ದಾನಿಯೇಲ 8:27 - ಕನ್ನಡ ಸತ್ಯವೇದವು C.L. Bible (BSI)27 ದಾನಿಯೇಲನಾದ ನಾನು ಮೂರ್ಛೆಗೊಂಡೆ. ಕೆಲವು ದಿವಸ ಕಾಯಿಲೆ ಬಿದ್ದೆ. ಆಮೇಲೆ ಎದ್ದು ರಾಜಕಾರ್ಯವನ್ನು ಆರಂಭಿಸಿದೆ. ಆದರೂ ಆ ಕನಸಿಗೆ ಬೆಚ್ಚಿಬೆರಗಾದೆ. ಅದರ ಅರ್ಥವನ್ನು ಗ್ರಹಿಸಿಕೊಳ್ಳಲಾಗಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆಗ ದಾನಿಯೇಲನಾದ ನಾನು ಮೂರ್ಛೆಹೋಗಿ, ಕೆಲವು ದಿನಗಳು ಕಾಯಿಲೆ ಬಿದ್ದೆನು. ಆ ಮೇಲೆ ಎದ್ದು ರಾಜಕಾರ್ಯವನ್ನು ನಡೆಸಿದೆನು. ಆ ಕನಸಿಗೆ ಬೆಚ್ಚಿಬೆರಗಾದೆನು. ಅದು ಯಾರಿಗೂ ತಿಳಿಯಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆಗ ದಾನಿಯೇಲನಾದ ನಾನು ಬೆಂಡಾಗಿ ಕೆಲವು ದಿವಸ ಕಾಯಿಲೆಬಿದ್ದೆನು; ಆಮೇಲೆ ಎದ್ದು ರಾಜಕಾರ್ಯವನ್ನು ನಡಿಸಿದೆನು; ಆ ಕನಸಿಗೆ ಬೆಚ್ಚಿಬೆರಗಾದೆನು; ಅದು ಯಾರಿಗೂ ತಿಳಿಯಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ದಾನಿಯೇಲನೆಂಬ ನಾನು ಬಹಳ ಅಶಕ್ತನಾದೆನು. ಆ ದರ್ಶನದ ತರುವಾಯ ಹಲವಾರು ದಿವಸ ನಾನು ಕಾಯಿಲೆ ಬಿದ್ದೆನು. ಆಮೇಲೆ ನಾನು ಗುಣಹೊಂದಿ ರಾಜಕಾರ್ಯವನ್ನು ಪ್ರಾರಂಭಿಸಿದೆನು. ಆದರೆ ಆ ದರ್ಶನದಿಂದ ನನ್ನ ಮನಸ್ಸು ಕಲಕಿತು. ಆ ದರ್ಶನದ ಅರ್ಥವೇನೆಂಬುದು ನನಗೆ ತಿಳಿಯಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ದಾನಿಯೇಲನಾದ ನಾನು ಬಳಲಿ ಕೆಲವು ದಿನಗಳವರೆಗೂ ಅಸ್ವಸ್ಥನಾದೆನು. ಅನಂತರ ನಾನು ಎದ್ದು, ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು. ನಾನು ಆ ದರ್ಶನದ ಬಗ್ಗೆ ಬೆಚ್ಚಿಬೆರಗಾದೆನು. ಅದರ ಅರ್ಥವನ್ನೇ ಗ್ರಹಿಸಿಕೊಳ್ಳಲಾಗಲಿಲ್ಲ. ಅಧ್ಯಾಯವನ್ನು ನೋಡಿ |
ಇದನ್ನು ಕೇಳಿದ ಬೇಲ್ತೆಶಚ್ಚರನೆಂದು ಹೆಸರುಗೊಂಡಿದ್ದ ದಾನಿಯೇಲನು ತುಸು ಹೊತ್ತು ಸ್ತಬ್ದನಾದ. ಅವನ ಬುದ್ಧಿಗೆ ಹೊಳೆದ ವಿಷಯ ಅವನಲ್ಲಿ ದಿಗಿಲನ್ನು ಉಂಟುಮಾಡಿತು. ರಾಜನು ಇದನ್ನು ಅರಿತು, “ಬೇಲ್ತೆಶಚ್ಚರನೇ, ನನ್ನ ಕನಸಾಗಲಿ, ಅದರ ಅರ್ಥವಾಗಲಿ ನಿನ್ನನ್ನು ಹೆದರಿಸದಿರಲಿ,” ಎಂದು ಧೈರ್ಯಹೇಳಿದ. ಆಗ ಬೇಲ್ತೆಶಚ್ಚರನು: "ನನ್ನೊಡೆಯಾ, ಈ ಕನಸು ನಿನ್ನ ವೈರಿಗಳಿಗೆ ಬರಲಿ! ಅದರ ಅರ್ಥ ನಿನ್ನ ವಿರೋಧಿಗಳಿಗೆ ತಗಲಲಿ!