Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 11:37 - ಕನ್ನಡ ಸತ್ಯವೇದವು C.L. Bible (BSI)

37 ಅವನು ತನ್ನ ಪೂರ್ವಜರ ದೇವರನ್ನಾಗಲಿ, ಮಹಿಳೆಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನೇ ಆಗಲಿ, ಲಕ್ಷಿಸನು. ಎಲ್ಲ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಅವನು ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಸ್ತ್ರೀಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನಾಗಲಿ ಲಕ್ಷಿಸುವುದಿಲ್ಲ. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಅವನು ತನ್ನ ಪಿತೃಗಳ ದೇವರುಗಳನ್ನಾಗಲಿ ಸ್ತ್ರೀಯರು ಮೋಹಿಸುವ ದೇವರನ್ನಾಗಲಿ ಯಾವ ದೇವರನ್ನಾಗಲಿ ಲಕ್ಷಿಸನು. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 “ಆ ಉತ್ತರದ ರಾಜನು ಅವನ ಪೂರ್ವಿಕರು ಪೂಜಿಸಿದ ದೇವರುಗಳನ್ನೂ ಸ್ತ್ರೀಯರು ಪೂಜಿಸುವ ವಿಗ್ರಹಗಳನ್ನೂ ಲಕ್ಷಿಸನು. ಅವನು ಯಾವ ದೇವರನ್ನೂ ಲಕ್ಷಿಸನು. ಅದಕ್ಕೆ ಬದಲಾಗಿ ಅವನು ತನ್ನನ್ನು ತಾನು ಹೊಗಳಿಕೊಳ್ಳುವನು; ತನ್ನನ್ನು ಎಲ್ಲ ದೇವರುಗಳಿಗಿಂತಲೂ ಶ್ರೇಷ್ಠನೆಂದು ತೋರಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಅವನು ತನ್ನ ಪಿತೃಗಳ ದೇವರನ್ನಾಗಲೀ, ಸ್ತ್ರೀಯರಿಂದ ಅಪೇಕ್ಷಿಸಿದವರನ್ನಾಗಲೀ ಅವನು ಲಕ್ಷಿಸುವುದಿಲ್ಲ, ಯಾವ ದೇವರನ್ನೂ ಲಕ್ಷಿಸುವುದಿಲ್ಲ; ಆದರೆ ಅವನು ಎಲ್ಲವುಗಳಿಗಿಂತ ಹೆಚ್ಚಿ, ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 11:37
14 ತಿಳಿವುಗಳ ಹೋಲಿಕೆ  

ದೇವರೆನಿಸಿಕೊಳ್ಳುವ ಎಲ್ಲವನ್ನೂ ಅಲ್ಲಗಳೆಯುವನು; ಆರಾಧನೆಗೈಯುವ ಎಲ್ಲವನ್ನೂ ಇಲ್ಲಗೊಳಿಸುವನು; ಇವೆಲ್ಲಕ್ಕೂ ತಾವೇ ಮಿಗಿಲೆಂದು ಭಾವಿಸಿ ದೇವಮಂದಿರದಲ್ಲಿ ಕುಳಿತುಕೊಂಡು ತಾನೇ ದೇವರೆಂದು ಘೋಷಿಸಿಕೊಳ್ಳುವನು.


‘ಹತ್ತಿಹೋಗುವೆನು ನಾನು ಆಕಾಶಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ.


ಮದುವೆಯಾಗಬಾರದು, ಇಂತಿಂಥ ಆಹಾರವನ್ನು ಸೇವಿಸಬಾರದು ಎಂದು ಬೋಧಿಸುತ್ತಾರೆ. ಆದರೆ ಸತ್ಯವನ್ನು ಅರಿತು ಯಾರು ವಿಶ್ವಾಸಿಗಳಾಗಿದ್ದಾರೋ ಅಂಥವರು ಎಲ್ಲ ಆಹಾರಪದಾರ್ಥಗಳನ್ನು ಕೃತಜ್ಞತಾಸ್ತುತಿಯೊಡನೆ ಸೇವಿಸಲೆಂದೇ ದೇವರು ಅವುಗಳನ್ನು ಸೃಷ್ಟಿಸಿದ್ದಾರೆ.


“ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದುಬಿಡುವೆನು. ಆದರೂ ನೀನು ಗೋಳಾಡಬೇಡ, ಅಳಬೇಡ, ಕಣ್ಣೀರು ಸುರಿಸಬೇಡ.


ನಾನು ನನ್ನ ನಲ್ಲನ ನಲ್ಲೆ ಆತನ ಆಸೆ ನನ್ನ ಮೇಲೆ !


ಆಗ ಹಿಡಿದ ಸೆರೆಯವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರು ಕಂಡು ಮೋಹಿಸಿ ಮದುವೆಮಾಡಿಕೊಳ್ಳಬೇಕೆಂದು ಅಪೇಕ್ಷಿಸಿದರೆ, ಅವಳನ್ನು ಮನೆಗೆ ಕರೆದುಕೊಂಡು ಬರಲಿ;


‘ನೆರೆಯವನ ಹೆಂಡತಿಯನ್ನು ಅಪೇಕ್ಷಿಸಬೇಡ; ಅವನ ಮನೆ, ಹೊಲ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು,.


ಬಳಿಕ ಆ ಮಹಿಳೆಗೆ: “ಹೆಚ್ಚಿಸುವೆನು ಪ್ರಸವಕಾಲದ ನಿನ್ನ ವೇದನೆಯನ್ನು ಹೆರುವೆ ನೀನು ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ ಒಳಗಾಗುವೆ ನೀನು ಆತನ ಒಡೆತನಕ್ಕೆ."


ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು, ನೀವು ದೇವರಂತೆ ಆಗಿ ಒಳಿತು - ಕೆಡಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು.


ಅದು ಮಾತ್ರವಲ್ಲ, ಆ ನಕ್ಷತ್ರಗಣದ ಅಧಿಪತಿಯನ್ನೇ ಎದುರಿಸುವಷ್ಟು ಉಬ್ಬಿಹೋಗಿ ಅನುದಿನದ ಬಲಿಯರ್ಪಣೆ ಆತನಿಗೆ ಸಲ್ಲದಂತೆ ಮಾಡಿತು.


“(ಉತ್ತರದ) ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲ ದೇವರುಗಳಿಗಿಂತಲೂ ದೊಡ್ಡವನೆಂದು ತನ್ನನ್ನೇ ಹೆಚ್ಚಿಸಿಕೊಂಡು ಗರ್ವಿಷ್ಠನಾಗುವನು. ದೇವಾಧಿದೇವರನ್ನು ಅತಿಯಾಗಿ ದೂಷಿಸುವನು. ನಿಮ್ಮ ಮೇಲಿನ ದೈವಕೋಪ ತೀರುವ ತನಕ ಅವನು ವೃದ್ಧಿಯಾಗುವನು. ದೈವಸಂಕಲ್ಪ ನೆರವೇರಲೇಬೇಕು.


ಕುಲದೇವರಿಗೆ ಬದಲಾಗಿ ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.


‘ಏರುವೆ ಉನ್ನತ ಮೇಘಮಂಡಲದ ಮೇಲಕೆ, ಸರಿಸಮಾನನಾಗುವೆ ಉನ್ನತೋನ್ನತನಿಗೆ’.


“ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು