Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 30:13 - ಕನ್ನಡ ಸತ್ಯವೇದವು C.L. Bible (BSI)

13 ಮೇಲಿಂದ ಮೇಲಕ್ಕೆ ದೃಷ್ಟಿಸಿ ನೋಡುವ, ಠೀವಿಯಿಂದ ಕಣ್ಣುರೆಪ್ಪೆಗಳನ್ನೇರಿಸುವ ಜನರುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಕಣ್ಣು ರೆಪ್ಪೆಗಳನ್ನೆತ್ತಿಕೊಂಡು ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಕೆಲವರು ಬಹಳ ದುರಾಭಿಮಾನಿಗಳಾಗಿದ್ದಾರೆ. ತಾವು ಬೇರೆಯವರಿಗಿಂತ ಎಷ್ಟೋ ಉತ್ತಮರೆಂಬುದು ಅವರ ಭಾವನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ. ಅವರ ದೃಷ್ಟಿ ಅಸಹ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 30:13
12 ತಿಳಿವುಗಳ ಹೋಲಿಕೆ  

ಜನಸಾಮಾನ್ಯರ ಅಟ್ಟಹಾಸವನ್ನು ಅಡಗಿಸಲಾಗುವುದು, ಪ್ರಮುಖರ ಗರ್ವ ಕಮರಿಹೋಗುವುದು, ಸ್ವಾಮಿ ಮಾತ್ರ ಅಂದು ಉನ್ನತೋನ್ನತವಾಗಿರುವರು.


ಹಮ್ಮಿಲ್ಲ ಪ್ರಭು, ನನ್ನೆದೆಯೊಳು I ನನಗಿಲ್ಲ ಸೊಕ್ಕಿನ ಕಣ್ಣುಗಳು II ಶಕ್ತಿಮೀರಿದ ಕಾರ್ಯಕೆ ನಾ ಕೈ ಹಾಕಿಲ್ಲ I ಅಸಾಧ್ಯವಾದುದನು ನಾ ಕೈಗೊಂಡಿಲ್ಲ II


ಸಂಹರಿಸುವೆನು ನೆರೆಯವನ ಮೇಲೆ ಅಪವಾದ ಹೊರಿಸುವವನನು I ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ ಉಳ್ಳಂಥವನನು II


ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.


ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ!


ಸ್ವಾಮಿ ಇಂತೆನ್ನುತ್ತಾರೆ: ಸಿಯೋನಿನ ಮಹಿಳೆಯರ ಒನಪು ಒಯ್ಯಾರಗಳನ್ನು ನೋಡಿರಿ. ಅವರು ಕತ್ತುತೂಗುತ್ತಾ, ಕಡೆಗಣ್ಣು ಹಾಕುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ.


ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.


ನರಮಾನವರು ತಗ್ಗಿಹೋಗುವರು. ಕುಲೀನರು ಕುಗ್ಗಿಹೋಗುವರು. ಗರ್ವಿಷ್ಠರ ಸೊಕ್ಕು ಅಡಗಿಹೋಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು