Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 6:28 - ಕನ್ನಡ ಸತ್ಯವೇದವು C.L. Bible (BSI)

28 ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲೂ ಪರ್ಷಿಯನಾದ ಸೈರೆಷನ ಆಳ್ವಿಕೆಯಲ್ಲೂ ಪ್ರವರ್ಧಿಸುತ್ತಾ ಬಾಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಈ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ, ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಸನ್ಮಾನ, ಗೌರವಗಳಿಂದ ಬಾಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸಿಯನಾದ ಕೋರೆಷನ ಆಳಿಕೆಯಲ್ಲಿಯೂ ಘನವಂತನಾಗಿ ಬಾಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಘನತೆಯನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಹೀಗೆ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ, ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಸಮೃದ್ಧವಾಗಿ ಬಾಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 6:28
10 ತಿಳಿವುಗಳ ಹೋಲಿಕೆ  

ದಾನಿಯೇಲನು ರಾಜ ಸೈರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.


ಪರ್ಷಿಯದ ಅರಸ ಸೈರಸನ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ಕಾರ್ಯಗತ ಮಾಡಿದರು: ಆ ಪರ್ಷಿಯದ ರಾಜ ಕೋರೆಷನ ಮನಸ್ಸನ್ನು ಪ್ರೇರಿಸಿದರು; ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ,


ಕೋರೆಷನಿಗೆ ಇಂತೆನ್ನುವೆನು ನಾನು : ನನ್ನ ಮಂದೆ ಕಾಯುವವನು ನೀನು ನನ್ನ ಇಷ್ಟಾರ್ಥವನು ನೆರವೇರಿಸುವವನು ನೀನು; 'ಪುನಃ ನಿರ್ಮಾಣವಾಗುವೆ' ಎನ್ನುವೆ ಜೆರುಸಲೇಮಿಗೆ, ನೀನು; ‘ಪುನಃ ನಿನಗೆ ಅಸ್ತಿವಾರ ಹಾಕಿಸುವೆ’ ಎನ್ನುವೆ ಆ ದೇವಾಲಯಕೆ ನೀನು.”


ಪರ್ಷಿಯದ ರಾಜನಾದ ಸೈರೆಷನ ಆಳ್ವಿಕೆಯ ಮೂರನೇ ವರ್ಷದಲ್ಲಿ ಬೇಲ್ತೆಶಚ್ಚೆರನೆಂಬ ದಾನಿಯೇಲನಿಗೆ ಒಂದು ಸಂಗತಿ ಪ್ರಕಟವಾಯಿತು. ಅದು ಮಹಾ ಹೋರಾಟದ ಸಂಗತಿ, ಸತ್ಯವಾದ ಸಂಗತಿ. ಅದರ ಅರ್ಥವನ್ನು ತಾನು ಕಂಡ ದರ್ಶನದಿಂದ ಮನದಟ್ಟು ಮಾಡಿಕೊಂಡನು.


"ಪರ್ಷಿಯದ ರಾಜ ಸೈರಸ್ ಎಂಬ ನನ್ನ ಮಾತಿಗೆ ಕಿವಿಗೊಡಿ; ಪರಲೋಕ ದೇವರಾದ ಸರ್ವೇಶ್ವರ ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿದ್ದಾರೆ; ತಮಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾರೆ; ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅವರು ಸ್ವಂತನಾಡಿಗೆ ಹೋಗಬಹುದು; ಅವರ ದೇವರಾದ ಸರ್ವೇಶ್ವರ ಅವರೊಂದಿಗೆ ಇರುತ್ತಾರೆ!” ಎಂದು ಪ್ರಕಟಿಸಿದನು.


‘ಫರ್ಸಿನ್’ ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ,” ಎಂದು ಅರಿಕೆಮಾಡಿದನು.


ನಿನ್ನ ಭುಜಬಲದಿಂದ ಯಕೋಬ, ಜೋಸೆಫ್ ವಂಶಜರನು I ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ ಜನರನು II


ಈಜಿಪ್ಟ್ ದೇಶದಲ್ಲಿ ಮಾಡಿದ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಇಸ್ರಯೇಲರಲ್ಲೂ ಇತರ ಜನಾಂಗಗಳಲ್ಲೂ ಈ ದಿನದವರೆಗೂ ಮಾಡಿ ಹೆಸರುವಾಸಿಯಾದವರು.


ಸಕಲ ದೇಶ-ಕುಲ-ಭಾಷೆಗಳವರಲ್ಲಿ ಯಾರಾದರು ಶದ್ರಕ್, ಮೇಶಕ್ ಹಾಗು ಅಬೇದ್‍ನೆಗೋ ಎಂಬುವರ ದೇವರ ವಿಷಯದಲ್ಲಿ ಅಲ್ಲಸಲ್ಲದ ಮಾತನಾಡಿದರೆ ಅಂಥವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸಬೇಕೆಂದು ಆಜ್ಞೆ ವಿಧಿಸುತ್ತೇನೆ. ಹೀಗೆ ರಕ್ಷಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವೇ ಇಲ್ಲ,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು