ತೀತನಿಗೆ 3:9 - ಕನ್ನಡ ಸತ್ಯವೇದವು C.L. Bible (BSI)9 ಹುರುಳಿಲ್ಲದ ತರ್ಕಗಳಿಂದಲೂ ಉದ್ದುದ್ದ ವಂಶಾವಳಿಗಳಿಂದಲೂ ಕಲಹ ಕಚ್ಚಾಟಗಳಿಂದಲೂ ಧರ್ಮಶಾಸ್ತ್ರವನ್ನು ಕುರಿತಾದ ವಾಗ್ವಾದಗಳಿಂದಲೂ ನೀನು ದೂರವಿರು. ಅವು ನಿಷ್ಪ್ರಯೋಜಕ ಹಾಗೂ ವ್ಯರ್ಥವಾದುವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆದರೆ ಬುದ್ಧಿಯಿಲ್ಲದ ತರ್ಕಗಳಿಂದಲೂ, ವಂಶಾವಳಿಗಳಿಂದಲೂ, ಜಗಳಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನಿಯಮದ ವಿಷಯವಾಗಿರುವ ವಾಗ್ವಾದಗಳಿಗೂ ದೂರವಾಗಿರು. ಏಕೆಂದರೆ ಅವು ನಿಷ್ಪ್ರಯೋಜನವಾದವುಗಳೂ ವ್ಯರ್ಥವಾದವುಗಳೂ ಆಗಿವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ಖರೆ ಘರಾನಾಂಚ್ಯಾ ಸಾಟ್ನಿ ಹೊತ್ತೊ ವಾದ್ ಮೊಯ್ಜೆಚ್ಯಾ ಕರಾರಾಂಚ್ಯಾ ವಿಶಯಾಚೊ ಝಗ್ಡೊ, ವಾದ್ ವಿವಾದ್ ಅನಿ ಪಿಶಾಪಾನಾಚ್ಯಾ ವಾದಾತ್ನಾ ಧುರ್ ರ್‍ಹಾ, ಕಶ್ಯಾಕ್ ಮಟ್ಲ್ಯಾರ್ ತೆಜಾ ವೈನಾ ಕಾಯ್ಬಿ ಫಾಯ್ದೊ ನಾ. ಅಧ್ಯಾಯವನ್ನು ನೋಡಿ |