Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 6:16 - ಕನ್ನಡ ಸತ್ಯವೇದವು C.L. Bible (BSI)

16-19 ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು, ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ; ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 6:16
34 ತಿಳಿವುಗಳ ಹೋಲಿಕೆ  

ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು I ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು II


ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.


ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.


ವಕ್ರಬುದ್ಧಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು.


ನ್ಯಾಯ ವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯವಾಗಿದ್ದಾರೆ.


ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.


ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ.


ಸರ್ವೇಶ್ವರ ಇಂತೆನ್ನುತ್ತಾರೆ: “ಮೋವಾಬಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣಮಾಡಿದ್ದಾರೆ.


ಸರ್ವೇಶ್ವರ ಇಂತೆನ್ನುತ್ತಾರೆ: ಎದೋಮ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ಸೋದರ ನಾಡಿನವರಾದ ಇಸ್ರಯೇಲರನ್ನು ಓಡಿಸಿದರು. ಅವರಿಗೆ ಕರುಣೆತೋರದೆ, ಕೊನೆಯವರೆವಿಗೂ ರೋಷವನ್ನೇ ಸಾಧಿಸಿದರು.


ಸರ್ವೇಶ್ವರ ಇಂತೆನ್ನುತ್ತಾರೆ: “ಟೈರ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಸೋದರಪ್ರೇಮದ ಒಡಂಬಡಿಕೆಯನ್ನು ಅವರು ಮರೆತುಬಿಟ್ಟರು. ಅವರು ಇಡೀ ರಾಷ್ಟ್ರವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ.


ಸರ್ವೇಶ್ವರ ಇಂತೆನ್ನುತ್ತಾರೆ: “ಗಾಜದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಇಡೀ ಜನಾಂಗವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ.


ಸರ್ವೇಶ್ವರ ಇಂತೆನ್ನುತ್ತಾರೆ: ದಮಸ್ಕದ ಜನರು ಪದೇಪದೇ ಮಾಡಿರುವ ದ್ರೋಹಗಳಿಗಾಗಿ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.


ಜಗತ್ತು ಮೂರು ವಿಷಯಗಳ ನಿಮಿತ್ತ ಕಂಪಿಸುತ್ತದೆ: ನಾಲ್ಕರ ನಿಮಿತ್ತವೂ ಹೊರೆ ತಾಳಲಾರದಂತೆ ಆಗುತ್ತದೆ:


ತಾರತಮ್ಯದ ತೂಕದ ಕಲ್ಲು ಸರ್ವೇಶ್ವರನಿಗೆ ಅಸಹ್ಯ; ಮೋಸದ ತಕ್ಕಡಿಯನ್ನು ಬಳಸುವುದು ಸರಿಯಲ್ಲ.


ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಪರಿಗ್ರಹಿಸಬಾರದು; ಅವಳು ಅಶುದ್ಧಳಾದವಳು; ಅವಳನ್ನು ಪುನಃ ಪರಿಗ್ರಹಿಸುವುದು ಸರ್ವೇಶ್ವರನಿಗೆ ಹೇಯಕಾರ್ಯ. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿಗೆ ದೋಷವುಂಟಾಗಲು ಅವಕಾಶಕೊಡಬೇಡಿ.


ಸೂಳೆತನದಿಂದಾಗಲಿ ಜಾರತ್ವದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಸರ್ವೇಶ್ವರನ ಮಂದಿರದೊಳಗೆ ತರಲೇಬಾರದು; ಈ ಎರಡೂ ಅವರಿಗೆ ಅಸಹ್ಯವಾದುವು.


ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ.


ಸರ್ವೇಶ್ವರ ಇಂತೆನ್ನುತ್ತಾರೆ: “ಜುದೇಯದ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಏಕೆಂದರೆ ಅವರು ನನ್ನ ಧರ್ಮಶಾಸ್ತ್ರವನ್ನು ತೃಣೀಕರಿಸಿದ್ದಾರೆ. ನನ್ನ ವಿಧಿನಿಯಮಗಳನ್ನು ಮೀರಿದ್ದಾರೆ. ಅವರ ಪೂರ್ವಜರು ಆರಾಧಿಸಿದ ಸುಳ್ಳುದೇವತೆಗಳನ್ನು ಪೂಜಿಸುತ್ತಾ ದಾರಿತಪ್ಪಿದ್ದಾರೆ.


ಗಂಭೀರ ಗಮನದ ಮೂರು ಪ್ರಾಣಿಗಳುಂಟು: ಹೌದು ಗಂಭೀರ ಗತಿಯ ನಾಲ್ಕನೆಯ ಪ್ರಾಣಿಯೂ ಉಂಟು:


ಕಳ್ಳ ಕಲ್ಲುತೂಕಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ.


ಆದರೆ ಅಶುದ್ಧವಾದುದು ಯಾವುದೂ ಅದನ್ನು ಸೇರಲಾರದು. ಅಂತೆಯೇ, ಹೇಯ ಕೃತ್ಯಗಳನ್ನೆಸಗುವವನೂ ಅಸತ್ಯವನ್ನು ಆಡುವವನೂ ಅದನ್ನು ಸೇರಲಾರನು. ಯಜ್ಞದ ಕುರಿಮರಿಯ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳು ಲಿಖಿತವಾಗಿವೆಯೋ ಅಂಥವರು ಮಾತ್ರ ಅದನ್ನು ಪ್ರವೇಶಿಸಬಲ್ಲರು.


ಚಿಕ್ಕವು ಆದರೂ ದೊಡ್ಡ ಜ್ಞಾನವುಳ್ಳ ನಾಲ್ಕು ಜಂತುಗಳುಂಟು:


ನನ್ನ ಅರಿವಿಗೆ ಬಾರದ ಮೂರು ವಿಷಯಗಳಿವೆ: ಹೌದು, ನನ್ನ ಬುದ್ಧಿಗೆ ಎಟುಕದವು ನಾಲ್ಕಿವೆ:


ಆದ್ದರಿಂದ ತಟ್ಟನೆ ಒದಗುವುದು ವಿಪತ್ತು ಮತ್ತೆ ಏಳಲಾಗದಂತಹ ಕಠಿಣ ಆಪತ್ತು.


ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು.


ನಿಮ್ಮಲ್ಲಿ ಯಾರೂ ನೆರೆಯವನಿಗೆ ಕೇಡು ಬಗೆಯದಿರಲಿ. ಸುಳ್ಳುಸಾಕ್ಷ್ಯಕ್ಕೆ ಎಂದೂ ಸಂತೋಷಿಸಬೇಡಿ. ಇದೆಲ್ಲ ನನಗೆ ಅಸಹ್ಯ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಮನಸ್ಸೆಯು ಯೆಹೂದ್ಯರನ್ನು ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡಲು ಪ್ರೇರಿಸಿದ್ದಲ್ಲದೆ, ನಿರಪರಾಧಿಗಳ ವಧೆಯಿಂದ ಜೆರುಸಲೇಮನ್ನೆಲ್ಲಾ ರಕ್ತಮಯವಾಗಿಸಿದನು.


ಐದಾರು ಇಕ್ಕಟ್ಟುಗಳಿಂದ ನಿನ್ನನು ಬಿಡಿಸುವನು ಏಳನೆಯದು ಬಂದರೂ ನಿನ್ನನು ಕೇಡು ಮುಟ್ಟದು.


ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ I ಭಕುತಿಯಿಂದ ಅಡ್ಡಬೀಳುವೆ ನಿನ್ನ ಪವಿತ್ರಾಲಯದತ್ತ II


ಮಿಥ್ಯವಾದಿಗಳು ಸರ್ವೇಶ್ವರನಿಗೆ ಹೇಸು; ಸತ್ಯವಾದಿಗಳು ಆತನಿಗೆ ಲೇಸು.


ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು