Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 5:16 - ಕನ್ನಡ ಸತ್ಯವೇದವು C.L. Bible (BSI)

16 ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ಒರತೆಗಳು ಬೈಲಿನಲ್ಲಿಯೂ ನಿನ್ನ ಕಾಲುವೆಗಳು ಚೌಕದಲ್ಲಿಯೂ ಹರಡಿ ಹರಿಯುವದು ವಿಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 5:16
13 ತಿಳಿವುಗಳ ಹೋಲಿಕೆ  

ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II


ಪ್ರಭುವಿನಿಂದ ಬಂದ ಸೊತ್ತು - ಪುತ್ರಸಂತಾನ I ಕರುಳ ಕುಡಿಯು ಆತ ನೀಡುವ ಬಹುಮಾನ II


ಆತ ಮರುಭೂಮಿಯಲ್ಲಿ ತನ್ನ ಜನರನ್ನು ನಡೆಸಿದಾಗ ಬಳಲಲಿಲ್ಲ ಅವರು ಬಾಯಾರಿಕೆಯಿಂದ; ಹರಿಸಿದನು ನೀರನ್ನು ಅವರಿಗಾಗಿ ಕಲ್ಲಿನೊಳಗಿಂದ ಜಲವಾಹಿನಿ ಹರಿಯಿತು ಆತ ಸೀಳಿದ ಬಂಡೆಯಿಂದ.


“ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು I “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು I


ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು. ತನ್ನ ಹೆಣ್ಣುಮಕ್ಕಳನ್ನು ಬೇರೆಯವರಿಗೆ ಕೊಟ್ಟು ಗಂಡುಮಕ್ಕಳಿಗಾಗಿ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು.


ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ ಯಕೋಬನ ಸಂತತಿಯೇ, ಸುರಕ್ಷಿತವಾಗಿ ಆಗಸದಿಂದ ಮಳೆಸುರಿಯುವ ನಾಡಿನಲ್ಲಿ ಧಾನ್ಯ, ದ್ರಾಕ್ಷಾರಸ ಸಮೃದ್ಧಿಯಾಗಿರುವಲ್ಲಿ!


“ಸಾವಿರ, ಹತ್ತು ಸಾವಿರ, ಸಂತತಿಯಾಗಲಿ, ಎಲೆ ತಂಗಿ ನಿನಗೆ; ವೈರಿಗಳ ನಗರಗಳು ಸ್ವಾಧೀನವಾಗಲಿ ನಿನ್ನ ಸಂತತಿಗೆ!”


ನಿನ್ನ ಸ್ವಂತ ಕೊಳದ ನೀರನ್ನೇ ಸೇವಿಸು, ನಿನ್ನ ಬಾವಿಯಿಂದ ಉಕ್ಕಿಬರುವ ಜಲವನ್ನೇ ಕುಡಿ.


ಅವು ನಿನಗೊಬ್ಬನಿಗೇ ಮೀಸಲಾಗಿರಲಿ; ನಿನ್ನೊಡನೆ ಬೇರೊಬ್ಬನ ಪಾಲಾಗದಿರಲಿ.


ನಿನ್ನ ಬುಗ್ಗೆ ದೇವರಿಂದ ಆಶೀರ್ವಾದಹೊಂದಲಿ, ನಿನ್ನ ಆನಂದ ನಿನ್ನ ಯೌವನಕಾಲದ ಹೆಂಡತಿಯಲ್ಲಿರಲಿ.


“ಕದ್ದ ನೀರು ಸಿಹಿ, ಗುಟ್ಟಾಗಿ ತಿನ್ನುವ ರೊಟ್ಟಿ ರುಚಿ” ಎಂದು ಬುದ್ಧಿಹೀನನಿಗೆ ಹೇಳುವಳು.


ನನ್ನ ಪ್ರಿಯಳು, ನನ್ನ ಮದಲಗಿತ್ತಿ ಸುಭದ್ರವಾದ ಉದ್ಯಾನವನ ಬೇಲಿಯೊಳಗಿನ ಬುಗ್ಗೆ ಮುಚ್ಚಿ ಮುದ್ರಿಸಿದ ಚಿಲುಮೆ.


ನಿನ್ನ ತೋಟಗಳಿಗೆ ಬೇಕಾದ ಬುಗ್ಗೆ, ಉಕ್ಕಿಬರುವ ಒರತೆ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ ನಲ್ಲೆ :


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು