ತೀತನಿಗೆ 1:10 - ಕನ್ನಡ ಸತ್ಯವೇದವು C.L. Bible (BSI)10 ಇತ್ತೀಚೆಗೆ ಅವಿಧೇಯರು, ಜೊಳ್ಳು ಮಾತಿನವರು ಹಾಗೂ ವಂಚಕಬೋಧಕರು ತಲೆ ಎತ್ತಿದ್ದಾರೆ. ಅವರಲ್ಲಿ ಕ್ರೈಸ್ತರಾಗಿರುವ ಯೆಹೂದ್ಯರು ಸಾಕಷ್ಟು ಮಂದಿ ಇದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಅನೇಕರು ಬರೀ ಮಾತಿನವರಾಗಿಯೂ ಮೋಸಗಾರರಾಗಿಯೂ ಇದ್ದು ಅಧಿಕಾರಕ್ಕೆ ಒಳಗಾಗದವರಾಗಿದ್ದಾರೆ; ಅವರೊಳಗೆ ಹೆಚ್ಚು ಜನರು ಸುನ್ನತಿಯವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಏಕೆಂದರೆ, ಅನೇಕ ದಂಗೆಕೋರ ಜನರೂ ಬರೀ ಮಾತನಾಡುವವರೂ ಮೋಸಗೊಳಿಸುವವರೂ ಮುಖ್ಯವಾಗಿ ಸುನ್ನತಿಯಾಗಬೇಕೆಂದು ಹೇಳುವ ಗುಂಪಿನವರೂ ಇದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ಅಪ್ನಾಚಿ ಜವಾಬ್ದಾರಿ ಸಂಬಾಳಿನಸ್ತಾನಾ ರ್‍ಹಾತಲಿ ಲೈ ಲೊಕಾ ಅಮ್ಚ್ಯಾ ಮದ್ದಿ ಹಾತ್, ಲೈ ಕರುನ್ ಜುದೆವಾಂಚ್ಯಾ ಘರಾನ್ಯಾತ್ನಾ ಪರಿರ್ವತನ್ ಹೊವ್ನ್ ಕ್ರಿಸ್ತಾಚ್ಯಾ ಫಾಟ್ನಾ ಯೆಲ್ಲೆ, ಎಕ್ಲ್ಯಾಕ್ನಿ ವಿರೊದ್ ಹೊವ್ಕ್ ಉಮ್ಮೆದ್ ಭರ್‍ತಲೆ, ಹೆನಿ ಸಗ್ಳೆ ಜಾನಾ ಪೊಕಳ್ ಗೊಸ್ಟಿಯಾನಿ ಲೊಕಾಕ್ನಿ ಮಳ್ಳ್ ಕರ್‍ತ್ಯಾತ್. ಅಧ್ಯಾಯವನ್ನು ನೋಡಿ |