Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 11:30 - ಕನ್ನಡ ಸತ್ಯವೇದವು C.L. Bible (BSI)

30 ಅವನಿಗೆ ವಿರುದ್ಧವಾಗಿ ರೋಮಿನ ಹಡಗುಗಳು ಬರಲು ಅವನು ಎದೆಗುಂದಿ ಹಿಂದಿರುಗುವನು. ಪವಿತ್ರ ಒಡಂಬಡಿಕೆಯ ವಿರುದ್ಧ ಮತ್ಸರಗೊಂಡು ಸಾಧ್ಯವಾದಷ್ಟೂ ಹಾನಿಮಾಡುವನು. ಸ್ವದೇಶಕ್ಕೆ ಹಿಂದಿರುಗಿ ಪವಿತ್ರ ಒಡಂಬಡಿಕೆಯನ್ನು ತೊರೆದವರಿಗೆ ಆದರ ತೋರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅವನ ವಿರುದ್ಧವಾಗಿ ಕಿತ್ತೀಮಿನ ಹಡಗುಗಳು ಬರಲು, ಅವನು ಎದೆಗುಂದಿ ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ತನಗೆ ಇಷ್ಟ ಬಂದಂತೆ ಮಾಡುವನು. ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆಯನ್ನು ತೊರೆದವರನ್ನು ಕಟಾಕ್ಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅವನಿಗೆ ವಿರುದ್ಧವಾಗಿ ಕಿತ್ತೀವಿುನ ಹಡಗುಗಳು ಬರಲು ಅವನು ಎದೆಗುಂದಿ ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ಮಾಡುವಷ್ಟು ಮಾಡುವನು; ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆ ತೊರೆದವರನ್ನು ಕಟಾಕ್ಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಕಿತ್ತೀಮಿನ ಹಡಗುಗಳು ಬಂದು ಉತ್ತರದ ರಾಜನೊಂದಿಗೆ ಯುದ್ಧ ಮಾಡುವವು. ಆ ಹಡಗುಗಳು ಬರುವದನ್ನು ಅವನು ನೋಡಿ ಹೆದರಿಕೊಳ್ಳುವನು. ಅವನು ಪರಿಶುದ್ಧ ನಿಬಂಧನೆಯ ಮೇಲೆ ಕೋಪಿಸಿಕೊಂಡು ಹಿಂತಿರುಗುವನು. ಅವನು ಹಿಂತಿರುಗಿದ ಮೇಲೆ ಪರಿಶುದ್ಧ ನಿಬಂಧನೆಯನ್ನು ತೊರೆದವರಿಗೆ ಸಹಾಯ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಏಕೆಂದರೆ ಕಿತ್ತೀಮಿನ ಹಡಗುಗಳು ಅವನಿಗೆ ವಿರೋಧವಾಗಿ ಬರುವುವು. ಆದ್ದರಿಂದ ಅವನು ಎದೆಗುಂದಿ, ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿ ಕೋಪಿಸಿಕೊಳ್ಳುವನು. ಹಿಂದಿರುಗಿ ಬಂದು ಪರಿಶುದ್ಧ ಒಡಂಬಡಿಕೆಯನ್ನು ತೊರೆದವರಿಗೆ ದಯೆ ತೋರಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 11:30
13 ತಿಳಿವುಗಳ ಹೋಲಿಕೆ  

ಯಾವಾನನ ಮಕ್ಕಳು - ಎಲಿಷಾ, ಸ್ಪೇಯಿನ್ (ತಾರ್ಷಿಸ್), ಸೈಪ್ರಸ್ (ಕಿತ್ತೀಮ್) ಮತ್ತು ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವುಗಳಲ್ಲಿ ಹರಡಿಕೊಂಡರು.


‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್ ಜರನ್ನೂ; ಅವರಿಗೂ ನಾಶವುಂಟಾಗುವುದು.”


ಅನಂತರ ಉತ್ತರದ ಆ ನೀಚರಾಜನು ಬಹು ಆಸ್ತಿಯನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂತಿರುಗುವನು. ಅವನ ಮನಸ್ಸು ಪವಿತ್ರ ಒಡಂಬಡಿಕೆಗೆ ವಿರುದ್ಧವಾಗಿರುವುದು. ಇಷ್ಟಬಂದ ಹಾಗೆ ವರ್ತಿಸಿ ಮತ್ತೆ ಸ್ವದೇಶವನ್ನು ಸೇರುವನು.


“ಸೈಪ್ರಸ್ ದ್ವೀಪಗಳಿಗೆ ಹೋಗಿ ನೋಡಿ; ಕೇದಾರ್ ನಾಡಿಗೆ ಕಳಿಸಿ ವಿಚಾರಮಾಡಿ, ಇಂಥ ಕಾರ್ಯ ಎಲ್ಲಿಯಾದರು ನಡೆಯಿತೆ ಎಂದು ಚೆನ್ನಾಗಿ ಆಲೋಚಿಸಿರಿ.


“ಹಿಂಸೆಗೆ ಈಡಾದ ಕನ್ಯೆಯಂತೆ ಇರುವ ಸಿದೋನ್ ನಗರವೇ, ಇನ್ನು ಮೇಲೆ ನಿನಗಿರದು ಸಂತೃಪ್ತಿ: ಸಮುದ್ರ ದಾಟಿ ಸೈಪ್ರಸ್ಸಿಗೆ ಹಾದುಹೋಗು, ಅಲ್ಲಿಯೂ ನಿನಗೆ ದೊರಕದು ವಿಶ್ರಾಂತಿ,” ಎಂದು ಹೇಳಿದ್ದಾರೆ.


ಟೈರ್ ನಗರವನ್ನು ಕುರಿತ ದೈವೋಕ್ತಿ : “ಗೋಳಾಡಿರಿ ತಾರ್ಷಿಷಿನ ನಾವಿಕರೆಲ್ಲ, ಹಾಳಾಗಿವೆ ನಿಮ್ಮ ಬಂದರುಗಳೆಲ್ಲ; ಹಡಗುಗಳಿಗೆ ರೇವಿಲ್ಲ, ನೆಲೆಯಿಲ್ಲ, ಸೈಪ್ರಸ್ಸಿನಿಂದ ಬಂದ ನಾವಿಕರಿಂದ ಈ ಸುದ್ದಿ ನಿಮಗೆ ತಿಳಿಯುವುದು.”


ಎಂದೇ ಸ್ವರ್ಗಲೋಕ, ಸ್ವರ್ಗನಿವಾಸಿಗಳೆಲ್ಲ ನಲಿಯಲಿ ! ಕ್ಷಿತಿಸಾಗರಗಳಿಗೆ ಒದಗಿದೆ ದುರ್ಗತಿ. ಬಂದಿಹನು ಪಿಶಾಚಿ ಕಡುರೋಷದಿಂದ ತನಗಿರುವ ಕಾಲ ತುಸುವೆಂಬ ತವಕದಿಂದ.”


ಆ ದಿನಗಳಲ್ಲಿ ಬಹುಮಂದಿ ವಿಶ್ವಾಸಭ್ರಷ್ಟರಾಗುವರು, ಒಬ್ಬರಿಗೊಬ್ಬರು ದ್ರೋಹ ಬಗೆಯುವರು. ಒಬ್ಬರನ್ನೊಬ್ಬರು ದ್ವೇಷಿಸುವರು.


ಅವನು ಮಹೋನ್ನತ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು (ಸಂತರನ್ನು) ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು.


ನಿನ್ನ ಹುಟ್ಟುಗಳು ರೂಪಿಸಲಾಗಿವೆ ಬಾಷಾನಿನ ಅಲ್ಲೋನ್ ಮರದಿಂದ ನಿನ್ನ ಮೇಲ್ಮಾಳಿಗೆ ಕಟ್ಟಲಾಗಿದೆ ಕಿತ್ತೀಮ್ ದ್ವೀಪದ ತಿಲಕ ಹಲಗೆಯಿಂದ, ಕೆತ್ತಲಾಗಿದೆ ದಂತದಿಂದ.


ನಾನು ಸೂಕ್ಷ್ಮವಾಗಿ ವಿಚಾರಮಾಡಿದಾಗ, ನನ್ನ ಬಗ್ಗೆ ಆ ಕಾಲಜ್ಞಾನ ವಚನವನ್ನು ಉಚ್ಚರಿಸುವುದಕ್ಕೆ ಇವನನ್ನು ಪ್ರೇರಿಸಿದವನು ದೇವರಲ್ಲ; ಟೋಬೀಯನೂ ಸನ್ಬಲ್ಲಟನೂ ಇವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದರೆಂದು ನನಗೆ ಗೊತ್ತು ಆಯಿತು.


ಎಲೀಷ, ಸ್ಪೇನ್, ಸೈಪ್ರಸ್, ದೋದಾನೀಮ್ ಎಂಬ ಸ್ಥಳಗಳವರು ಯಾವಾನನ ಮಕ್ಕಳು.


“ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣದೇಶದ ಮೇಲೆ ದಾಳಿಮಾಡುವನು. ಆದರೆ ಮೊದಲು ಆದಂತೆಯೇ ಎರಡನೇಯ ಸಲ ಆಗದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು