Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 4:5 - ಕನ್ನಡ ಸತ್ಯವೇದವು C.L. Bible (BSI)

5 ಮರೆಯಬೇಡ, ನನ್ನ ಮಾತಿಗೆ ಓರೆಯಾಗಬೇಡ, ಜ್ಞಾನವನ್ನು ಪಡೆ. ವಿವೇಕವನ್ನು ಗಳಿಸಿಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಓರೆಯಾಗಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು; ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 4:5
17 ತಿಳಿವುಗಳ ಹೋಲಿಕೆ  

ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ.


ಅವನು ಎಡಕ್ಕಾಗಲಿ ಬಲಕ್ಕಾಗಲಿ ಹೋಗದೆ ತನ್ನ ಪೂರ್ವಜ ದಾವೀದನ ಮಾರ್ಗದಲ್ಲೇ ನೇರವಾಗಿ ಸರ್ವೇಶ್ವರನ ಚಿತ್ತಾನುಸಾರ ನಡೆದನು.


ಬುದ್ಧಿಯನ್ನು ಗಳಿಸುವವನು ತನಗೆ ತಾನೇ ಗೆಳೆಯನು; ವಿವೇಕವನ್ನು ಕಾಪಾಡುವವನು ಪಡೆಯುವನು ಏಳಿಗೆಯನ್ನು.


ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ!


ಮೂಢರೇ, ಕಲಿತುಕೊಳ್ಳಿ ಜಾಣತನವನ್ನು ಬುದ್ಧಿಹೀನರೇ, ಗ್ರಹಿಸಿರಿ ಸನ್ಮತಿಯನ್ನು.


ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ I ನಾವು ಅಗಲಲಿಲ್ಲ ನೀನು ತೋರಿದ ಮಾರ್ಗದಿಂದ II


ಸತ್ಯವನ್ನು, ಅಂದರೆ ಜ್ಞಾನ, ಸುಶಿಕ್ಷೆ, ವಿವೇಕ ಇವನ್ನು ಬೆಲೆಕೊಟ್ಟಾದರೂ ಕೊಂಡುಕೊ, ಮಾರಿಬಿಡಬೇಡ!


ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು.


ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು.


ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು I ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು II


ಹಾಸ್ಯ ಅಪಹಾಸ್ಯ ಮಾಡಿದರು ಗರ್ವಿಷ್ಠರೆನ್ನನು I ಆದರೂ ನಾ ಬಿಡಲಿಲ್ಲ ನಿನ್ನ ಧರ್ಮಶಾಸ್ತ್ರವನು II


ಆತನ ಹೆಜ್ಜೆಯ ಜಾಡಿನಲ್ಲೆ ನಾನು ಕಾಲಿಟ್ಟೆ ಓರೆಯಾಗದೆ ಆತನ ದಾರಿಯನ್ನೇ ಹಿಡಿದೆ.


ಮಗನೇ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿಡು.


ಜ್ಞಾನ ಪಡೆಯಬೇಕೆಂಬುದೇ ಜ್ಞಾನಬೋಧೆಯ ಮೂಲಾಂಶ; ನಿನ್ನ ಸರ್ವಸಂಪತ್ತಿನಿಂದ ವಿವೇಕವನ್ನು ಗಳಿಸಿಕೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು