Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 5:20 - ಕನ್ನಡ ಸತ್ಯವೇದವು C.L. Bible (BSI)

20 ಹಾಗೆ ಅವರ ಎದೆ ಗರ್ವದಿಂದ ಉಬ್ಬಿಹೋಯಿತು. ಮನಸ್ಸಿಗೆ ಸೊಕ್ಕೇರಿಹೋಯಿತು. ಅವರನ್ನೂ ರಾಜಾಸ್ಥಾನದಿಂದ ತಳ್ಳಲಾಯಿತು. ಮಾನ ಕಳೆದುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 “ಹೀಗೆ ಅವನ ಹೃದಯವು ಉಬ್ಬಿ, ಅವನ ಸ್ವಭಾವವು ಕಠಿಣವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ, ಮಾನವನ್ನು ತೆಗೆದುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಹೀಗೆ ಅವನ ಹೃದಯವು ಉಬ್ಬಿ ಅವನ ಸ್ವಭಾವವು ಜಡವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ ಮಾನವನ್ನು ತೆಗೆದುಬಿಟ್ಟನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಆದರೆ ನೆಬೂಕದ್ನೆಚ್ಚರನು ಬಹಳ ಅಹಂಕಾರಿಯಾಗಿದ್ದನು ಮತ್ತು ಹಟಮಾರಿಯಾಗಿದ್ದನು. ಆದ್ದರಿಂದ ಅವನ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ರಾಜಸಿಂಹಾಸನದಿಂದ ಇಳಿಸಿ ಅವನ ಎಲ್ಲ ಘನತೆಗೌರವಗಳನ್ನು ಕಿತ್ತುಕೊಳ್ಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 5:20
27 ತಿಳಿವುಗಳ ಹೋಲಿಕೆ  

ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ.


ಸರ್ವೇಶ್ವರ ನನಗೆ ಹೀಗೆಂದರು : “ರಾಜನಿಗೂ ರಾಜಮಾತೆಗೂ ಈ ವರ್ತಮಾನವನ್ನು ತಿಳಿಸು - ‘ನೀವು ಇಳಿದುಬಂದು ನೆಲದಲ್ಲಿ ಕುಳಿತುಕೊಳ್ಳಿ. ನಿಮ್ಮ ಚೆಲುವಾದ ಕಿರೀಟ ಬಿದ್ದುಹೋಗಿದೆ ತಲೆಯಿಂದ.


ಇದಲ್ಲದೆ, ನೆಬೂಕದ್ನೆಚ್ಚರನಿಗೆ ಒಳಗಾಗುತ್ತೇನೆಂದು, ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದ್ದರೂ, ಅವನಿಗೆ ವಿರುದ್ಧ ದಂಗೆ ಎದ್ದನು. ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಅಭಿಮುಖನಾಗಲೊಲ್ಲದೆ, ಹಟಹಿಡಿದು ಮನಸ್ಸನ್ನು ಕಠಿಣಮಾಡಿಕೊಂಡನು.


ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು.


ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯೋ?


ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.


“ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.


“ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ - ಈ ನಗರದವರೂ ಇದರ ಸುತ್ತಮುತ್ತಿನ ಊರಿನವರೂ ನನ್ನ ಮಾತನ್ನು ಕೇಳದೆಹೋದರು. ತಮ್ಮ ಮನಸ್ಸನ್ನು ಕಲ್ಲಾಗಿಸಿಕೊಂಡರು. ಆದುದರಿಂದ ನಾನು ಈ ನಗರಕ್ಕೆ ಶಾಪ ಹಾಕಿದ ಕೇಡನ್ನೆಲ್ಲಾ ಅವರಿಗೆ ಬರಮಾಡುವೆನು,” ಎಂದು ಎಲ್ಲ ಜನರಿಗೆ ಸಾರಿದನು.


ಗರ್ವಿಷ್ಠನು ಯಾರೇ ಆಗಿರಲಿ, ಅವನು ಸರ್ವೇಶ್ವರನಿಗೆ ಅಸಹ್ಯ; ಅವನಿಗೆ ದಂಡನೆ ತಪ್ಪದು, ಇದು ಖಂಡಿತ.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಸರ್ವೇಶ್ವರ ಇಂತೆನ್ನುತ್ತಾರೆ - “ಈಜಿಪ್ಟಿಗೆ ಆಧಾರವಾದವರು ಬೀಳುವರು, ಅದರ ಶಕ್ತಿ ಮದವು ಇಳಿದುಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು. ಇದು ಸರ್ವೇಶ್ವರನಾದ ದೇವರ ನುಡಿ.


ಯುವತಿಯೇ, ದೀಬೋನ್ ನಗರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಕುಳಿತುಕೊ ಬಾಯಾರಿದವಳಂತೆ. ಮೋವಾಬನ್ನು ಹಾಳುಮಾಡುವವನು ನಿನಗೆ ವಿರುದ್ಧವಾಗಿ ಬಂದಿದ್ದಾನೆ. ನಿನ್ನ ಕೋಟೆಕೊತ್ತಲುಗಳನ್ನು ಅವನು ಕೆಡವಿದ್ದಾನೆ.


“ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ,, ಸುಕುಮಾರಿ ಎಂದು ಎನಿಸಿಕೊಳ್ಳೆ.


ಈಜಿಪ್ಟ್ ನವರಂತೆ ಆಗಲಿ, ಫರೋಹನಂತೆ ಆಗಲಿ ನೀವೇಕೆ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳಬೇಕು? ಇಸ್ರಯೇಲರನ್ನು ಕಳುಹಿಸಲೊಲ್ಲದ ಈ ಈಜಿಪ್ಟ್ ನವರನ್ನು ಸರ್ವೇಶ್ವರನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲವೆ?


ಆತ ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಈಜಿಪ್ಟಿನವರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ ಆ ವಿಷಯದಲ್ಲೇ ಅವರನ್ನು ತಗ್ಗಿಸಿದ್ದಾನೆ. ಆದ್ದರಿಂದ ಸರ್ವೇಶ್ವರ ಸ್ವಾಮಿಯೇ ಎಲ್ಲ ದೇವರುಗಳಿಗಿಂತ ದೊಡ್ಡವರೆಂದು ಈಗ ತಿಳಿದುಕೊಂಡಿದ್ದೇನೆ,” ಎಂದು ಹೇಳಿದನು.


“ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆ ವೃಕ್ಷವು ಬಹಳ ಎತ್ತರವಾಗಿ ಬೆಳೆದು ತನ್ನ ತುದಿ ಮೋಡಕ್ಕೆ ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟಿತು.


ಆ ಹೋತಕ್ಕೆ ಅತ್ಯಧಿಕ ಹುಮ್ಮಸ್ಸು ಬಂದಿತು. ಆದರೆ ಅದು ಪ್ರಾಬಲ್ಯಕ್ಕೆ ಬರುವಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಪ್ರಸಿದ್ಧ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೂ ಚಾಚಿಕೊಂಡವು.


“(ಉತ್ತರದ) ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲ ದೇವರುಗಳಿಗಿಂತಲೂ ದೊಡ್ಡವನೆಂದು ತನ್ನನ್ನೇ ಹೆಚ್ಚಿಸಿಕೊಂಡು ಗರ್ವಿಷ್ಠನಾಗುವನು. ದೇವಾಧಿದೇವರನ್ನು ಅತಿಯಾಗಿ ದೂಷಿಸುವನು. ನಿಮ್ಮ ಮೇಲಿನ ದೈವಕೋಪ ತೀರುವ ತನಕ ಅವನು ವೃದ್ಧಿಯಾಗುವನು. ದೈವಸಂಕಲ್ಪ ನೆರವೇರಲೇಬೇಕು.


ಫರೋಹನು ಆಳುಗಳನ್ನು ಕಳುಹಿಸಿ ವಿಚಾರಿಸಿದನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲವೆಂದು ತಿಳಿದುಬಂದಿತು. ಆದರೂ ಕೂಡ ಫರೋಹನ ಹೃದಯ ಕಠಿಣವಾಯಿತು. ಆ ಜನರಿಗೆ ಹೊರಡಲಿಕ್ಕೆ ಅವನು ಅಪ್ಪಣೆ ಕೊಡದೆಹೋದನು.


ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದ್ದರಿಂದ ಜುದೇಯದ ಮೇಲೂ ಜೆರುಸಲೇಮಿನವರ ಮೇಲೂ ದೇವರ ಕೋಪವೆರಗಿತು.


ಆ ಮರದ ಬುಡದ ಮೋಟನ್ನು ಉಳಿಸಿರೆಂದು ಅಪ್ಪಣೆಯಾಗಿದೆ. ಇದರ ತಾತ್ಪರ್ಯವೇನೆಂದರೆ: ಪರಲೋಕದ ದೇವರಿಗೆ ಸರ್ವಾಧಿಕಾರ ಉಂಟೆಂಬುದನ್ನು ತಾವು ಅರಿತುಕೊಂಡ ನಂತರ ನಿಮ್ಮ ರಾಜ್ಯ ನಿಮಗೆ ಸ್ಥಿರವಾಗಿ ದೊರಕುವುದು.


ಇದೆಲ್ಲವು ನೆಬೂಕದ್ನೆಚ್ಚರನೆಂಬ ರಾಜನಿಗೆ ಸಂಭವಿಸಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು