ದಾನಿಯೇಲ 8:22 - ಕನ್ನಡ ಸತ್ಯವೇದವು C.L. Bible (BSI)22 ಆ ಕೊಂಬು ಮುರಿದುಹೋದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದಂತೆಯೆ ಆ ಜನಾಂಗದಿಂದ ನಾಲ್ಕು ರಾಜ್ಯಗಳು ಏಳುವುವು. ಆದರೆ ಮೊದಲನೇ ರಾಜನಿಗೆ ಇದ್ದಷ್ಟು ಶಕ್ತಿ ಅವುಗಳಿಗೆ ಇರುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನೆಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಆ ಕೊಂಬು ಮುರಿಯಿತು; ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ನಾಲ್ಕು ಕೊಂಬುಗಳು ನಾಲ್ಕು ರಾಜ್ಯಗಳನ್ನು ಸೂಚಿಸುವವು. ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನ ರಾಷ್ಟ್ರದಿಂದ ಹುಟ್ಟುವವು. ಆದರೆ ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನಷ್ಟು ಶಕ್ತಿಶಾಲಿಯಾಗಿರುವದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆ ಕೊಂಬು ಮುರಿದುಹೋದ ಮೇಲೆ, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದಂತೆಯೇ, ಆ ಜನಾಂಗದಿಂದ ನಾಲ್ಕು ರಾಜ್ಯಗಳು ಉದಯಿಸುವುವು. ಆದರೆ ಮೊದಲನೆಯ ಅರಸನಿಗೆ ಇದ್ದಷ್ಟು ಅಧಿಕಾರ ಅವರಿಗೆ ಇರುವುದಿಲ್ಲ. ಅಧ್ಯಾಯವನ್ನು ನೋಡಿ |
ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.