Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 12:8 - ಕನ್ನಡ ಸತ್ಯವೇದವು C.L. Bible (BSI)

8 ನನಗೆ ಅದು ಕೇಳಿಸಿತ್ತಾದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯಾ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆ ಮಾಡಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ; ಆಗ ನಾನು - ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು ಎಂದು ಪ್ರಶ್ನೆಮಾಡಲು ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಾನು ಉತ್ತರವನ್ನು ಕೇಳಿದೆ, ಆದರೆ ನನಗೆ ಅದು ಅರ್ಥವಾಗಲಿಲ್ಲ. ಆದ್ದರಿಂದ ನಾನು, “ಸ್ವಾಮೀ, ಈ ಎಲ್ಲಾ ಸಂಗತಿಗಳು ಜರುಗಿದ ಮೇಲೆ ಏನು ಸಂಭವಿಸುವದು?” ಎಂದು ಕೇಳಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಾನು ಅದನ್ನು ಕೇಳಿದೆನು, ಆದರೆ ಗ್ರಹಿಸಲಿಲ್ಲ. ಆಗ ನಾನು, “ನನ್ನ ಒಡೆಯನೇ, ಈ ಸಂಗತಿಗಳ ಅಂತ್ಯವೇನು?” ಎಂದು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 12:8
9 ತಿಳಿವುಗಳ ಹೋಲಿಕೆ  

ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ.


ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು, ಯಾತನೆಯನ್ನು ಮತ್ತು ಅನಂತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸಂದರ್ಭವನ್ನು ಸೂಚಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು.


ಇದೆಲ್ಲ ಶಿಷ್ಯರಿಗೆ ಆಗ ಅರ್ಥವಾಗಲಿಲ್ಲ. ಇದೆಲ್ಲವನ್ನೂ ಬರೆದದ್ದು ಅವರನ್ನು ಕುರಿತೇ; ಆ ಪ್ರಕಾರವೇ ನೆರವೇರಿದೆ ಎಂಬುದನ್ನು ಯೇಸು ಮಹಿಮಾಪದವಿಯನ್ನು ಪಡೆದಾದ ಮೇಲೆ ಅವರು ನೆನಪಿಗೆ ತಂದುಕೊಂಡರು.


ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಿಕೊಳ್ಳಲಿಲ್ಲ. ಈ ಹೇಳಿಕೆ ಅವರಿಗೆ ಒಗಟಾಗಿತ್ತು. ಎಂದೇ ಯೇಸುವಿನ ಮಾತುಗಳು ಅವರಿಗೆ ಅರ್ಥವಾಗಲಿಲ್ಲ.


ಇವರಲ್ಲಿ ಒಬ್ಬನು, ನದಿಯ ನೀರಿನ ಮೇಲ್ಗಡೆ ನಾರಿನ ಹೊದಿಕೆಯನ್ನು ಹೊದ್ದು ನಿಂತಿದ್ದ ದೂತನನ್ನು ನೋಡಿ, “ಈ ಆಶ್ಚರ್ಯಕಾರ್ಯಗಳು ನೆರವೇರಲು ಎಷ್ಟುಕಾಲ ಹಿಡಿಯುವುದು?” ಎಂದು ಕೇಳಿದನು.


ಅಂತ್ಯಕಾಲದಲ್ಲಿ ನಿನ್ನ ಜನರಿಗೆ ಬರಲಿರುವ ಗತಿಯನ್ನು ನಿನಗೆ ತಿಳಿಸುವುದಕ್ಕೋಸ್ಕರ ಬಂದೆ. ಆ ಕಾಲದ ಸಂಗತಿಯನ್ನು ವ್ಯಕ್ತಪಡಿಸುವ ಇನ್ನೊಂದು ದರ್ಶನವಿದೆ,” ಎಂದು ಹೇಳಿದನು.


ಆಗ ಒಬ್ಬ ದೇವದೂತನು ಮಾತಾಡುವುದು ನನಗೆ ಕೇಳಿಸಿತು. ಮಾತಾಡುವವನನ್ನು ಮತ್ತೊಬ್ಬ ದೇವದೂತನು ಸಂಬೋಧಿಸಿ: “ಅನುದಿನದ ಬಲಿಯರ್ಪಣೆಯನ್ನು ನಿಲ್ಲಿಸುವುದು, ಭಯಂಕರವಾದ ದೇವದ್ರೋಹ ಮಾಡುವುದು, ಪವಿತ್ರಾಲಯವನ್ನೂ ದೇವಭಕ್ತಗಣವನ್ನೂ ತುಳಿಯುವುದೂ-ಕನಸಿನ ಇಂಥಾ ಕಾರ್ಯಗಳು ಎಷ್ಟುಕಾಲ ನಡೆಯುವುವು?” ಎಂದು ಪ್ರಶ್ನೆಮಾಡಿದನು.


ಆ ದೂತ ಎಡಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಯುಗ, ಎರಡು ಯುಗ, ಮತ್ತು ಅರ್ಧ ಯುಗ ಕಳೆಯಬೇಕು. ದೇವಜನರಿಗಾಗುವ ಹಿಂಸೆಬಾಧೆಗಳು ಸಂಪೂರ್ಣವಾಗಿ ನಿಂತಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.


ಅವನು, “ದಾನಿಯೇಲನೇ ಹೋಗು; ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಲ್ಪಟ್ಟು ಮುದ್ರಿತವಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು