Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 4:32 - ಕನ್ನಡ ಸತ್ಯವೇದವು C.L. Bible (BSI)

32 ‘ಈ ರಾಜ್ಯ ನಿನ್ನನ್ನು ಬಿಟ್ಟು ತೊಲಗಿದೆ. ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ದನಗಳಂತೆ ಹುಲ್ಲು ಮೇಯುವ ಗತಿ ನಿನ್ನದಾಗುವುದು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಆ ರಾಜ್ಯವನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದನ್ನು ನೀನು ಗ್ರಹಿಸುವುದರೊಳಗೆ ಏಳು ವರ್ಷ ಕಳೆಯುವುದು,” ಎಂದು ದೈವವಾಣಿಯಾಯಿತು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ಎತ್ತುಗಳಂತೆ ಹುಲ್ಲು ಮೇಯುವುದೇ ನಿನಗೆ ಗತಿಯಾಗುವುದು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬುದು ನಿನ್ನ ತಿಳಿವಳಿಕೆಗೆ ಬರುವುದರೊಳಗೆ ಏಳು ವರ್ಷ ನಿನಗೆ ಹೀಗೆ ಕಳೆಯುವುದು” ಎಂದು ಆಕಾಶವಾಣಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡುಮೃಗಗಳೊಂದಿಗೆ ವಾಸಿಸುವಿ, ದನಗಳಂತೆ ಹುಲ್ಲುಮೇಯುವದೇ ನಿನಗೆ ಗತಿಯಾಗುವದು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನ್ನ ತಿಳುವಳಿಕೆಗೆ ಬರುವದರೊಳಗೆ ಏಳು ವರುಷ ನಿನಗೆ ಹೀಗೆ ಕಳೆಯುವದು ಎಂದು ಆಕಾಶವಾಣಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ನೀನು ದನಗಳ ಹಾಗೆ ಹುಲ್ಲನ್ನು ಮೇಯುವೆ. ಮಹೋನ್ನತರು ಮನುಷ್ಯರ ರಾಜ್ಯವನ್ನಾಳುವರೆಂದು ತಮ್ಮ ಮನಸ್ಸಿಗೆ ಸರಿ ಬಂದವರಿಗೆ ಅದನ್ನು ಕೊಡುವೆರೆಂದು ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವುವು,” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 4:32
22 ತಿಳಿವುಗಳ ಹೋಲಿಕೆ  

ಸಮಾಜದಿಂದ ಬಹಿಷ್ಕೃತರಾಗಿ, ಮೃಗಬುದ್ಧಿಯುಳ್ಳವರಾಗಿ, ಕಾಡುಕತ್ತೆಗಳ ನಡುವೆ ವಾಸಮಾಡಬೇಕಾಯಿತು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಅದನ್ನು ತಮಗೆ ಇಷ್ಟಬಂದವರಿಗೆ ಒಪ್ಪಿಸುತ್ತಾರೆ ಎಂಬುದನ್ನು ಅವರು ಗ್ರಹಿಸುವ ತನಕ ದನಗಳಂತೆ ಹುಲ್ಲುಮೇಯುವ ಗತಿ ಅವರದಾಯಿತು. ಆಕಾಶದ ಇಬ್ಬನಿ ಅವರ ಮೈಯನ್ನು ತೋಯಿಸುತ್ತಿತ್ತು.”


ನನ್ನ ಮಹಾಶಕ್ತಿಯಿಂದಲೂ ನೀಡುಗೈಯಿಂದಲೂ ಲೋಕವನ್ನೂ ಭೂಮಿಯನ್ನೂ ಅದರ ಮಾನವರನ್ನು ಮತ್ತು ಪ್ರಾಣಿಗಳನ್ನೂ ಸೃಷ್ಟಿಸಿದವನೂ ನಾನೇ. ಈ ನನ್ನ ಸೃಷ್ಟಿಯನ್ನು ನನಗೆ ಸರಿ ತೋಚಿದವನಿಗೆ ಕೊಡಬಲ್ಲೆ.


ಇದರಿಂದ ಭೂನಿವಾಸಿಗಳೆಲ್ಲರು ಸರ್ವೇಶ್ವರನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವರು. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಯಾವಾಗಲೂ ಭಯಭಕ್ತಿಯುಳ್ಳವರಾಗಿರುವರು.


ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೆ ಸರ್ವೇಶ್ವರ ಸ್ವಾಮಿಯ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಕಲ್ಲಿನ ಮಳೆಯು ನಿಂತುಹೋಗುವುವು. ಇದರಿಂದ ಇಡೀ ಲೋಕವು ಸರ್ವೇಶ್ವರನ ಅಧೀನದಲ್ಲಿದೆ ಎಂದು ತಾವು ತಿಳಿದುಕೊಳ್ಳುವಿರಿ.


ಅವನು, “ನಾಳೆಯೇ ಆಗಲಿ” ಎಂದನು. ಅದಕ್ಕೆ ಮೋಶೆ, “ತಮ್ಮ ಮಾತಿನ ಪ್ರಕಾರವೇ ಆಗುವುದು.


ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ಸರ್ವೇಶ್ವರ ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಅಸ್ಸೀರಿಯರ ಕೈಯಿಂದ ಬಿಡಿಸಿರಿ.”


ಇಲ್ಲವಾದರೆ ಈ ಸಾರಿ ವಿಧಿಸುವ ಈ ಬಾಧೆಗಳು ನಿನ್ನ ಪ್ರಜಾಪರಿವಾರದವರಿಗೆ ಮಾತ್ರವಲ್ಲ ನಿನಗೂ ತಗಲುವುದು. ಇದರಿಂದ ಇಡೀ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವೆ.


ಹೆಸರು ಹಿಡಿದು ನಿನ್ನ ಕರೆಯುವ ಸರ್ವೇಶ್ವರ ನಾನು ಕೊಡುವೆ ನಾ ನಿನಗೆ ಕತ್ತಲಲಿ ಬಚ್ಚಿಟ್ಟ ಭಂಡಾರಗಳನು ಗುಪ್ತಸ್ಥಳಗಳಲ್ಲಿ ಮರೆಮಾಡಿರುವ ನಿಧಿನಿಕ್ಷೇಪಗಳನು. ಈ ಪರಿ ಅರಿತುಕೊಳ್ಳುವೆ ನೀನು ನಾನೇ ಇಸ್ರಯೇಲರ ದೇವರೆಂಬುದನು.


ಅವರು ಆಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿದರು. ಅವನನ್ನು ಮರಳಿ ಜೆರುಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟರು. ಆಗ ಸರ್ವೇಶ್ವರಸ್ವಾಮಿಯೇ ದೇವರು ಎಂಬುದು ಅವನಿಗೆ ಮನದಟ್ಟಾಯಿತು.


ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ.


ಈ ಮಾತು ಅವನ ಬಾಯಿಂದ ಹೊರಡುತ್ತಿರುವಾಗಲೆ, “ಎಲೈ ರಾಜ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ಈ ದೈವೋಕ್ತಿಯನ್ನು ಕೇಳು -


ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?


“ತಾವು ಎಲ್ಲಾ ಕಾರ್ಯಗಳನು ನಡೆಸಲು‍ ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ.


ಪರದಲ್ಲಿಹನು ನಮ್ಮ ದೇವನು I ಗೈವನು ತನಗಿಷ್ಟ ಬಂದುದನು II


ಮಾಡುವನು ಪ್ರಭು ತನಗಿಷ್ಟ ಬಂದುದನು I ಭೂಮ್ಯಾಕಾಶ, ಸಮುದ್ರ ಸಾಗರದೊಳು II


ಆತನ ಗಣನೆಗೆ ರಾಷ್ಟ್ರಗಳು ಕಪಿಲೆಯಿಂದ ಉದುರುವ ತುಂತುರುಗಳು ತ್ರಾಸಿನ ತಟ್ಟೆಯ ಮೇಲಿರುವ ಧೂಳಿನ ಕಣಗಳು ದ್ವೀಪಗಳೋ ಆತನ ತೂಕಕ್ಕೆ ಅಣುರೇಣುಗಳು.


ಸಕಲ ರಾಷ್ಟ್ರಗಳು ಆತನ ದೃಷ್ಟಿಗೆ ಏನೂ ಇಲ್ಲದಂತೆ ಅವುಗಳು ಆತನ ಎಣಿಕೆಗೆ ಶುದ್ಧ ಸೊನ್ನೆಯಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು