Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 10:1 - ಕನ್ನಡ ಸತ್ಯವೇದವು C.L. Bible (BSI)

1 ಪರ್ಷಿಯದ ರಾಜನಾದ ಸೈರೆಷನ ಆಳ್ವಿಕೆಯ ಮೂರನೇ ವರ್ಷದಲ್ಲಿ ಬೇಲ್ತೆಶಚ್ಚೆರನೆಂಬ ದಾನಿಯೇಲನಿಗೆ ಒಂದು ಸಂಗತಿ ಪ್ರಕಟವಾಯಿತು. ಅದು ಮಹಾ ಹೋರಾಟದ ಸಂಗತಿ, ಸತ್ಯವಾದ ಸಂಗತಿ. ಅದರ ಅರ್ಥವನ್ನು ತಾನು ಕಂಡ ದರ್ಶನದಿಂದ ಮನದಟ್ಟು ಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಪಾರಸಿಯ ರಾಜನಾದ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಅದು ಮಹಾಹೊರಾಟದ ಸಂಗತಿ ಸತ್ಯವಾದ ಸಂಗತಿ; ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮನದಟ್ಟು ಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಪಾರಸಿಯ ರಾಜನಾದ ಕೋರೆಷನ ಆಳಿಕೆಯ ಮೂರನೆಯ ವರುಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಬಹು ಕಷ್ಟದ ಗಡುವಿನ ಆ ಸಂಗತಿಯು ಸತ್ಯ; ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮಂದಟ್ಟುಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಕೋರೆಷನು ಪಾರಸಿಯ ರಾಜನಾಗಿದ್ದನು. ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. (ದಾನಿಯೇಲನ ಇನ್ನೊಂದು ಹೆಸರು ಬೇಲ್ತೆಶಚ್ಚರ.) ಈ ಸಂಗತಿ ಸತ್ಯವಾದುದು; ಆದರೆ ತಿಳಿದುಕೊಳ್ಳಲು ಬಹಳ ಕಷ್ಟಕರವಾಗಿತ್ತು. ದಾನಿಯೇಲನು ಈ ಸಂಗತಿಯನ್ನು ತಿಳಿದುಕೊಂಡನು. ಒಂದು ದರ್ಶನದಲ್ಲಿ ಅದರ ಬಗ್ಗೆ ಅವನಿಗೆ ವಿವರಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಪಾರಸಿಯ ಅರಸ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಪ್ರಕಟಣೆಯಾಯಿತು. ಅದರ ಸಂದೇಶವು ಸತ್ಯವಾದದ್ದು. ಅದು ಮಹಾ ಯುದ್ಧ ವಿಷಯವಾಗಿದೆ. ಸಂದೇಶದ ಅರ್ಥವು ಅವನಿಗೆ ಒಂದು ದರ್ಶನದಲ್ಲಿ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 10:1
28 ತಿಳಿವುಗಳ ಹೋಲಿಕೆ  

ಕನಸಿನಲ್ಲಿ ತಿಳಿಸಲಾದ ಉದಯಾಸ್ತಮಾನಗಳ ವಿಷಯ ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹುದೂರದ ಕಾಲದ್ದು,” ಎಂದು ಹೇಳಿದನು.


ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲೂ ಪರ್ಷಿಯನಾದ ಸೈರೆಷನ ಆಳ್ವಿಕೆಯಲ್ಲೂ ಪ್ರವರ್ಧಿಸುತ್ತಾ ಬಾಳಿದನು.


ದಾನಿಯೇಲನು ರಾಜ ಸೈರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.


ಕಂಚುಕಿಯರ ನಾಯಕನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ‘ಬೇಲ್ತೆಶಚ್ಚರ್’, ಹನನ್ಯನಿಗೆ ‘ಶದ್ರಕ್’, ಮಿಶಾಯೇಲನಿಗೆ ‘ಮೇಶಕ್’, ಹಾಗೂ ಅಜರ್ಯನಿಗೆ ‘ಅಬೇದ್‍ನೆಗೋ’, ಎಂಬ ಹೆಸರಿಟ್ಟನು.


ಹೀಗಿರಲು ದೇವರು ಆ ನಾಲ್ಕುಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವೀಣನಾದನು.


ಅನಂತರ ದೇವದೂತನು, “ ‘ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು’ ಎಂದು ಬರೆ,” ಎಂದು ನನಗೆ ಆಜ್ಞಾಪಿಸಿದನು. “ಇವು ದೇವರ ಸತ್ಯವಾದ ವಾಕ್ಯಗಳು,” ಎಂದು ಸಹ ತಿಳಿಸಿದನು.


ಅವನು, “ದಾನಿಯೇಲನೇ ಹೋಗು; ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಲ್ಪಟ್ಟು ಮುದ್ರಿತವಾಗಿವೆ.


“ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು; ಇವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದವರೆಗೆ ಮರೆಯಾಗಿರಲಿ. ಬಹುಜನರು ಅತ್ತಿತ್ತ ಅಲೆದಾಡುವರು (ಸತ್ಯಕ್ಕಾಗಿ). ಅಧರ್ಮ ಹೆಚ್ಚುತ್ತಿರುವುದು.”


ಅಂತ್ಯಕಾಲದಲ್ಲಿ ನಿನ್ನ ಜನರಿಗೆ ಬರಲಿರುವ ಗತಿಯನ್ನು ನಿನಗೆ ತಿಳಿಸುವುದಕ್ಕೋಸ್ಕರ ಬಂದೆ. ಆ ಕಾಲದ ಸಂಗತಿಯನ್ನು ವ್ಯಕ್ತಪಡಿಸುವ ಇನ್ನೊಂದು ದರ್ಶನವಿದೆ,” ಎಂದು ಹೇಳಿದನು.


ಆಗ ದಾನಿಯೇಲನು ರಾಜನಿಗೆ, “ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು.


ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ.


ಕೋರೆಷನಿಗೆ ಇಂತೆನ್ನುವೆನು ನಾನು : ನನ್ನ ಮಂದೆ ಕಾಯುವವನು ನೀನು ನನ್ನ ಇಷ್ಟಾರ್ಥವನು ನೆರವೇರಿಸುವವನು ನೀನು; 'ಪುನಃ ನಿರ್ಮಾಣವಾಗುವೆ' ಎನ್ನುವೆ ಜೆರುಸಲೇಮಿಗೆ, ನೀನು; ‘ಪುನಃ ನಿನಗೆ ಅಸ್ತಿವಾರ ಹಾಕಿಸುವೆ’ ಎನ್ನುವೆ ಆ ದೇವಾಲಯಕೆ ನೀನು.”


ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗೈ ಹಾಗು ಇದ್ದೋವಿನ ಮಗ ಜೆಕರೀಯ ಅವರ ಪ್ರಬೋಧನೆಯಿಂದ ಪ್ರೇರಿತರಾಗಿ, ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಯೇಲ್ ದೇವರ ಆಜ್ಞಾನುಸಾರ ಪರ್ಷಿಯದ ರಾಜ ಸೈರಸನ, ದಾರ್ಯಾವೆಷ್ ಹಾಗು ಅರ್ತಷಸ್ತ ಅವರ ಅಪ್ಪಣೆಯ ಆಧಾರದಿಂದ ಕಟ್ಟಡವನ್ನು ಮುಗಿಸಿದರು.


“ಅರಸ ಸೈರಸನ ಮೊದಲನೆಯ ವರ್ಷದಲ್ಲಿ, ಅರಸ ಸೈರಸನು ಜೆರುಸಲೇಮಿನ ದೇವಾಲಯದ ಬಗ್ಗೆ ಕೊಟ್ಟ ಅಪ್ಪಣೆ ಇದು: ಬಲವಾದ ಅಸ್ತಿವಾರವನ್ನು ಹಾಕಿ, ಬಲಿಸಮರ್ಪಣೆಗಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಎತ್ತರ ಇಪ್ಪತ್ತೇಳು ಮೀಟರ್, ಅಗಲ ಇಪ್ಪತ್ತೇಳು ಮೀಟರ್ ಇರಬೇಕು.


ಅವರ ಉದ್ದೇಶವನ್ನು ತಡೆಗಟ್ಟಲು ಹಣಕೊಟ್ಟು ವಕೀಲರನ್ನು ಇಟ್ಟರು. ಈ ಪ್ರಕರಣ ಪರ್ಷಿಯರಾಜ ಸೈರಸನ ಕಾಲದಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯವರೆಗೂ ನಡೆಯಿತು.


ಆಗ ಜೆರುಬ್ಬಾಬೆಲ್, ಯೇಷೂವ ಹಾಗು ಬೇರೆ ಇಸ್ರಯೇಲ್ ಗೋತ್ರಪ್ರಧಾನರು ಅವರಿಗೆ, “ನಮ್ಮ ದೇವರ ಆಲಯವನ್ನು ಕಟ್ಟುವುದರಲ್ಲಿ ನೀವು ನಮ್ಮೊಡನೆ ಸೇರಲೇಕೂಡದು; ಪರ್ಷಿಯರಾಜ ಸೈರಸನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಯೇಲ್ ದೇವರಾದ ಸರ್ವೇಶ್ವರನ ಆಲಯವನ್ನು ಕಟ್ಟಬೇಕು,” ಎಂದು ಉತ್ತರಕೊಟ್ಟರು.


ಪರ್ಷಿಯದ ಅರಸ ಸೈರಸನ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ಕಾರ್ಯಗತ ಮಾಡಿದರು: ಆ ಪರ್ಷಿಯದ ರಾಜ ಕೋರೆಷನ ಮನಸ್ಸನ್ನು ಪ್ರೇರಿಸಿದರು; ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ,


ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.


ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ,” ಎಂದನು.


“ಈಗ ಸತ್ಯಾಂಶವನ್ನು ತಿಳಿಸುತ್ತೇನೆ, ಕೇಳು: ಪರ್ಷಿಯ ದೇಶದಲ್ಲಿ ಇನ್ನೂ ಮೂವರು ರಾಜರು ಏಳುವರು. ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು. ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧ ತನ್ನ ಬಲವನ್ನೆಲ್ಲ ಪ್ರಯೋಗಿಸುವನು.


ಆಗ, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಇವನಿಗೆ ತಿಳಿಯಪಡಿಸು,” ಎಂದು ಮನುಷ್ಯ ಧ್ವನಿಯಂಥ ಒಂದು ವಾಣಿ ಊಲಾ ಕಾಲುವೆಯ ನಡುವೆ ನನಗೆ ಕೇಳಿಸಿತು.


ಹೌದು, ‘ಬೇಲ್ತೆಶಚ್ಚರ’ನೆಂಬ ಹೆಸರನ್ನು ರಾಜನಿಂದ ಹೊಂದಿದ ಆ ದಾನಿಯೇಲನು ಪರಮ ಬುದ್ಧಿವಂತ, ಜ್ಞಾನಿ, ವಿವೇಕಿ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನ, ಒಗಟು ಬಿಡಿಸುವ ಚಮತ್ಕಾರ, ಗುಂಜುಗಂಟು ಬಿಚ್ಚುವ ಚಾತುರ್ಯ ಅವನಲ್ಲಿ ತೋರಿಬಂದವು. ಆದ್ದರಿಂದಲೇ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ದಾನಿಯೇಲನನ್ನು ಈಗಲೇ ಕರೆಯಿಸಿರಿ. ಆತ ಬರಹದ ಅರ್ಥವನ್ನು ವಿವರಿಸುವನು,” ಎಂದಳು.


ನನ್ನ ದೇವರ ಹೆಸರು ಸೇರಿರುವ ‘ಬೇಲ್ತೆಶಚ್ಚರ’ ಎಂಬ ಅಡ್ಡಹೆಸರನ್ನು ಹೊಂದಿದ ದಾನಿಯೇಲನು ಕೊನೆಗೆ ನನ್ನ ಬಳಿಗೆ ಬಂದ. ಪರಿಶುದ್ಧ ದೇವರ ಆತ್ಮ ಅವನಲ್ಲಿತ್ತು. ಅವನಿಗೆ ನನ್ನ ಕನಸನ್ನು ಹೀಗೆ ತಿಳಿಸಿದೆ.


ಆದರೆ ಪರ್ಷಿಯ ರಾಜನಾದ ಸೈರಸನಿಂದ ಪಡೆದುಕೊಂಡ ಅಪ್ಪಣೆಯ ಮೇರೆಗೆ ಜನರು ಕಲ್ಲುಕುಟಿಗನಿಗೆ ಹಾಗು ಬಡಗಿಗೆ ಹಣವನ್ನು ಕೊಟ್ಟಿದ್ದರು. ಅಂತೆಯೇ ಲೆಬನೋನಿನಿಂದ ಸಮುದ್ರ ಮಾರ್ಗವಾಗಿ, ಜೊಪ್ಪಕ್ಕೆ ದೇವದಾರು ಮರಗಳನ್ನು ತರತಕ್ಕ ಸಿದೋನ್ಯರಿಗೆ ಹಾಗು ಟೈರಿನವರಿಗೆ ಅನ್ನಪಾನಗಳನ್ನೂ ಎಣ್ಣೆಯನ್ನೂ ಕೊಟ್ಟಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು