Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 31:5 - ಕನ್ನಡ ಸತ್ಯವೇದವು C.L. Bible (BSI)

5 ಕುಡಿದರೆ ಕರ್ತವ್ಯವನ್ನು ಮರೆಯುತ್ತಾರೆ; ದೀನದಲಿತರಿಗೆ ನ್ಯಾಯ ತೀರಿಸದೆ ತಾರತಮ್ಯ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು, ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತು ಬಿಟ್ಟು ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅವರು ಅತಿಯಾಗಿ ಕುಡಿದು ಕಟ್ಟಳೆಗಳನ್ನು ಮರೆತು ಬಡವರ ಹಕ್ಕುಗಳನ್ನೆಲ್ಲ ರದ್ದುಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕುಡಿದರೆ ಅವರು ನಿಯಮವನ್ನು ಮರೆತು, ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 31:5
9 ತಿಳಿವುಗಳ ಹೋಲಿಕೆ  

ಐಶ್ವರ್ಯ ಮೋಸಕರ, ಮದವೇರಿದವನು ಮತ್ತನಾದವನಂತೆ ಅಸ್ಥಿರ. ಅವನ ಅತಿಯಾಸೆ ಪಾತಾಳದಷ್ಟು ವಿಶಾಲ. ಮೃತ್ಯುವಿನಂತೆ ಅವನಿಗೆ ತೃಪ್ತಿಯೇ ಇಲ್ಲ. ಸಕಲ ಜನಾಂಗಗಳನ್ನು ಬಲೆಯೊಳಗೆ ಎಳೆದುಕೊಳ್ಳುತ್ತಾನೆ. ಸಮಸ್ತ ಜನಾಂಗಗಳನ್ನು ರಾಶಿಮಾಡಿಕೊಳ್ಳುತ್ತಾನೆ.


“ನಿಮ್ಮಲ್ಲಿರುವ ಬಡವರು ನ್ಯಾಯಕೋರಿ ಬರುವಾಗ ಅವರಿಗೆ ನೀವು ನ್ಯಾಯ ತಪ್ಪಿಸಬಾರದು. ಮೋಸದ ಕಾರ್ಯದಿಂದ ದೂರವಿರಬೇಕು;


“ನೀನೂ ನಿನ್ನ ಪುತ್ರರು ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು, ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತ ನಿಯಮ.


“ನೀವು ನ್ಯಾಯವನ್ನು ಬಿಟ್ಟು ತೀರ್ಮಾನ ಮಾಡಬಾರದು; ಪಕ್ಷಪಾತ ಕೂಡದು; ಲಂಚ ತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನೂ ಕುರುಡರನ್ನಾಗಿಸುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ.


ತನ್ನ ರಾಜರುಗಳ ಸಂಗಡ ಡೇರೆಗಳಲ್ಲಿ ಮದ್ಯಪಾನಮಾಡುತ್ತಿದ್ದ ಬೆನ್ಹದದನು ಈ ಉತ್ತರವನ್ನು ಕೇಳುತ್ತಲೇ, ಪಟ್ಟಣಕ್ಕೆ ಲಗ್ಗೆ ಹತ್ತುವಂತೆ ಸೈನಿಕರಿಗೆ ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು.


ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.


ದುಷ್ಟನಿಗೆ ಪಕ್ಷಪಾತ ತೋರುವುದು ಸಲ್ಲ; ಸಜ್ಜನನಿಗೆ ನ್ಯಾಯ ತಪ್ಪಿಸುವುದು ಸರಿಯಲ್ಲ.


ಸುರಾಪಾನದಲ್ಲಿ ಶೂರರಾಗಿ, ಮದ್ಯಮಿಶ್ರಣದಲ್ಲಿ ಸಾಹಸಿಗಳಾಗಿ ಇರುವವರಿಗೆ ಧಿಕ್ಕಾರ !


ಲಂಚಕ್ಕೋಸ್ಕರ ನಿರ್ದೋಷಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿ ವಂಚಿಸುವವರಿಗೆ ಧಿಕ್ಕಾರ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು