇ, ಕಿವಿಗೊಟ್ಟು ಕೇಳಿ, ಕಣ್ಣು ತೆರೆದು ನಮ್ಮ ಹಾಳು ಪ್ರದೇಶಗಳನ್ನೂ ನಿಮ್ಮ ಹೆಸರುಗೊಂಡಿರುವ ನಗರವನ್ನೂ ನೋಡಿ. ನಾವು ಸದ್ಧರ್ಮಿಗಳೇನೂ ಅಲ್ಲ. ನಿಮ್ಮ ಮಹಾಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿಮ್ಮ ಮುಂದೆ ಅರಿಕೆಮಾಡುತ್ತಿದ್ದೇವೆ.


ಹೊಲ ಕಾಯುವವರಂತೆ ಅದನ್ನು ಸುತ್ತುಗಟ್ಟುವರು. ಏಕೆಂದರೆ ಅದರ ಜನರು ಸರ್ವೇಶ್ವರ ಸ್ವಾಮಿಗೇ ತಿರುಗಿಬಿದ್ದಿದ್ದಾರೆ. ಇದು ಆ ಸ್ವಾಮಿಯ ನುಡಿ.


ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖಮುಚ್ಚಿಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರಲ್ಲವೆ?” ಎನ್ನುತ್ತಾರೆ ಸರ್ವೇಶ್ವರ.


ಅದರ ಅರಸರು, ಮಂತ್ರಿಗಳು, ಯಾಜಕರು, ಪ್ರವಾದಿಗಳು, ಜುದೇಯದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು, ಹೀಗೆ ಎಲ್ಲ ಇಸ್ರಯೇಲರೂ ಯೆಹೂದ್ಯರೂ ಅಧರ್ಮವನ್ನು ಹೇರಳವಾಗಿಮಾಡಿ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ಈ ನಗರವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂದಿದೆ.


ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು