Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 5:21 - ಕನ್ನಡ ಸತ್ಯವೇದವು C.L. Bible (BSI)

21 ಸಮಾಜದಿಂದ ಬಹಿಷ್ಕೃತರಾಗಿ, ಮೃಗಬುದ್ಧಿಯುಳ್ಳವರಾಗಿ, ಕಾಡುಕತ್ತೆಗಳ ನಡುವೆ ವಾಸಮಾಡಬೇಕಾಯಿತು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಅದನ್ನು ತಮಗೆ ಇಷ್ಟಬಂದವರಿಗೆ ಒಪ್ಪಿಸುತ್ತಾರೆ ಎಂಬುದನ್ನು ಅವರು ಗ್ರಹಿಸುವ ತನಕ ದನಗಳಂತೆ ಹುಲ್ಲುಮೇಯುವ ಗತಿ ಅವರದಾಯಿತು. ಆಕಾಶದ ಇಬ್ಬನಿ ಅವರ ಮೈಯನ್ನು ತೋಯಿಸುತ್ತಿತ್ತು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅವನು ನರಜಾತಿಯವರೊಳಗಿಂದ ನೂಕಲ್ಪಟ್ಟನು, ಅವನ ಬುದ್ಧಿಯು ಮೃಗದ ಬುದ್ಧಿಯಂತಾಯಿತು, ಕಾಡು ಕತ್ತೆಗಳೊಂದಿಗೆ ವಾಸಿಸಿದನು. ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಮೇಲೆ ತನಗೆ ಬೇಕಾದವರನ್ನು ನೇಮಿಸುತ್ತಾನೆ ಎಂಬುದು ಅವನಿಗೆ ತಿಳಿದುಬರುವ ತನಕ ದನಗಳಂತೆ ಹುಲ್ಲು ಮೇಯುವುದೇ ಅವನ ಗತಿಯಾಯಿತು, ಆಕಾಶದ ಇಬ್ಬನಿಯು ಅವನ ಮೈಯನ್ನು ತೋಯಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅವನು ನರಜಾತಿಯವರೊಳಗಿಂದ ನೂಕಲ್ಪಟ್ಟನು, ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು, ಕಾಡುಕತ್ತೆಗಳೊಂದಿಗೆ ವಾಸಿಸಿದನು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅವರ ಮೇಲೆ ತನಗೆ ಬೇಕಾದವರನ್ನು ನೇವಿುಸುತ್ತಾನೆ ಎಂಬುದು ಅವನಿಗೆ ತಿಳಿದುಬರುವ ತನಕ ದನಗಳಂತೆ ಹುಲ್ಲು ಮೇಯುವದೇ ಅವನ ಗತಿಯಾಯಿತು, ಆಕಾಶದ ಇಬ್ಬನಿಯು ಅವನ ಮೈಯನ್ನು ತೋಯಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಅನಂತರ ನೆಬೂಕದ್ನೆಚ್ಚರನನ್ನು ಜನರ ಮಧ್ಯದಿಂದ ಓಡಿಸಲಾಯಿತು. ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು. ಅವನು ಕಾಡುಕತ್ತೆಗಳ ಜೊತೆ ವಾಸಿಸಿದನು; ಹಸುಗಳಂತೆ ಹುಲ್ಲು ತಿಂದನು; ಮಂಜಿನಲ್ಲಿ ನೆನೆದನು. ಅವನಿಗೆ ಸರಿಯಾದ ಬುದ್ಧಿ ಬರುವತನಕ ಅವನು ಆ ಸ್ಥಿತಿಯಲ್ಲಿದ್ದನು. ಆಗ ಅವನು ಮಹೋನ್ನತನಾದ ದೇವರೇ ಮಾನವರ ಸಾಮ್ರಾಜ್ಯವನ್ನು ಆಳುತ್ತಾನೆ ಮತ್ತು ಆ ಸಾಮ್ರಾಜ್ಯಕ್ಕೆ ತನಗೆ ಬೇಕಾದವರನ್ನು ಅರಸರನ್ನಾಗಿ ನೇಮಿಸುತ್ತಾನೆ ಎಂಬುದನ್ನು ತಿಳಿದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅವನು ಮಾನವ ಸಮಾಜದಿಂದ ಬಹಿಷ್ಕೃತನಾದನು. ಮಹೋನ್ನತರಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾರೆಂದೂ, ಅವರು ತಮಗೆ ಬೇಕಾದವರನ್ನು ಅದಕ್ಕೆ ನೇಮಿಸುತ್ತಾರೆಂದೂ ತಿಳಿಯುವ ತನಕ ಅವನು ಮೃಗಬುದ್ಧಿಯುಳ್ಳವನಾಗಿದ್ದನು. ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು. ಅವನು ದನಗಳಂತೆ ಹುಲ್ಲನ್ನು ಮೇಯುತ್ತಿದ್ದನು. ಅವನ ಶರೀರ ಆಕಾಶದ ಮಂಜಿನಿಂದ ತೇವವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 5:21
15 ತಿಳಿವುಗಳ ಹೋಲಿಕೆ  

ತಾವು ಮಾನವ ಸಮಾಜದಿಂದ ಬಹಿಷ್ಕೃತರಾಗುವಿರಿ. ಕಾಡುಮೃಗಗಳ ನಡುವೆ ವಾಸಮಾಡುವಿರಿ. ದನಕರುಗಳಂತೆ ಹುಲ್ಲು ಮೇಯುವ ಗತಿ ನಿಮ್ಮದಾಗುವುದು. ಆಕಾಶದ ಇಬ್ಬನಿ ನಿಮ್ಮನ್ನು ತೋಯಿಸುವುದು. ಪರಾತ್ಪರ ದೇವರಿಗೆ ಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದು ತಮಗೆ ತಿಳಿದುಬರುವುದರೊಳಗೆ ಏಳು ವರ್ಷ ಕಳೆದಿರುತ್ತದೆ.


ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ, ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು ಇದ ನುಡಿದವ ನಾನು, ನುಡಿದುದನು ನಡೆಸುವವ ನಾನು.”


ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.


ಇದು ಕಾವಲುಗಾರ ದೂತನ ತೀರ್ಮಾನ; ಹಾಗು ದೇವರ ತೀರ್ಪು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದರ ಆಳ್ವಿಕೆಯನ್ನು ಅವರು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಕನಿಷ್ಠರನ್ನೂ ಆ ಪದವಿಗೆ ನೇಮಿಸುತ್ತಾರೆ. ಇದು ಎಲ್ಲಾ ಜನರಿಗೆ ತಿಳಿದಿರಬೇಕೆಂಬುದೇ ಈ ತೀರ್ಮಾನ,' ಎಂದು ಸಾರಿದನು.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಕಾಡುಕತ್ತೆಗೆ ಸ್ವಾತಂತ್ರ್ಯವನು ಕೊಟ್ಟವರಾರು? ಅದರ ಕಟ್ಟನು ಬಿಚ್ಚಿದವರಾರು?


ಗುರುತಿಸಲಾಗಿದ್ದ ಕಾಲವು ಕಳೆಯಿತು. ನೆಬೂಕದ್ನೆಚ್ಚರನು, “ನಾನು ಪರಲೋಕದ ಕಡೆಗೆ ಕಣ್ಣೆತ್ತಿ ನೋಡಿದೆ. ನನ್ನ ಬುದ್ಧಿ ಮತ್ತೆ ನನಗೆ ಸ್ವಾಧೀನವಾಯಿತು. ಆಗ ನಾನು ಪರಾತ್ಪರ ದೇವರನ್ನು ಕೊಂಡಾಡಿದೆ. ಜೀವಸ್ವರೂಪರಾದ ಅವರಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆ: ಆತನ ಆಳ್ವಿಕೆ ಶಾಶ್ವತ ಆತನ ರಾಜ್ಯ ತಲತಲಾಂತರಕ್ಕೂ ಸ್ಥಿರ.


ಪರಾತ್ಪರ ದೇವರು ನಿಮ್ಮ ತಂದೆಯಾದ ನೆಬೂಕದ್ನೆಚ್ಚರ್ ಅವರಿಗೆ ರಾಜ್ಯ ಮಹತ್ವವನ್ನು ಹಾಗೂ ಮಾನ ಸನ್ಮಾನಗಳನ್ನು ದಯಪಾಲಿಸಿದ್ದರು.


ಆ ಮರವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿ, ಎಲೆಗಳನ್ನು ಉದುರಿಸಿ, ಹಣ್ಣುಗಳನ್ನು ಕಿತ್ತುಬಿಸಾಡಿ. ಮೃಗಗಳು ಅದರ ನೆರಳನ್ನು ಬಿಟ್ಟು ತೆರಳಲಿ, ಪಕ್ಷಿಗಳು ರೆಂಬೆಗಳನ್ನು ತೊರೆದುಹೋಗಲಿ.


“ರಾಜರೇ, ನೀವು ಬೆಳೆದು ಬಲಗೊಂಡಿದ್ದೀರಿ. ನಿಮ್ಮ ಕೀರ್ತಿ ವೃದ್ಧಿಯಾಗಿ ಗಗನಕ್ಕೇರಿದೆ. ನಿಮ್ಮ ಆಳ್ವಿಕೆ ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.


ಆ ಮರದ ಬುಡದ ಮೋಟನ್ನು ಉಳಿಸಿರೆಂದು ಅಪ್ಪಣೆಯಾಗಿದೆ. ಇದರ ತಾತ್ಪರ್ಯವೇನೆಂದರೆ: ಪರಲೋಕದ ದೇವರಿಗೆ ಸರ್ವಾಧಿಕಾರ ಉಂಟೆಂಬುದನ್ನು ತಾವು ಅರಿತುಕೊಂಡ ನಂತರ ನಿಮ್ಮ ರಾಜ್ಯ ನಿಮಗೆ ಸ್ಥಿರವಾಗಿ ದೊರಕುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು