Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 3:3 - ಕನ್ನಡ ಸತ್ಯವೇದವು C.L. Bible (BSI)

3 ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ನೆರೆದುಬಂದು ಆ ಪ್ರತಿಮೆಯ ಮುಂದೆ ನಿಂತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಉಪರಾಜರು, ರಾಜ್ಯಪಾಲರು, ಅಧಿಕಾರಸ್ಥರು, ನ್ಯಾಯಾಧಿಪತಿಗಳು, ಖಜಾಂಚಿದವರು, ಸಲಹೆಗಾರರು, ಪಂಡಿತರು, ಎಲ್ಲಾ ಪ್ರಾಂತಗಳ ಅಧಿಕಾರಿಗಳು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಕೂಡಿಬಂದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 3:3
11 ತಿಳಿವುಗಳ ಹೋಲಿಕೆ  

ಹೀಗೆ ದೈವಸಂಕಲ್ಪವು ನೆರವೇರಬೇಕೆಂದು ದೇವರೇ ಆ ಜನರನ್ನು ಪ್ರೇರೇಪಿಸುವರು. ಇದೇ ಪ್ರೇರಣೆಯಿಂದಾಗಿ ದೇವರ ವಾಕ್ಯ ನೆರವೇರುವವರೆಗೆ ಅವರು ಒಮ್ಮನಸ್ಸಿನಿಂದ ರಾಜ್ಯಾಧಿಕಾರವನ್ನು ಆ ಮೃಗಕ್ಕೆ ಒಪ್ಪಿಸಿಬಿಡುವರು.


ಅವರು ಒಮ್ಮನಸ್ಸಿನವರಾಗಿ ತಮ್ಮ ಶಕ್ತಿಸಾಮರ್ಥ್ಯವನ್ನೂ ಅಧಿಕಾರವನ್ನೂ ಆ ಮೃಗಕ್ಕೆ ಒಪ್ಪಿಸಿಬಿಡುತ್ತಾರೆ.


ದೇವರೊಡನೆ ಸತ್ಸಂಬಂಧಿತರಾರೂ ಇಲ್ಲ ಸನ್ಮತಿಗಳು ಒರ್ವರೂ ಇಲ್ಲ ಆತನನ್ನು ಅರಸುವವರಂತೂ ಇಲ್ಲವೇ ಇಲ್ಲ.


ಬಳಿಕ ರಾಜ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ್ದ ಆ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭವನ್ನು ಏರ್ಪಡಿಸಿ, ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಸಭೆ ಸೇರಿಸುವಂತೆ ದೂತರನ್ನು ಕಳುಹಿಸಿದನು.


ಆಗ, ಸಾರುವವರು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ-ಕುಲ-ಭಾಷೆಗಳವರೇ, ನಿಮಗೆ ಹೀಗೆಂದು ರಾಜಾಜ್ಞೆಯಾಗಿದೆ:


ಅವರನ್ನು ನೋಡಲು ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ ಇವರೆಲ್ಲರು ಕೂಡಿಬಂದರು. ಅವರಿಗೆ ಬೆಂಕಿಯ ತಾಪವೂ ತಟ್ಟಿಲ್ಲ. ತಲೆಗೂದಲೂ ಸುಟ್ಟಿಲ್ಲ, ಅವರ ಬಟ್ಟೆಬರೆಗೆ ಏನೂ ಆಗಿಲ್ಲ, ಬೆಂಕಿಯ ವಾಸನೆಯೂ ಇಲ್ಲ, ಎಂದು ತಿಳಿದುಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು