ದಾನಿಯೇಲ 11:4 - ಕನ್ನಡ ಸತ್ಯವೇದವು C.L. Bible (BSI)4 ಆದರೆ ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯ ಒಡೆದು ನಾಲ್ಕು ದಿಕ್ಕುಗಳಿಗೂ ಸೀಳಿಹೋಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ಪ್ರಬಲವಾಗಿ ಇದ್ದಂತೆ ಅದು ಇನ್ನು ಪ್ರಬಲವಾಗದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು. ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ [ನಾಲ್ಕು] ಪಾಲಾಗುವದು; ಅದು ಅವನ ಸಂತತಿಗೆ ಭಾಗವಾಗದು, ಅವನ ಆಳಿಕೆಯಲ್ಲಿ ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು; ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಆ ರಾಜನು ಬಂದ ಮೇಲೆ ಅವನ ರಾಜ್ಯವು ಒಡೆಯುವದು. ಅವನ ರಾಜ್ಯವು ನಾಲ್ಕು ಹೋಳಾಗಿ ಜಗತ್ತಿನ ನಾಲ್ಕು ದಿಕ್ಕುಗಳಲ್ಲಿ ಹಂಚಿಹೋಗುವುದು. ಅವನ ರಾಜ್ಯವು ಅವನ ಮಕ್ಕಳಲ್ಲಿ ಅಥವಾ ಮೊಮ್ಮಕ್ಕಳಲ್ಲಿ ಹಂಚಲ್ಪಡುವದಿಲ್ಲ. ಅವನ ರಾಜ್ಯಕ್ಕೆ ಅವನು ಮೊದಲು ಹೊಂದಿದ್ದ ಅಧಿಕಾರವು ಇರುವದಿಲ್ಲ. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಸಿದುಕೊಂಡು ಬೇರೆ ಜನರಿಗೆ ಕೊಡಲಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವನು ಉದಯಿಸಿದ ನಂತರ, ಅವನ ರಾಜ್ಯ ಒಡೆದು ಆಕಾಶದ ನಾಲ್ಕು ದಿಕ್ಕುಗಳಿಗೂ ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಅದು ಇನ್ನು ಪ್ರಬಲವಾಗದು. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಿತ್ತುಕೊಂಡು ಇತರರಿಗೆ ನೀಡಲಾಗುವುದು. ಅಧ್ಯಾಯವನ್ನು ನೋಡಿ |