Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 5:17 - ಕನ್ನಡ ಸತ್ಯವೇದವು C.L. Bible (BSI)

17 ಆಗ ದಾನಿಯೇಲನು ರಾಜನಿಗೆ, “ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ದಾನಿಯೇಲನು ರಾಜನ ಬಳಿ, “ನಿನ್ನ ದಾನಗಳು ನಿನಗೇ ಇರಲಿ, ನಿನ್ನ ಬಹುಮಾನಗಳು ಮತ್ತೊಬ್ಬನಿಗಾಗಲಿ. ಆದರೆ ನಾನು ಈ ಬರಹವನ್ನು ಓದಿ ಇದರ ಅರ್ಥವನ್ನು ರಾಜನಿಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ದಾನಿಯೇಲನು ಸನ್ನಿಧಿಯಲ್ಲಿ - ನಿನ್ನ ದಾನಗಳು ನಿನಗೇ ಇರಲಿ, ನಿನ್ನ ಬಹುಮಾನಗಳು ಮತ್ತೊಬ್ಬನಿಗಾಗಲಿ; ಆದರೆ ನಾನು ಈ ಬರಹವನ್ನು ಓದಿ ಇದರ ಅರ್ಥವನ್ನು ರಾಜನಿಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆಗ ದಾನಿಯೇಲನು ರಾಜನಿಗೆ, “ರಾಜನಾದ ಬೇಲ್ಶಚ್ಚರನೇ, ನಿನ್ನ ಕಾಣಿಕೆಗಳು ನಿನ್ನಲ್ಲಿಯೇ ಇರಲಿ ಅಥವಾ ಆ ಬಹುಮಾನಗಳನ್ನು ಬೇರೆ ಯಾರಿಗಾದರೂ ಕೊಡು. ಆದರೂ ಗೋಡೆಯ ಮೇಲಿನ ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ವಿವರಿಸುತ್ತೇನೆ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ದಾನಿಯೇಲನು ಅರಸನ ಮುಂದೆ, “ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳು ಮತ್ತೊಬ್ಬರಿಗೆ ದೊರಕಲಿ. ಆದರೂ ನಾನು ಅರಸನಿಗಾಗಿ ಬರಹವನ್ನು ಓದಿ, ಅದರ ಅರ್ಥವನ್ನು ಅರಸನಿಗೆ ತಿಳಿಸುವೆನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 5:17
8 ತಿಳಿವುಗಳ ಹೋಲಿಕೆ  

ಅದಕ್ಕೆ ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ.


ನಿನಗೆ ಸೇರಿದವುಗಳಲ್ಲಿ ಯಾವುದನ್ನೂ, ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದ’ ಎಂದು ಹೇಳಿಕೊಳ್ಳುವುದಕ್ಕೂ ನಿನಗೆ ಆಸ್ಪದ ಇರಬಾರದು.


ಅದಕ್ಕೆ ಪೇತ್ರನು, “ನಿನ್ನ ಹಣಕಾಸು ನಿನ್ನೊಂದಿಗೆ ಹಾಳಾಗಿಹೋಗಲಿ; ದೇವರ ವರವನ್ನು ಹಣಕ್ಕೆ ಕೊಳ್ಳಬೇಕೆಂದಿರುವೆಯಾ?


ತಕ್ಷಣವೇ ಬೇಲ್ಶಚ್ಚರನ ಆಜ್ಞೆಯ ಮೇರೆಗೆ ದಾನಿಯೇಲನಿಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿದರು. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿದರು. ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನಾದನು ಎಂದು ಪ್ರಕಟಿಸಿದರು.


ನೀವು ಆ ಕನಸನ್ನೂ ಅದರ ಉದ್ದೇಶವನ್ನೂ ತಿಳಿಸಿದ್ದೇ ಆದರೆ ನನ್ನಿಂದ ನಿಮಗೆ ದಾನ ಬಹುಮಾನಗಳೂ ವಿಶೇಷ ಸನ್ಮಾನಗಳೂ ದೊರಕುವುವು. ಆದಕಾರಣ ಆ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸಿ,” ಎಂದನು.


ಮಾತಾಡುವೆನು ನಿನ್ನ ಆಜ್ಞೆಗಳ ವಿಷಯವಾಗಿ I ಅರಸುಗಳ ಮುಂದೆಯು ನಿಸ್ಸಂಕೋಚವಾಗಿ II


ಆಗ ಎಲೀಷನು, “ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇಮರದ ತೋಪುಗಳು, ದ್ರಾಕ್ಷೀತೋಟಗಳು, ಕುರಿದನಗಳು, ಗಂಡಾಳು, ಹೆಣ್ಣಾಳುಗಳು, ಇವನ್ನು ಸಂಪಾದಿಸುವುದಕ್ಕೆ ಇದು ಸಮಯವೇ?


ಎಲೀಷನು ಇಸ್ರಯೇಲರ ಅರಸನಿಗೆ, “ನನಗೂ ನಿನಗೂ ಏನು ಸಂಬಂಧ? ನಿನ್ನ ತಂದೆತಾಯಿಗಳ ಪ್ರವಾದಿಗಳ ಬಳಿಗೆ ಹೋಗು,” ಎಂದು ಹೇಳಿದನು. ಅದಕ್ಕೆ ಇಸ್ರಯೇಲರ ಅರಸನು, “ಹಾಗೆನ್ನಬೇಡಿ; ಸರ್ವೇಶ್ವರ ಈ ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕಾಗಿ ಇಲ್ಲಿಗೆ ಬರಮಾಡಿದ್ದಾರೆ ಅಲ್ಲವೇ?’ ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು