ದಾನಿಯೇಲ 4:12 - ಕನ್ನಡ ಸತ್ಯವೇದವು C.L. Bible (BSI)12 ಅದರ ಎಲೆಗಳು ಚೆಲುವಾಗಿದ್ದವು. ಅದು ಹಣ್ಣುಗಳಿಂದ ತುಂಬಿತ್ತು. ಅದರಿಂದ ಎಲ್ಲಕ್ಕೂ ಆಹಾರ, ವನ್ಯಮೃಗಗಳಿಗೆ ಅದರ ನೆರಳಿನಲ್ಲಿ ಆಶ್ರಯ, ಆಕಾಶದ ಪಕ್ಷಿಗಳಿಗೆ ಅದರ ಕೊಂಬೆಗಳಲ್ಲಿ ನೆಲೆ, ಎಲ್ಲಾ ಪ್ರಾಣಿಗಳಿಗೂ ಅದರಿಂದ ಪೋಷಣೆ ದೊರಕುತ್ತಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಆದ್ದರಿಂದ ಎಲ್ಲಕ್ಕೂ ಆಹಾರ, ನೆರಳೂ, ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶ ಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಅದರಿಂದ ಎಲ್ಲಕ್ಕೂ ಆಹಾರ, ನೆರಳು ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅದರ ಎಲೆಗಳು ಅಂದವಾಗಿದ್ದವು. ಅದರ ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರವಿತ್ತು. ಕಾಡುಮೃಗಗಳಿಗೆ ಅದರ ಕೆಳಗೆ ನೆರಳಲ್ಲಿ ಆಶ್ರಯ ದೊರಕುತ್ತಿತ್ತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು. ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ದೊರಕುತ್ತಿತ್ತು. ಅಧ್ಯಾಯವನ್ನು ನೋಡಿ |