Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 3:32 - ಕನ್ನಡ ಸತ್ಯವೇದವು C.L. Bible (BSI)

32 ವಕ್ರಬುದ್ಧಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಏಕೆಂದರೆ ವಕ್ರಬುದ್ಧಿ ಯೆಹೋವ ದೇವರಿಗೆ ಅಸಹ್ಯ; ಆದರೆ ದೇವರ ನಂಬಿಗಸ್ತಿಕೆ ನೀತಿವಂತರೊಂದಿಗೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 3:32
16 ತಿಳಿವುಗಳ ಹೋಲಿಕೆ  

ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ I ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ II


ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.


ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.


ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ.


ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.


ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.


ಆ ಸಮಯದಲ್ಲಿ ಯೇಸುಸ್ವಾಮಿ, “ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ.


ಶುದ್ಧನಿಗಾತ ಪರಿಶುದ್ಧನು I ಮೂರ್ಖನಿಗಾತ ಮಹಾವಕ್ರನು II


ಆ ದಿನಗಳು ನನ್ನ ಜೀವಮಾನದ ಸುಗ್ಗಿಕಾಲವಾಗಿತ್ತು ದೇವರ ಪ್ರೀತಿ ನನ್ನ ಗುಡಾರವನ್ನು ಆವರಿಸಿತ್ತು.


“ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಜಯಹೊಂದಿದವನಿಗೆ ಮರೆಯಾಗಿರುವ ಮನ್ನವನ್ನು ನಾನು ದಯಪಾಲಿಸುತ್ತೇನೆ. ಇದಲ್ಲದೆ, ಆತನಿಗೆ ಒಂದು ಬಿಳಿಯ ಕಲ್ಲನ್ನು ನಾನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಒಂದು ಹೊಸ ಹೆಸರನ್ನು ಕೆತ್ತಲಾಗಿರುತ್ತದೆ. ಆ ಕಲ್ಲನ್ನು ಸ್ವೀಕರಿಸಿದವನಿಗೇ ಹೊರತು ಮತ್ಯಾರಿಗೂ ಆ ಹೆಸರು ತಿಳಿಯದು.


ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು,” ಎಂದರು.


ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.


ದೇವರ ಚಿತ್ತದಂತೆ ನಡೆಯಲು ಮನಸ್ಸು ಉಳ್ಳವನಿಗೆ, ನಾನು ಬೋಧಿಸುವುದು ದೇವರಿಂದ ಬಂದುದೋ ಅಥವಾ ನನ್ನ ಸ್ವಂತ ಕಲ್ಪನೆಯೋ ಎಂಬುದು ತಿಳಿಯುತ್ತದೆ.


ಇಗೋ, ನೀವು ಶೂನ್ಯರೇ ಸರಿ, ನಿಮ್ಮ ಕಾರ್ಯವು ವ್ಯರ್ಥವೇ, ಸರಿ ನಿಮ್ಮನ್ನು ಮರೆಹೋಗುವವರು ತುಚ್ಛರೇ ಸರಿ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು